ಬೆಂಗಳೂರು:ಹೆಸರೇ ಸೂಚಿಸುವಂತೆ ಇದು ‘ಧೈರ್ಯಂ ಸರ್ವತ್ರ ಸಾಧನಂ’ ಎಂದು ಎಲ್ಲವನ್ನೂ ಧೈರ್ಯದಿಂದಲೇ ಎದುರಿಸಿ, ಮುಂದಡಿ ಇಟ್ಟವರ ಕಥೆ. ಅಂಥ ನೈಜ ಕಥೆಗಳ ಹೂರಣವಿರುವ ಈ ಕೃತಿಯ ಹೆಸರು ‘ಧೃತಿಗೆಡದ ಹೆಜ್ಜೆಗಳು’. ನಾಳೆಯೇ ಇದರ ಅನಾವರಣಗೊಳ್ಳಲಿದೆ. ಕಾರಣ, ಈ ಕಥೆಯಲ್ಲಿ ಬರುವ ದಿಟ್ಟೆಯರೆಲ್ಲ ಸ್ತ್ರೀಯರೇ ಆಗಿರುವುದರಿಂದ ಅಂತಾರಾಷ್ಟ್ರೀಯ ಮಹಿಳಾ ದಿನವಾದ ನಾಳೆ ಈ ಕೃತಿಯ ಲೋಕಾರ್ಪಣೆ ಆಗಲಿದೆ.
‘ಧೃತಿ ಮಹಿಳಾ ಮಾರುಕಟ್ಟೆ’ ಎಂಬ ಫೇಸ್​ಬುಕ್ ಗುಂಪಿನ ಸಹಾಯದಿಂದ ಮಹಿಳೆಯರದ್ದೇ ಆದ ಆನ್​ಲೈನ್​ ಮಾರುಕಟ್ಟೆ ಮೂಲಕ, ಎರಡು ವರ್ಷಗಳ ಅವಧಿಯಲ್ಲಿ ನೂರಾರು ಮಹಿಳೆಯರು ತಮ್ಮನ್ನು ಗುರುತಿಸಿಕೊಂಡು, ತಮ್ಮ ಕೌಶಲ್ಯಗಳನ್ನು ಪರೀಕ್ಷೆಗೊಡ್ಡಿ ತಮ್ಮ ಮತ್ತು ತಮ್ಮವರ ಬದುಕನ್ನು ಇನ್ನಷ್ಟು ಹಸನಾಗಿಸಲು ಸಮರ್ಥರಾದರು. ಮನೆಯಲ್ಲೇ ಕೂತು ತಯಾರಿಸಿದ ವಸ್ತುಗಳನ್ನು ಆಹಾರ ಪದಾರ್ಥಗಳನ್ನು ಆನ್​​ಲೈನ್​​ ಮೂಲಕ ಮಾರಾಟ ಮಾಡಿ ಯಶಸ್ಸು ಗಳಿಸಿದರು. ಬದುಕಲ್ಲಿ ಒಂದು ಬಾರಿಯೂ ಇಂಟರ್​ನೆಟ್​​ನತ್ತ ಮುಖ ನೋಡದವರೂ ಈ ಮಾರುಕಟ್ಟೆಯ ಸಹಾಯದಿಂದ ಲಕ್ಷಾಂತರ ರೂಪಾಯಿಗಳ ವ್ಯಾಪಾರ ವಹಿವಾಟು ಮಾಡಿದರು.
ಅಂಥವರಲ್ಲಿ ಆಯ್ದ 33 ಮಹಿಳೆಯರ ಯಶಸ್ಸಿನ ಕಥೆಗಳನ್ನು ಒಳಗೊಂಡ ಪುಸ್ತಕವೇ ‘ಧೃತಿಗೆಡದ ಹೆಜ್ಜೆಗಳು’. ‘ಧೃತಿ ಮಹಿಳಾ ಮಾರುಕಟ್ಟೆ’ಯಿಂದ ಪ್ರಕಟಗೊಂಡಿರುವ ಈ ಕೃತಿಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬೆಂಗಳೂರಿನ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ ಸಭಾಭವನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಪ್ರಸಿದ್ಧ ಅಂಕಣಕಾರ, ವಾಗ್ಮಿ ಹಾಗೂ ರಮಣಶ್ರೀ ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥರಾದ ಎಸ್. ಷಡಕ್ಷರಿ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಕ್ವಿಇನ್ ಫ್ರಾ ಸೊಲ್ಯೂಶನ್ಸ್​​ನ ನಿರ್ದೇಶಕರಾಗಿರುವ ಕಿರಣ್ ಪ್ರಸಾದ್ ರಾಜನಹಳ್ಳಿ, ಸುಕೋ ಬ್ಯಾಂಕ್ ನಿರ್ದೇಶಕ, ಮಲೆನಾಡು ನಟ್ಸ್ ಆ್ಯಂಡ್​ ಸ್ಪೇಸ್ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರೂ ಆಗಿರುವ ಮನೋಹರ ಮಸ್ಕಿ, ದೂರದರ್ಶನದ ಹಿರಿಯ ಕಾರ್ಯಕ್ರಮ ನಿರೂಪಕಿ ಆರತಿ ಹೆಚ್.ಎನ್, ಎಂಡಿಪಿ ಕಾಫಿ ಹೌಸ್ ಮುಖ್ಯಸ್ಥ ಮಹದೇವ ಪ್ರಸಾದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರೊನಾ ಕಾಲದಲ್ಲಿ ಬಹಳಷ್ಟು ಜನರ ಬದುಕು ಅತಂತ್ರವಾಗಿತ್ತು. ಸಾಕಷ್ಟು ಜನರು ತಮ್ಮ ಕೆಲಸಗಳನ್ನು ಕಳೆದುಕೊಂಡರು. ಹಿಂದೆ ಮುಂದಿಲ್ಲದ ರೋಗವೊಂದು ಇದ್ದಕ್ಕಿದ್ದಂತೆ ಇಡೀ ಪ್ರಪಂಚವನ್ನೇ ತನ್ನ ಭಯದ ತೆಕ್ಕೆಗೆ ಬೀಳಿಸಿತ್ತು. ಆ ಸಂದರ್ಭದಲ್ಲಿ ರಾಜ್ಯದ ಮೂಲೆಮೂಲೆಗಳ ಹೆಂಗಳೆಯರು ಬಲ ಒಗ್ಗೂಡಿಸಿ ಎದ್ದು ನಿಂತು, ತಮ್ಮ ಕಾಲ ಮೇಲೆ ತಾವು ನಿಲ್ಲುವಂತಾಗಲಿ, ದುಡಿಮೆಯ ಅನಂತ ಸಾಧ್ಯತೆಗಳನ್ನು ಗುರುತಿಸುವಂತಾಗಲಿ ಎನ್ನುವ ಧೈಯದೊಂದಿದೆ ಮೇ 2020ರಂದು ‘ಧೃತಿ ಮಹಿಳಾ ಮಾರುಕಟ್ಟೆ’ ಎಂಬ ಫೇಸ್​ಬುಕ್ ಗುಂಪೊಂದು ಹುಟ್ಟಿಕೊಂಡಿತು. ಇಂದು ಈ ಗ್ರೂಪಿನಲ್ಲಿ ನಲವತ್ತು ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
