ಬೆಂಗಳೂರು:ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸಿರುವ ರಾಷ್ಟ್ರಕವಿ ಕುವೆಂಪು ಅವರ ಸಮಗ್ರ ಸಾಹಿತ್ಯದ 12 ಕೃತಿಗಳ ಡಿಜಿಟಲ್​ ಆವೃತ್ತಿ ಲೋಕಾರ್ಪಣೆಯಾದ ಒಂದೇ ದಿನದಲ್ಲಿ ಆನ್​ಲೈನ್​ನಲ್ಲಿ ಲಭ್ಯವಾಗುತ್ತಿವೆ.
ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್​. ಅಶ್ವತ್ಥನಾರಾಯಣ ಭಾನುವಾರ ಈ ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದರು. ಗೂಗಲ್​ಪ್ಲೇ ಬುಕ್​ನಲ್ಲಿ ಈ ಕೃತಿಗಳು ಮಾರಾಟಕ್ಕಿದ್ದು, ಸಾಹಿತ್ಯಾಸಕ್ತರೂ ಖರೀದಿ ಮಾಡಬಹುದು. ರಾಜ್ಯೋತ್ಸವ ಪ್ರಯುಕ್ತ ಮುದ್ರಿತ ಕೃತಿಗಳಿಗೆ ಶೇ.50 ರಿಯಾಯಿತಿಯನ್ನು ಹಂಪಿ ವಿಶ್ವವಿದ್ಯಾಲಯ ಈಗಾಗಲೇ ಘೋಷಿಸಿದೆ.
ಹಂಪಿ ವಿವಿಯ ಕನ್ನಡ ವಿಭಾಗದ ಪ್ರೊ. ಕೆ.ಸಿ.ಶಿವಾರೆಡ್ಡಿ ಈ ಸಂಪುಟಗಳನ್ನು ಸಂಪಾದಿಸಿದ್ದು, ಮುದ್ರಣ ಆವೃತ್ತಿಯೂ ಮಾರಾಟಕ್ಕಿದೆ. ವಿವಿಯ ಬೆಂಗಳೂರು ಕೇಂದ್ರದಲ್ಲಿ ಈ ಕೃತಿಗಳು ದೊರಕುತ್ತವೆ.
ಆನ್​ಲೈನ್​ನಲ್ಲಿ ಖರೀದಿಸಲು ಗೂಗಲ್​ಪ್ಲೇ ಬುಕ್​ಗೆ ಬಂದು ಕುವೆಂಪು ಬುಕ್ಸ್​ ಎಂದು ಟೈಪ್​ ಮಾಡಿದರೆ ಸಾಕು, ಅಷ್ಟು ಸಂಪುಟಗಳು ತೆರೆದುಕೊಳ್ಳುತ್ತವೆ. ಆಸಕ್ತರು ಖರೀದಿಗೂ ಮುನ್ನ ಅಷ್ಟೂ ಸಂಪುಟಗಳ ಶೇ.20 ಭಾಗವನ್ನು ಆನ್​ಲೈನ್​ನಲ್ಲಿಯೇ ಓದಬಹುದು. ಉಳಿದ ಭಾಗವನ್ನು ಓದಬೇಕಾದರೆ ಪುಸ್ತಕಗಳನ್ನು ಖರೀದಿ ಮಾಡಬೇಕು.
ಡಿಜಿಟಲ್​ ವರ್ಷನ್​ ಓದಲು ಅತ್ಯಂತ ವೈಜ್ಞಾನಿಕವಾಗಿದ್ದು, ಸುಲಭವೂ ಆಗಿದೆ ಎಂದು ಡಾ.ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಲ್ಲಿ ಕರೊನಾ ಸ್ಫೋಟ? ರೋಹಿಣಿ ಸಿಂಧೂರಿ ಆತಂಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
