ಧಾರವಾಡ:ಕರೊನಾ ವಿರುದ್ಧದ ಸಮರದಲ್ಲಿ ವೈದ್ಯರ ಆರೋಗ್ಯದ ಸುರಕ್ಷತೆಗೆ ಅಗತ್ಯವಾಗಿರುವ ವೈಯಕ್ತಿಕ ಸುರಕ್ಷಾ ಸಾಧನದ ಮುಖ್ಯ ಭಾಗವಾಗಿರುವ ಮುಖ ಕವಚ (ಫೇಸ್ ಶೀಲ್ಡ್)ವನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ದೇಶೀಯವಾಗಿ ಸಿದ್ಧಪಡಿಸಿದೆ. ಐಐಟಿ ಪ್ರಾಧ್ಯಾಪಕರು, ನಗರದ ಕೆಲ ಸ್ವಯಂ ಸೇವಕರು ಸೇರಿ ಕಿಮ್್ಸ ಆಸ್ಪತ್ರೆ ವೈದ್ಯರ ಬೆಂಬಲದೊಂದಿಗೆ 500 ಮುಖ ಕವಚ ಸಿದ್ಧಪಡಿಸಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ವೈದ್ಯರಿಗೆ ಅಗತ್ಯ ವಸ್ತು ಪೂರೈಸುವುದೇ ಸವಾಲಾಗಿತ್ತು. ಇದೇ ಕಾರಣಕ್ಕೆ ಮುಖಕವಚ ಸಿದ್ಧಪಡಿಸುವ ಕುರಿತು ಕಿಮ್್ಸ ಆಸ್ಪತ್ರೆ ಹಾಗೂ ಐಐಟಿ ನಡುವೆ ಒಪ್ಪಂದವಾಗಿತ್ತು.
ಐಐಟಿಯ ಶೇ.10 ಪ್ರಾಧ್ಯಾಪಕರ ತಂಡ ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಅನುಸಾರ 3ಡಿ ಮುದ್ರಣ ತಂತ್ರಜ್ಞಾನ ಬಳಸಿ ಬೇರೆ ಬೇರೆ ಮಾದರಿಯ 8 ಮುಖ ಕವಚ ಸಿದ್ಧಪಡಿಸಿ ಕಿಮ್ಸ್​ಗೆ ನೀಡಿತ್ತು. ವೈದ್ಯರು ಅವುಗಳನ್ನು ಪರೀಕ್ಷಿಸಿ ಒಂದು ಮಾದರಿಯನ್ನು ಅಂತಿಮಗೊಳಿಸಿದ್ದರು. ಇದೀಗ ಅದೇ ಮಾದರಿಯ 500 ಕವಚಗಳು ಐದೇ ದಿನಗಳಲ್ಲಿ ಸಿದ್ಧವಾಗಿವೆ.
ಲಾಭವೇನು?:ಈ ಕವಚ ಕೆಮ್ಮು ಅಥವಾ ಸೀನಿನ ಮೂಲಕ ಹೊರಬರುವ ಉಸಿರಾಟದ ಹನಿಗಳ ವಿರುದ್ಧ ತಡೆಗೋಡೆಯಾಗಿ ಕಾರ್ಯ ನಿರ್ವಹಿಸುತ್ತದೆ. ಸೋಂಕಿತ ವ್ಯಕ್ತಿಗಳ ತಪಾಸಣೆ ನಡೆಸುವ ವೈದ್ಯರು, ನರ್ಸ್​ಗಳು ಹಾಗೂ ಇತರರು ಈ ಕವಚವನ್ನು ತಮ್ಮ ಕನ್ನಡಕ ಮತ್ತು ಫೇಸ್ ಮಾಸ್ಕ್ ಮೇಲೆ ಸಹ ಧರಿಸಬಹುದಾಗಿದೆ!
ಕವಚದ ತಯಾರಿಕೆಗೆ ಕಚ್ಚಾ ವಸ್ತುಗಳ ಸಂಗ್ರಹ ಸವಾಲಾಗಿತ್ತು. ಆಗ ಅವರೊಂದಿಗೆ ನಗರದ ಕೆಲ ಸ್ವಯಂ ಸೇವಕರು, ಕಚ್ಚಾ ವಸ್ತುಗಳನ್ನು ಶೀಘ್ರವಾಗಿ ಐಐಟಿ ಪ್ರೊಫೆಸರ್​ಗಳಿಗೆ ದೊರಕಿಸಿಕೊಡಲು ನೆರವಾದರು. ಈ ಕವಚಗಳು ಹಗುರ ಮತ್ತು ಸರಳ ವಿನ್ಯಾಸದ್ದಾಗಿವೆ. ಸುಲಭವಾಗಿ ದೊರೆಯುವ ಸಾಮಗ್ರಿಗಳನ್ನೇ ಉಪಯೋಗಿಸಲಾಗಿದೆ. ಬೆಳಗಾವಿ, ಕಲಬುರಗಿ ಜಿಲ್ಲೆ ಸೇರಿ ಇತರ ಕಡೆಗಳಿಂದ ಸಹ ಹೆಚ್ಚಿನ ಬೇಡಿಕೆ ಇದೆ. ಆದರೆ ಅವುಗಳನ್ನು ಸಿದ್ಧಪಡಿಸಿ ಪೂರೈಸುವುದು ಸುಲಭವಲ್ಲ. ಸ್ಥಳೀಯರೇ ಕಲಿತು ಇವುಗಳನ್ನು ನಿರ್ವಿುಸಬಹುದು ಎನ್ನುತ್ತಾರೆ ಐಐಟಿ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗದ ಪ್ರೊ. ಸೂರ್ಯ ಪ್ರಕಾಶ.
ನಾವು ಸಿದ್ಧಪಡಿಸಿದ್ದರಲ್ಲಿ ಒಂದು ಮಾದರಿಯನ್ನು ಕಿಮ್್ಸ ವೈದ್ಯರು ಆಯ್ಕೆ ಮಾಡಿದ್ದರು. ನಂತರ ಅದೇ ಮಾದರಿಯ 500 ಕವಚ ನೀಡಲಾಗಿದೆ. ವಿವಿಧ ಜಿಲ್ಲೆಯ ಆಸ್ಪತ್ರೆಗಳಿಂದಲೂ ಬೇಡಿಕೆ ಬರುತ್ತಿದೆ. ಆದರೆ ಕಚ್ಚಾ ವಸ್ತು ಸಂಗ್ರಹ ಕಷ್ಟಕರವಾಗಿದೆ. ಹೀಗಾಗಿ ಇತರ ಕಡೆಗಳ ಬೇಡಿಕೆಗೆ ಒಪ್ಪಿಗೆ ನೀಡಿಲ್ಲ. ಆದರೆ, ಅಗತ್ಯ ಇರುವವರು ನಮ್ಮನ್ನು (ಟ್ಟಟಃಜಿಜಿಠಿಛಜ.ಚ್ಚ.ಜ್ಞಿ) ಸಂರ್ಪಸಿದರೆ, ಮಾಸ್ಕ್ ತಯಾರಿಕಾ ವಿಧಾನಗಳನ್ನು ತಿಳಿಸಿಕೊಡಲಾಗುವುದು.
| ಪ್ರೊ. ಸೋಮಶೇಖರ ಎಂ.ಎ.,
ಐಐಟಿ ಯಾಂತ್ರಿಕ ಎಂಜಿನಿಯರಿಂಗ್ ವಿಭಾಗ ಕಾರ್ಯ ನಿರ್ವಹಿಸಿದ ತಂಡ
ಮುಖ ಕವಚ ಸಿದ್ಧಪಡಿಸುವಲ್ಲಿ ಐಐಟಿ ಯಾಂತ್ರಿಕ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್​ಗಳಾದ ಸೋಮಶೇಖರ ಎಂ.ಎ, ಸೂರ್ಯ ಪ್ರಕಾಶ, ಅಮರ ಗಾಂವಕರ, ಸುಧೀರ, ಸಮರ್ಥ, ಕೇದಾರ್, ಸತೀಶ, ರಾಮಚಂದ್ರನ್, ಆನಂದ, ಶ್ರೀಕಾಂತ ವಿ. ಹಾಗೂ ಅನೇಕರು ಮತ್ತು ರಾಷ್ಟ್ರೋತ್ಥಾನ ಶಾಲೆಯ ಕಾರ್ಯಕರ್ತರು ಕೈ ಜೋಡಿಸಿದ್ದಾರೆ. ಗುವಾಹಟಿ ಐಐಟಿಯ ಡಾ. ಸುರದೀಪ ದಾಸ್ ಅವರು ಅಗತ್ಯ ಮಾರ್ಗದರ್ಶನ ಹಾಗೂ ಸಲಹೆ ನೀಡಿದ್ದಾರೆ.
| ವಿಕ್ರಮ ನಾಡಿಗೇರ
ರಾಜ್ಯಾದ್ಯಂತ ಲಕ್ಷ ಆಪ್ತರಕ್ಷಕರು ಕರೊನಾ ವಿರುದ್ಧದ ಸಮರದಲ್ಲಿ ಭಾಗಿ!: ಸೋಂಕಿತರ ಆರೈಕೆಗಾಗಿ ಊಟ, ತಿಂಡಿ, ನಿದ್ರೆ ತ್ಯಾಗ |

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
