ಬೆಂಗಳೂರು:ಕೃಷಿ ಜಾತ್ರೆ ಎಂದೇ ಕರೆಯಲಾಗುವ ಹೆಬ್ಬಾಳದ ಕೃಷಿ ವಿಶ್ವವಿದ್ಯಾಲಯ ಆಯೋಜನೆಯ ಕೃಷಿ ಮೇಳ ಈ ಬಾರಿ ಡಿಜಿಟಲ್​ಮಯವಾಗಿರಲಿದೆ. ಹಸುಗಳು, ಕೋಳಿ, ಕುರಿಗಳ ಧ್ವನಿ, ಟ್ರಾಕ್ಟರ್​, ಟಿಲ್ಲರ್​ಗಳಂತಹ ಯಂತ್ರಗಳ ಓಡಾಟ, ಕೃಷಿ ಚಟುವಟಿಕೆಗಳ ಬಗೆಗಿನ ಚರ್ಚೆಗಳಿಂದಲೇ ತುಂಬಿರುತ್ತಿದ್ದ ಕೃಷಿ ಮೇಳದಲ್ಲಿ ಈ ಬಾರಿ ಆ ದೃಶ್ಯಗಳಾವುವೂ ಕಾಣಸಿಗುವುದಿಲ್ಲ.
ಕರೊನಾ ಸೋಂಕು ಮತ್ತು ಪ್ರವಾಹದ ಕಾರಣದಿಂದಾಗಿ ಈ ಬಾರಿ ಎಲ್ಲವೂ ಸರಳವಾಗಿ ಆಚರಣೆಗೊಳ್ಳುತ್ತಿದೆ. ಅದೇ ರೀತಿ ಕೃಷಿ ವಿಶ್ವವಿದ್ಯಾಲಯ ಆಯೋಜಿಸಲಿರುವ ಕೃಷಿ ಮೇಳವೂ ಸರಳವಾಗಿರಲಿದೆ. ಮೇಳಕ್ಕೆ ಪ್ರತಿದಿನ 200 ಜನರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆಮೂಲಕ ಮೂರು ದಿನಗಳ ಮೇಳದಲ್ಲಿ 600 ಜನರು ಮಾತ್ರ ಪಾಲ್ಗೊಳ್ಳಬಹುದಾಗಿದೆ.
ಇದನ್ನೂ ಓದಿ:ಬಡ ವಿದ್ಯಾರ್ಥಿಗಳಿಗೆ ಆನ್‌ಲೈನ್ ಶಿಕ್ಷಣ ಸೌಕರ್ಯ ಕೋರಿ ಪಿಐಎಲ್; ಸರ್ಕಾರಕ್ಕೆ ತುರ್ತು ನೋಟಿಸ್
ಡಿಜಿಟಲ್​ ಮೇಳ:ಕಡಿಮೆ ಜನರ ಪ್ರವೇಶಕ್ಕೆ ಅವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಮೇಳ ವೀಕ್ಷಣೆ ಮಾಡುವುದು, ಮೇಳದಿಂದ ಕೃಷಿ ಬಗ್ಗೆ ಮಾಹಿತಿ ಪಡೆಯಲಿಚ್ಛಿಸುವವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರವನ್ನಿಡಲಾಗುತ್ತದೆ.  ಫೇಸ್​ಬುಕ್​, ಟ್ವಿಟ್ಟರ್​, ಯೂಟೂಬ್​ಗಳ ಮೂಲಕ ಮೇಳದ ಪ್ರತಿ ಕಾರ್ಯಕ್ರಮಗಳು ನೇರ ಪ್ರಸಾರವಿರಲಿದೆ. ಅದಕ್ಕಾಗಿ ವೇದಿಕೆಯಲ್ಲಿ, ಮೇಳದ ಮಳಿಗೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಅದರ ಜತೆಗೆ ಡ್ರೋಣ್​ ಮೂಲಕವೂ ಚಿತ್ರೀಕರಣ ನಡೆಸಲಾಗುತ್ತದೆ.
ತಜ್ಞರಿಂದ ಪ್ರಶ್ನೋತ್ತರ:ಮೇಳದಲ್ಲಿ ಪಾಲ್ಗೊಳ್ಳದವರು ಕೃಷಿ ವಿವಿಯ ಈಮೇಲ್​, ವೆಬ್​ಸೈಟ್​ ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಕೇಳುವ ಕೃಷಿ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರಿಂದ ಉತ್ತರಿಸುವ ಕೆಲಸವನ್ನೂ ಮಾಡಲಾಗುತ್ತದೆ. ಆ ಉತ್ತರಗಳು ಪ್ರತಿ 1 ಗಂಟೆಗೆ 10 ನಿಮಿಷದಂತೆ ಪ್ರಸಾರ ಮಾಡಲಾಗುತ್ತದೆ.
ಇದನ್ನೂ ಓದಿ:ಇನ್ಫಿ ನಾರಾಯಣ ಮೂರ್ತಿ ಅಳಿಯ, ಬ್ರಿಟನ್​ ಸಚಿವ ರಿಷಿ ಸುನಕ್​ಗೆ ಯುಕೆ ಪಬ್​ನಿಂದ ಶಾಶ್ವತ ನಿಷೇಧ..!
ಶಿಕ್ಷಣದ ಮಾಹಿತಿ:ಕೃಷಿ ವಿಜ್ಞಾನದಲ್ಲಿ ಪದವಿ ಪಡೆದಿರುವವರಿಗೆ ಮುಂದಿನ ಶಿಕ್ಷಣದ ಬಗ್ಗೆ, ವೃತ್ತಿ ಜೀವನದ ಬಗ್ಗೆ ಇರುವ ಗೊಂದಲ ನಿವಾರಣೆಯ ಕೆಲಸವನ್ನೂ ಕೃಷಿ ಮೇಳದ ಅವಧಿಯಲ್ಲಿ ಮಾಡಲಾಗುತ್ತದೆ. ಉಪನ್ಯಾಸಕರು, ತಜ್ಞರ ಮೂಲಕ ಮಾರ್ಗದರ್ಶನ ವೀಡಿಯೋವನ್ನು ನೀಡಲಾಗುತ್ತದೆ. ಜತೆಗೆ, ಈ ಬಾರಿಯ ಡಿಜಿಟಲ್​ ಮೇಳದ ಬಗ್ಗೆ ರೈತರಿಂದ ಸಂದರ್ಶನವನ್ನು ಮಾಡಲಾಗುತ್ತದೆ.
ಕೃಷಿ ವಿವಿ ಮಳಿಗೆಗಳಿಗಷ್ಟೇ ಅವಕಾಶ:ಈವರೆಗಿನ ಕೃಷಿ ಮೇಳಗಳಲ್ಲಿ ಖಾಸಗಿ, ಸರ್ಕಾರಿ ಸಂಸ್ಥೆಗಳ ವಸ್ತುಗಳ ಪ್ರದರ್ಶನ, ಮಾರಾಟಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈ ಬಾರಿ ಕೃಷಿ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಮಳಿಗೆಗಳನ್ನಷ್ಟೇ ಹಾಕಲಾಗುತ್ತಿದೆ. ಉಳಿದ ಮಳಿಗೆಗಳಿಗೆ ಅವಕಾಶ ನೀಡುತ್ತಿಲ್ಲ.
ಇದನ್ನೂ ಓದಿ:ಧರ್ಮಕ್ಕೆ ಸೀಮಿತವಾಗಬಾರದು ಮಹಾಪುರುಷರು: ಮಹಮ್ಮದ್ ಕುಂಞ
ಮೂರು ದಿನ ಮುಂದಕ್ಕೆ:ಈ ಹಿಂದೆ ಕೃಷಿ ಮೇಳವನ್ನು ನ. 6ರಿಂದ 8ರವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ರಾಜ್ಯದಲ್ಲಿ ಮಳೆಯ ಅಬ್ಬರ ಜಾಸ್ತಿಯಿರುವ ಕಾರಣ ಮೇಳವನ್ನು ಮುಂದೂಡಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಹೆಚ್ಚಾಗಿದ್ದು, ಆನ್​ಲೈನ್​ ಮೂಲಕ ಮೇಳ ವೀಕ್ಷಣೆ ಕಷ್ಟವಾಗಲಿದೆ. ಎಲ್ಲೆಡೆ ನೆಟ್​ವರ್ಕ್​ ಸಿಗುವುದು ಅನುಮಾನವಾದ ಕಾರಣ, ಸಾಮಾಜಿಕ ಜಾಲತಾಣದ ಮೂಲಕ ಮೇಳ ವೀಸಲು ಸಾಧ್ಯವಿಲ್ಲ. ಹೀಗಾಗಿ ಮೇಳವನ್ನು ನ. 11ರಿಂದ 13ರವರೆಗೆ ಆಯೋಜಿಸಲು ನಿರ್ಧರಿಸಲಾಗಿದೆ.
ಶ್ರೀಲಂಕಾದಲ್ಲಿ ವಹಿವಾಟು ಸ್ಥಗಿತಗೊಳಿಸಿದ ಐಸಿಐಸಿಐ ಬ್ಯಾಂಕ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
