ಶಿವಮೊಗ್ಗ:ಹೌದು! ಎನ್​ಐಎ ಭಾರಿ ಲಕ್ಷಾಂತರ ರೂ. ಮೊತ್ತವನ್ನು ಬಹುಮಾನವಾಗಿ ಘೋಷಿಸಿ ಹುಡುಕುತ್ತಿರುವ ಶಂಕಿತ ಉಗ್ರನ ತಂದೆ ಓರ್ವ ಯೋಧ ಎಂದು ಖುದ್ದು ಆತನ ತಾಯಿ ಮಾಹಿತಿ ನೀಡಿದ್ದಾರೆ. ಮಗ ಮತೀನ್​ನನ್ನು ನೆನೆಸಿಕೊಂಡು ಕಣ್ಣೀರು ಹಾಕುತ್ತಾ ಆತನ ತಾಯಿ ಈ ಮಾಹಿತಿ ನೀಡಿದ್ದಾರೆ. ಸದ್ಯಕ್ಕಂತೂ ಶಂಕಿತ ಉಗ್ರ ಮತೀನ್ ಮೋಸ್ಟ್ ವಾಂಟೆಂಡ್​ ಆಗಿದ್ದಾನೆ.
‘ನನ್ನ ಮಗ ಕಳೆದ ಮೂರು ವರ್ಷದಿಂದ ನಾಪತ್ತೆಯಾಗಿದ್ದಾನೆ. ಎಲ್ಲಿದ್ದಾನೋ ಗೊತ್ತಿಲ್ಲ. ಆತ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತಿದ್ದ. ಇಂಜಿನಿಯರಿಂಗ್ ಪದವಿ ಕೇವಲ ಮೂರು ವರ್ಷ ಓದಿ ಬಿಟ್ಟಿದ್ದ. ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ‌ ಕೆಲಸ ಮಾಡುತಿದ್ದ. ಯೋಧನ ಮಗನಾಗಿ ಉತ್ತಮ‌ ಗುಣಗಳನ್ನು ಹೊಂದಿದ್ದ. ಮೂರು ವರ್ಷದ ಹಿಂದೆ ಬೆಂಗಳೂರಿನಿಂದ ನಾಪತ್ತೆಯಾದವನು ಇನ್ನೂ ಪತ್ತೆಯಾಗಿಲ್ಲ. ಅಂದಿನಿಂದ ಇಂದಿನವರೆಗೂ ನಮ್ಮ ಸಂಪರ್ಕಕ್ಕೂ ಸಿಕ್ಕಿಲ್ಲ’ ಎಂದು ಹೃದಯ ವಿದ್ರಾವಕವಾಗಿ ಉಗ್ರ ಮತೀನ್​ನ ತಾಯಿ ಕಣ್ಣೀರು ಸುರಿಸಿದ್ದಾರೆ.
ಮಗ ಮತೀನ್​ ಬಗ್ಗೆ ಮಾತನಾಡಿದ ತಾಯಿ ‘ಶಾರೀಕ್‌ ಹಾಗೂ ಮಾಜ್ ನನ್ನ ಮಗನಿಗೆ ಪರಿಚಿತರು. ಇವರು ಒಂದೇ ಊರಿನವರಾಗಿದ್ದರಿಂದ ಪರಸ್ಪರ ಪರಿಚಯವಿತ್ತು. ನನ್ನ ಮಗ ತಪ್ಪು ಮಾಡಿದ್ದಾನೋ ಇಲ್ಲವೋ ಗೊತ್ತಿಲ್ಲ. ಒಂದು ವೇಳೆ ಆತ ಏನಾದರೂ ತಪ್ಪು ಮಾಡಿದ್ದಲ್ಲಿ ಕೋರ್ಟ್​ ಆತನಿಗೆ ಶಿಕ್ಷೆ ನೀಡಲಿ. ನನ್ನ ಮಗನಿಗೆ 29 ವರ್ಷ. ಆತನೇ ನಮ್ಮ ಹಿರಿಯ ಮಗ. ಆತನಿಗೆ ತಮ್ಮ-ತಂಗಿ ಇದ್ದಾರೆ. ಎಲ್ಲರ ಮೇಲೆಯೂ ಮತೀನ್​ಗೆ ಹೆಚ್ಚು ಪ್ರೀತಿ ವಿಶ್ವಾಸ ಇತ್ತು . ಮತೀನ್ ಏಕೆ ಹೀಗೆ ಮಾಡಿದ ಎಂಬುದು ನಮಗೆ ಇನ್ನೂ ಗೊತ್ತಾಗಿಲ್ಲ. ನಮಗೆ ಈ ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಮತೀನ್​ ತಾಯಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − eight =
Remember me
