ಬೆಂಗಳೂರು:ಕರ್ನಾಟಕದಲ್ಲಿ ಏಳು ವರ್ಷಗಳ ಕಾಲ ಕನ್ನಡಿಗರ ಮನೆಮಾತಾಗಿದ್ದ ‘ದಿಗ್ವಿಜಯ ನ್ಯೂಸ್’ ಈಗ ‘ರಿಪಬ್ಲಿಕ್ ಕನ್ನಡ’ ವಾಹಿನಿ ಆಗಿ ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್ ಸಮೂಹಕ್ಕೆ ಸೇರ್ಪಡೆಯಾಗಿದೆ. ಶುಕ್ರವಾರ ದಿಗ್ವಿಜಯ ನ್ಯೂಸ್‌ನ ಬೆಂಗಳೂರು ಕಚೇರಿಯ ಸ್ಟುಡಿಯೋದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಅರ್ನಬ್ ಗೋಸ್ವಾಮಿ ಅವರು ರಿಪಬ್ಲಿಕ್ ಕನ್ನಡ ವಾಹಿನಿಯ ವಿಧ್ಯುಕ್ತ ಆರಂಭದ ಘೋಷಣೆ ಮಾಡಿದರು.
“ಕನ್ನಡಿಗರ ಹೃದಯದಲ್ಲಿ ನಂಬರ್ 1 ವಾಹಿನಿಯನ್ನಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದು. ಕರ್ನಾಟಕದೆಲ್ಲೆಡೆ ಇರುವ ಜನರ ದನಿಯಾಗಿ ವಾಹಿನಿಯನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯಲಾಗುವುದು” ಎಂದು ಅರ್ನಬ್ ಗೋಸ್ವಾಮಿ ವೀಕ್ಷಕರಿಗೆ ವಾಗ್ದಾನ ನೀಡಿದರು.
ಇದನ್ನೂ ಓದಿ:ಆದಿತ್ಯ ಎಲ್​-1 ಮಿಷನ್​: ಇಸ್ರೋದಿಂದ ತಿರುಪತಿಯಲ್ಲಿ ಮತ್ತೆ ಪೂಜೆ
ಈ ಸಂದರ್ಭದಲ್ಲಿ ಹಾಜರಿದ್ದ ವಿಆರ್‌ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ್, “ನಮ್ಮ ವಾಹಿನಿಯನ್ನು ಸಂತೋಷದಿಂದ ಹಸ್ತಾಂತರ ಮಾಡಿದ್ದೇವೆ. ಅರ್ನಬ್ ಗೋಸ್ವಾಮಿ ಅವರು ಉತ್ತಮ ದೂರದೃಷ್ಟಿಯುಳ್ಳ ವ್ಯಕ್ತಿಯಾಗಿದ್ದು, ಅವರು ರಿಪಬ್ಲಿಕ್ ಕನ್ನಡ ವಾಹಿನಿಯನ್ನು ಉತ್ತಮ ಮಾರ್ಗದಲ್ಲಿ ಮುನ್ನಡೆಸಿಕೊಂಡು ಹೋಗುತ್ತಾರೆಂಬ ವಿಶ್ವಾಸ ಇದೆ” ಎಂದು ಶುಭ ಕೋರಿದರು.
ಪೊಲೀಸ್ ‘ಪೋಸ್ಟ್​’ಗಳಲ್ಲೂ ಕ್ರಿಯೇಟಿವಿಟಿ; ಇಂಪ್ರೆಸ್​ ಆಗುವಂತೆ ‘ಎಕ್ಸ್​’ಪ್ರೆಸ್ ಮಾಡುತ್ತಿರುವ ಪೊಲೀಸರು!
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:twenty − thirteen =
Remember me
