ಚಿತ್ರದುರ್ಗ:ರಾಜ್ಯದ 23 ಜಿಲ್ಲಾ ಸರ್ಕಾರಿ ಆಸ್ಪತ್ರೆ ಹಾಗೂ ತಾಲೂಕ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಿಸುತ್ತಿದ್ದ ಗುತ್ತಿಗೆ ಕಂಪನಿಗೆ ರಾಜ್ಯಸರ್ಕಾರ ನೋಟಿಸ್ ಕೊಡಲು ಸಿದ್ಧತೆ ನಡೆಸಿದೆ. ಕರೊನಾ ಸಂಕಷ್ಟ ಆರಂಭದ ಮೊದಲೇ ಈ ಕೇಂದ್ರಗಳ ನಿರ್ವಹಣೆ ಕುರಿತಂತೆ ಸಾಕಷ್ಟು ಅಸಮಾಧಾನದ ದನಿ ಕೇಳಿಬಂದಿತ್ತು.
ಡಯಾಲಿಸಿಸ್‌ಗೆ ಅಗತ್ಯ ಔಷಧ,ಉಪಕರಣಗಳನ್ನು ತರುವಂತೆ ಹೇಳುತ್ತಿದ್ದರಿಂದಾಗಿ ಬಡ ರೋಗಿಗಳು ಪರದಾಡುವಂತಾಗಿತ್ತು. ಸರ್ಕಾರ ಅಂದಾಜು ೨೦ ಕೋಟಿ ರೂ.ಪಾವತಿಸಬೇಕಿದ್ದು,ನಿರ್ವಹಣೆ ಕಷ್ಟವಾಗುತ್ತಿದೆ ಎಂದು ಕೇಂದ್ರಗಳಲ್ಲಿದ್ದ ಸಿಬ್ಬಂದಿ ಹೇಳುತ್ತಿದ್ದಾರೆ ಎಂದು ರೋಗಿಗಳು ತಿಳಿಸಿದ್ದರು. ರೋಗಿಗಳಿಗೆ ಆಗುತ್ತಿರುವ ತೊಂದರೆಯ ಕುರಿತಂತೆ ವಿಜಯವಾಣಿ ಪತ್ರಿಕೆ ಇತ್ತೀಚೆಗೆ ಆರೋಗ್ಯ ಇಲಾಖೆ ಆಯುಕ್ತ ಕೆ.ಪಂಕಜ್ ಕು ಮಾರ್‌ಪಾಂಡೆ ಅವರನ್ನು ಸಂಪರ್ಕಿಸಿದಾಗ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಕೇಂದ್ರಗಳ ನಿರ್ವಹಣೆಗಾಗಿ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ಭರವಸೆ ಕೊಟ್ಟಿದ್ದರು.
ಇದನ್ನೂ ಓದಿ:ದಿನದ ಪಾಸಿಟಿವಿಟಿ ದರ ಶೇ. 1.85ಕ್ಕೆ ಇಳಿಕೆ : ಗುಣಮುಖರ ಸಂಖ್ಯೆ 8.20ಲಕ್ಷ ಏರಿಕೆ
ಶುಕ್ರವಾರ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಿದ್ದ ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್,ಡಯಾಲಿಸಿಸ್ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಖಾಸಗಿ ಕಂಪನಿ ಹಣಕಾಸು ತೊಂದರೆಯಿಂದ ಬಳಲುತ್ತಿದೆ ಎಂದಿದ್ದರು. ಇದೇ ವೇಳೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲು ಕ್ರಮ ತೆಗೆದು ಕೊಳ್ಳಲಾಗುವುದು, ಆದರೂ ರೋಗಿಗಳಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ಇಲಾಖೆ ಅಽಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದ್ದರು.ಏತನ್ಮಧ್ಯೆ ಪ್ರಸ್ತುತ ಕೇಂದ್ರಗಳನ್ನು ನಿರ್ವಹಿಸುತ್ತಿರುವ ಕಂಪನಿಯ ನಿರ್ವಹಣಾ ಅವಧಿ ಕೆಲದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದ್ದು, ಕಂಪನಿಗೆ ನೋಟಿಸ್ ಕೊಡಲು ಸರ್ಕಾರ ಸಿದ್ಧತೆ ನಡೆದಿದೆ, ನೋಟಿಸ್‌ಗೆ ಆಯುಕ್ತರ ಸಹಿ ಆಗ ಬೇಕಿದೆ ಎಂದು ಇಲಾಖೆ ಮೂಲಗಳು ಖಚಿತ ಮಾಹಿತಿ ನೀಡಿವೆ.
ಡಯಾಲಿಸಿಸ್‌ಗೆ ಬೆಡ್ ಕೊರತೆ, ಕಾಯುತ್ತಿದ್ದಾರೆ 50 ರೋಗಿಗಳು

ದೊಡ್ಡಬಳ್ಳಾಪುರ ಡಯಾಲಿಸಿಸ್ ಕೇಂದ್ರದಲ್ಲಿ ಅವ್ಯವಸ್ಥೆ, ಒಂದೂವರೆ ತಿಂಗಳಲ್ಲಿ ಐವರು ರೋಗಿಗಳ ಸಾವು, ಗುತ್ತಿಗೆ ಸಂಸ್ಥೆ ನಿರ್ಲಕ್ಷದಿಂದ ಪ್ರಾಣಕ್ಕೆ ಕುತ್ತು

ಡಯಾಲಿಸಿಸ್‌ ಮೇಲೂ ಕರೊನಾ ಕರಿಛಾಯೆ: ಪೂರಕ ಔಷಧ ಕೊರತೆ ಆತಂಕದಲ್ಲಿ ರೋಗಿಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 12 =
Remember me
