ಚಿಕ್ಕಮಗಳೂರು:ಕಡೂರು ತಾಲೂಕು ಗುಣಸಾಗರದಲ್ಲಿ ರೈಲಿನಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್. ಧರ್ಮೇಗೌಡ ಅವರು ಡೆತ್​ನೋಟ್ ಬರೆದಿಟ್ಟಿದ್ದಾರೆಯೇ? ಹೀಗೊಂದು ಪ್ರಶ್ನೆ ಕಾಡುತ್ತಿದ್ದು, ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳಲ್ಲಿ ಡೆತ್​​ನೋಟ್ ಕೂಡ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.
ಡೆತ್​ನೋಟ್​ನಲ್ಲಿ ಏನಿದೆ ಎಂಬ ಅಂಶ ಇನ್ನೂ ಬಹಿರಂಗವಾಗಿಲ್ಲ. ಎಲ್ಲರ ಗಮನವೂ ಸದ್ಯ ವಿಧಾನಪರಿಷತ್​ನಲ್ಲಿ ಡಿಸೆಂಬರ್ 15ರಂದು ನಡೆದ ಗದ್ದಲದ ಸುತ್ತವೇ ಇದೆ. ಅದುವೇ ಆತ್ಮಹತ್ಯೆಗೆ ಕಾರಣವಾಯಿತಾ ಎಂಬ ಸಂದೇಹವೂ ಎಲ್ಲರನ್ನೂ ಕಾಡಿದೆ. ಅಂದು ಅವರು ನೀಡಿದ ಪ್ರತಿಕ್ರಿಯೆಯನ್ನೂ ಎಲ್ಲರೂ ನೆನಪಿಸುತ್ತಿದ್ದಾರೆ.
ಅಂದು ಧರ್ಮೇಗೌಡರ ಪ್ರತಿಕ್ರಿಯೆ ಹೀಗಿತ್ತು–‘ಅವರು ಪೀಠದಲ್ಲಿ ಕೂರಿಸಿದ್ರು, ಇವರು ಪೀಠದಿಂದ ಎಳೆದೊಯ್ದರು-ನಾನೇನು ಮಾಡಲಿ?’
ವಿಧಾನ ಪರಿಷತ್ ಹೈಡ್ರಾಮಾ:ಘಟಾನುಘಟಿ ರಾಜಕೀಯ ನಾಯಕರು ಅನುಭವವನ್ನು ಧಾರೆ ಎರೆದ ಮೇಲ್ಮನೆ ಎಂಬ ಅಗ್ಗಳಿಕೆಗೆ ಪಾತ್ರವಾಗಿದ್ದ ವಿಧಾನಪರಿತ್ ಡಿಸೆಂಬರ್ 15ರಂದು ಸದಸ್ಯರ ಅತಿರೇಕದ ವರ್ತನೆಗೆ ಸಾಕ್ಷಿಯಾಯಿತಲ್ಲದೇ, ಇತಿಹಾಸದ ಪುಟಗಳಲ್ಲಿ ಕಪ್ಪುಚುಕ್ಕೆಯೊಂದು ದಾಖಲಾಯಿತು. ಪೂರ್ಣವಿವರದ ಸ್ಮರಣೆಗೆ ಈ ಕೊಂಡಿ ಕ್ಲಿಕ್ಕಿಸಿ..ವಿಧಾನ ಪರಿಷತ್ ಹೈಡ್ರಾಮಾ ಹೇಗಾಯಿತು- ಯಾಕಾಯಿತು?
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಶಾಕಿಂಗ್ ನ್ಯೂಸ್ ! ವಿಧಾನಪರಿಷತ್ ಉಪಸಭಾಪತಿ ಎಸ್​.ಎಲ್​.ಧರ್ಮೇಗೌಡ ಆತ್ಮಹತ್ಯೆ..

‘ನಾನು ಅತ್ಯಂತ ಮೆಲುದನಿಯಲ್ಲಿ “ಏನೋ ಸುದ್ದಿ ಕೇಳಿದೆ ನಿಜವಾ” ಎಂದು ಸಿಟಿ ರವಿ ಅವರನ್ನು ಪ್ರಶ್ನಿಸಿದೆ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 9 =
Remember me
