ಶಿವಮೊಗ್ಗ:ಇತ್ತೀಚೆಗೆ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಸಾವಿನ ವಿಚಾರವಾಗಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೂ ಪ್ರಕರಣದ ಬಿಸಿ ಇನ್ನೂ ಆರಿಲ್ಲ. ದಿನವೂ ಹರ್ಷ ಕೊಲೆ ಪ್ರಕರಣದ ವಿಚಾರ ಒಂದಲ್ಲ ಒಂದು ರೀತಿಯಲ್ಲಿ ಮುನ್ನೆಲೆಗೆ ಬರುತ್ತಿದೆ.
ಹರ್ಷ ಕುಟುಂಬಕ್ಕೆ ಧನಸಹಾಯ ಪ್ರಕ್ರಿಯೆ, ಕುಟುಂಬಸ್ಥರ ಭೇಟಿ, ಸಂತಾಪ-ಸಂತ್ವಾನಗಳು ಇನ್ನೂ ಮುಂದುವರಿದಿದ್ದು, ಮನೆಯವರ ದುಃಖವೂ ಉಮ್ಮಳಿಸಿ ಬರುತ್ತಲೇ ಇದೆ. ಈ ಮಧ್ಯೆ ಹರ್ಷ ಸಾವಿನ ಮುನ್ಸೂಚನೆ ಒಂದು ತಿಂಗಳ ಮೊದಲೇ ಸಿಕ್ಕಿತ್ತಾ? ಎಂಬ ವಿಚಾರವೊಂದು ಮೂಡಿದೆ.
ಇಂದು ಶಾಸಕ ಎಂ.ಪಿ.ರೇಣುಕಾಚಾರ್ಯ-ಸುಮಾ ದಂಪತಿ ಹರ್ಷ ಮನೆಗೆ ತೆರಳಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವೇಳೆ ಇಂಥದ್ದೊಂದು ವಿಷಯ ತಿಳಿದುಬಂದಿದೆ. ಪುತ್ರನ ಬಗ್ಗೆ ಶಾಸಕರ ಬಳಿ ಮಾತನಾಡುತ್ತಿದ್ದ ತಾಯಿ ಪದ್ಮ ಕೆಲವೊಂದು ಅನಿಸಿಕೆಗಳನ್ನು ಹಂಚಿಕೊಂಡರು.
ಇದನ್ನೂ ಓದಿ:ಮದುವೆಯಾಗಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ!
ಒಂದು ತಿಂಗಳಿನಿಂದ ನನಗೆ ಏನೋ ಒಂದು ಥರ ಕಳವಳ ಆಗುತ್ತ ಇತ್ತು. ಆ ರೀತಿ ನನಗೆ ಯಾವತ್ತೂ ಅನಿಸಿರಲಿಲ್ಲ. ಹೀಗಾಗಿ ನಾನು ಪ್ರತಿ ಹತ್ತು ನಿಮಿಷಕ್ಕೆ ಒಮ್ಮೆಯಂತೆ ಮಗನಿಗೆ ಕರೆ ಮಾಡುತ್ತಿದ್ದೆ. ಆದರೂ ಅವನನ್ನು ಕಳೆದುಕೊಳ್ಳುವಂತಾಯಿತು ಎಂದು ತಾಯಿ ಪದ್ಮ ನೋವು ತೋಡಿಕೊಂಡಿದ್ದಾರೆ.
ರೇಪ್​ ಮಾಡಿದ್ರು ಅಂತ ಸುಳ್ಳು ಹೇಳಿದ ವಿದ್ಯಾರ್ಥಿನಿ; ಇನ್​ಸ್ಟಾಗ್ರಾಮ್​ನಲ್ಲಿ 5 ಅಕೌಂಟ್​ ಹೊಂದಿದ್ದವಳಿಂದ ಕಟ್ಟುಕತೆ!

ಇದೊಂದು ರೈಲ್ವೆ ಕ್ರಾಸಿಂಗ್​ನಲ್ಲಿ ಬರೀ ಕಚೋರಿಗಾಗಿ ರೈಲೇ ನಿಂತು ಬಿಡುತ್ತದೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three × 1 =
Remember me
