ಬೆಂಗಳೂರು:ಮಾನ್ಯತಾ ಟೆಕ್ ಪಾರ್ಕ್ ನಲ್ಲಿರುವ ನಟ ಶಿವರಾಜ್ ಕುಮಾರ್ ನಿವಾಸಕ್ಕೆ ಉಸ್ತುವಾರಿ ಸುರ್ಜೇವಾಲಾ ಭೇಟಿ ನೀಡಿದ್ದು ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.
ಹಿಂದೆ ಶಿವರಾಜ್ ಕುಮಾರ್ ಮಧು ಬಂಗಾರಪ್ಪಗೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಬೇಸರಗೊಂಡಿದ್ದರು.  ಹೀಗಾಗಿ ಶಿವಕುಮಾರ್ ಕುಮಾರ್ ಭೇಟಿ ಮಾಡಿ ಸುರ್ಜೇವಾಲಾ ಮಾತುಕತೆ ನಡೆಸಿದ್ದಾರೆ. ನಟ ಶಿವರಾಜ್ ಕುಮಾರ್ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಅವರು ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವರ ಪರವಾಗಿ ಪ್ರಚಾರ ನಡೆಸಿದ್ದರು.

ಭೇಟಿಯ ಬಗ್ಗೆ ಸುರ್ಜೇವಾಲಾ ತಮ್ಮ ಟ್ವಿಟರ್ ಖಾತೆಯಲ್ಲೂ ಬರೆದುಕೊಂಡಿದ್ದು ಧನ್ಯವಾದ ಸಲ್ಲಿಸಿರುವುದಾಗಿ ಹೇಳಿದ್ದಾರೆ. ಟ್ವೀಟ್ ನಲ್ಲಿ ಅವರು “@NimmaShivanna ಶ್ರೀ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗುವುದು ನಿಜಕ್ಕೂ ಸಂತೋಷ ಮತ್ತು ಗೌರವದ ವಿಷಯವಾಗಿದೆ.
ಕರ್ನಾಟಕದ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭಿಯಾನಕ್ಕೆ ಶಕ್ತಿ ನೀಡಿದ ಮತ್ತು ಪ್ರಜಾಪ್ರಭುತ್ವದ ಉತ್ಸವದಲ್ಲಿ ಭಾಗವಹಿಸಿದ್ದಕ್ಕಾಗಿ ಅತ್ಯಂತ ಜನಪ್ರಿಯ ಕಲಾವಿದ ಮತ್ತು ಉತ್ತಮ ವ್ಯಕ್ತಿಗೆ ಧನ್ಯವಾದಗಳು.
ಗೀತಾ ಶಿವರಾಜ್ ಕುಮಾರ್ ಈಗಾಗಲೇ ಕಾಂಗ್ರೆಸ್ ಕುಟುಂಬದ ಭಾಗವಾಗಿದ್ದಾರೆ. ಅಭಿವೃದ್ಧಿ ಮತ್ತು ಸಮೃದ್ಧಿಯ ಪ್ರತಿಜ್ಞೆಯ ಮೇಲೆ #Karnatakaವನ್ನು ಕೊಂಡೊಯ್ಯಲು ನಾವು ಬದ್ಧರಾಗಿದ್ದೇವೆ.” ೆಂದು ಬರೆದುಕೊಂಡಿದ್ದಾರೆ.
Was indeed a pleasure and honour to meet with one and only Sh. Shiva Rajkumar@NimmaShivanna& Geetha Shivarajkumar at their residence.Thanked one of the most popular artist and even a better human being for powering the Congress campaign and participating in the festival of…pic.twitter.com/mrkefIwfpY— Randeep Singh Surjewala (@rssurjewala)May 23, 2023
Was indeed a pleasure and honour to meet with one and only Sh. Shiva Rajkumar@NimmaShivanna& Geetha Shivarajkumar at their residence.Thanked one of the most popular artist and even a better human being for powering the Congress campaign and participating in the festival of…pic.twitter.com/mrkefIwfpY
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 9 =
Remember me
