ಬೆಂಗಳೂರು:ಸ್ಯಾಂಡಲ್​​ವುಡ್​​ ನಟ ಧ್ರುವ ಸರ್ಜಾ ಗೆಳೆಯನ ಹುಟ್ಟುಹಬ್ಬಕ್ಕೆ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ದುಬಾರಿ ಉಡುಗೊರೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​​ ಆಗಿದೆ.
ಧ್ರುವ ಸರ್ಜಾ, ತಮ್ಮ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಅಶ್ವಿನ್ ಹುಟ್ಟುಹಬ್ಬಕ್ಕೆ 52 ಲಕ್ಷ ರೂ. ಮೌಲ್ಯದ ಟೊಯೋಟಾ ಫಾರ್ಚುನರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ವಿಡಿಯೋದಲ್ಲಿ ಏನಿದೆ?:ಅಶ್ವಿನ್ ಹುಟ್ಟುಹಬ್ಬದಂದು ಗೆಳೆಯನನ್ನು ಕರೆದುಕೊಂಡು ಹೋಗಿ ಆಶ್ಚರ್ಯವಾಗುವಂತೆ ಗಿಫ್ಟ್ ಆಗಿ ಕಾರನ್ನು ನೀಡಿದ್ದಾರೆ. ಅಶ್ವಿನ್  ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ಆವರ ತಂದೆ ನಿಧನರಾಗಿದ್ದಾರೆ. ಕಾರಿನ ಜೊತೆಗೆ ಅಶ್ವಿನ್ ಅವರಿಗೆ ಮರೆಯಲಾದ ಫೋಟೋವನ್ನು ಗಿಫ್ಟ್ ಆಗಿ ನೀಡಿದ್ದಾರೆ. ಅಶ್ವಿನ್​ರ ಅಪ್ಪ-ಅಮ್ಮನ ಹಳೆಯ ಫೋಟೋವನ್ನು ಹುಡುಕಿ ಅದನ್ನು ಕಾರಿನ ಒಳಗೆ ಇರಿಸಿದ್ದಾರೆ. ಗೆಳೆಯ ಧ್ರುವ ಕೊಟ್ಟ ಈ ಉಡುಗೊರೆ ಕಂಡು ಅಶ್ವಿನ್ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಬಳಿಕ ಕೇಕ್ ಕತ್ತರಿಸಿ ಗೆಳೆಯ ಹುಟ್ಟುಹಬ್ಬ ಆಚರಿಸಿದರು.


A post shared by druva sarja bidar fans🔵 (@dhruva_sarjas)
ಧ್ರುವ ಸರ್ಜಾ ಸದ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಕೆಲಸಗಳ ಜೊತೆಗೆ ಆಗಾಗ ಮಾನವೀಯ ಕೆಲಸಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ.
ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − three =
Remember me
