ಬೆಂಗಳೂರು:ಚಿತ್ರಮಂದಿರಗಳಲ್ಲಿ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಕೇಂದ್ರ ಸರ್ಕಾರ ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರ ಹಿಂಪಡೆದ ಬೆನ್ನಲ್ಲೇ ಸ್ಯಾಂಡಲ್​ವುಡ್​ನ ಆ್ಯಕ್ಷನ್​ ಪ್ರಿನ್ಸ್​ ಧ್ರುವ ಸರ್ಜಾ ಆಕ್ರೋಶ ಹೊರಹಾಕಿದ್ದಾರೆ.
ಕರೊನಾ 2ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಪರಿಷ್ಕೃತ ಮಾರ್ಗಸೂಚಿಯು ಫೆ.28ರವರೆಗೆ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೂ ಚಿತ್ರ ಮಂದಿರಗಳಲ್ಲಿ ಶೇ.50 ಪ್ರೇಕ್ಷಕರಿಗಷ್ಟೇ ಅವಕಾಶ ನೀಡಬೇಕಿದೆ. ಯಾವುದೇ ಕಾರಣಕ್ಕೂ ಶೇ.100 ಪ್ರೇಕ್ಷಕರ ಪ್ರವೇಶಕ್ಕೆ ಅನುಮತಿ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ನಿರ್ಧಾರವನ್ನು ಪ್ರಶ್ನಿಸಿರುವ ಧ್ರುವ ಸರ್ಜಾ, ‘ಬಸ್​ನಲ್ಲಿ ಫುಲ್ ರಶ್, ಮಾರ್ಕೆಟ್​ನಲ್ಲಿ ಗಿಜಿ ಗಿಜಿ, ಚಿತ್ರಮಂದಿರಕ್ಕೆ ಮಾತ್ರ ಏಕೆ ಶೇ.50 ನಿರ್ಬಂಧ?’ ಎಂದಿದ್ದಾರೆ.
ಟ್ವಿಟರ್​ನಲ್ಲಿ ಈ ಬಗ್ಗೆ ಪ್ರಶ್ನೆ ಮಾಡಿರುವ ಧ್ರುವ ಸರ್ಜಾ, ರಿಕ್ವೆಸ್ಟ್ ಫುಲ್ ಅಕ್ಯುಪೆನ್ಸಿ ಅಂತ ಹ್ಯಾಶ್ ಟ್ಯಾಗ್ ಹಾಕಿಕೊಂಡು ಕರ್ನಾಟಕ ಸಿಎಂ, ಡಿಸಿಎಂ ಅಶ್ವತ್ಥನಾರಾಯಣ್ ಮತ್ತು ಸಚಿವ ಡಾ.ಕೆ. ಸುಧಾಕರ್​ಗೆ ಟ್ವೀಟ್​ನ್ನು ಟ್ಯಾಗ್ ಮಾಡಿಕೊಂಡಿದ್ದಾರೆ.ಇದನ್ನೂ ಓದಿರಿಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ
ಕರೊನಾ ಆತಂಖದ ನಡುವೆ ಎಲ್ಲದಕ್ಕೂ ಅವಕಾಶ ಮಾಡಿಕೊಡಲಾಗಿದೆ. ಆದರೆ ಚಿತ್ರಮಂದಿರಗಳಿಗೆ ಮಾತ್ರ ನಿರ್ಬಂಧ ವಿಧಿಸಲಾಗಿದೆ ಎಂದು ಸಿನಿಮಾ ಕೇತ್ರದಲ್ಲೂ ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರದ ನಿಲುವು ಖಂಡಿಸಿ ಪಶ್ನೆ ಮಾಡಿದ ನಟ ಧ್ರುವ ಸರ್ಜಾರ ಟ್ವೀಟ್​ಗೆ ಬಹುತೇಕರು ಧ್ವನಿ ಗೂಡಿಸಿದ್ದಾರೆ. ನಿರ್ದೇಶಕ ಎ.ಪಿ. ಅರ್ಜುನ್, ನಿರ್ಮಾಪಕ ಕಾರ್ತಿಕ್ ಕೂಡ ಈ ಟ್ವೀಟ್​ ಅನ್ನು ಶೇರ್​ ಮಾಡಿಕೊಂಡಿದ್ದಾರೆ.
@drashwathcn@CMofKarnataka@mla_sudhakar#KFIrequestsfulloccupancypic.twitter.com/S7rxIUlAPM
— Dhruva Sarja (@DhruvaSarja)February 3, 2021

ಇನ್ನು ಫೆ.19ಕ್ಕೆ ‘ಪೊಗರು’ ಸಿನಿಮಾ ರಿಲೀಸ್ ಆಗುತ್ತಿದ್ದು, ರಾಜ್ಯ ಸರ್ಕಾರದ ಈ ನಿಲುವು ಸಿನಿಮಾಗೆ ದೊಡ್ಡ ಪೆಟ್ಟನ್ನೇ ನೀಡಬಹುದು.ಇನ್ನು ಧ್ರುವ ಸರ್ಜಾರ ಈ ಟ್ವೀಟ್​ಗೆ ನೂರಾರು ಮಂದಿ ಧ್ವನಿಗೂಡಿಸಿದ್ದು, ‘ಈ ಕಾನೂನು ಸಿನಿಪ್ರಿಯರಿಗೆ ಖಂಡಿತಾ ಅನ್ಯಾಯ.
ಚಿತ್ರಮಂದಿರದಲ್ಲಿ ಶೇ.100 ಪ್ರೇಕ್ಷಕರ ಆಸನದೊಂದಿಗೆ ತೆರೆಯಲು ಅವಕಾಶ ನೀಡಬೇಕು… ರಾಜಕೀಯ ಪ್ರಚಾರದ ವೇಳೆ ಸಾವಿರಾರು ಜನ ಸೇರಬಹುದು, ಆದರೆ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಕಲು ಹೆಚ್ಚು ಜನ ಸೇರಬಾರದೆ? ಇದು ಯಾವ ನ್ಯಾಯ?. ದೇವ್ರು ಕೊಟ್ರು ಪೂಜಾರಿ ಕೊಡಲಿಲ್ಲ ಅನ್ನೋ ತರ ಆಯ್ತು… ಅಲ್ಲಿ ಸರ್ಕಾರಕ್ಕೆ ಆದಾಯ ಬರಲ್ಲ ಅಲ್ಲ… ಅದಕ್ಕೆ ಈ ರೂಲ್ಸ್​… ಎಂದೆಲ್ಲ ಕಮೆಂಟ್ಸ್​ ಹಾಕುತ್ತಾ ಸರ್ಕಾರವನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಕರ್ನಾಟಕದ ಈ ಊರಲ್ಲಿ 150 ಎಕರೆ ಜಮೀನು ಫ್ರೀ! ಸಿಕ್ಕಷ್ಟು ಜಾಗಕ್ಕೆ ಬೇಲಿ ಹಾಕಿದ ಜನ

ಮಾಜಿ ಸಿಎಂ ದಿ. ಧರ್ಮಸಿಂಗ್ ಸಂಬಂಧಿಯನ್ನ ಕೊಂದವ ತಿರುಪತಿಯಲ್ಲಿ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 9 =
Remember me
