ಕೋವಿಡ್​-19 ವಿರುದ್ಧ ಹೋರಾಟಕ್ಕಾಗಿ ಇಡೀ ದೇಶ ಲಾಕ್​ಡೌನ್​ನಲ್ಲಿದೆ. ಜನರು ಮನೆಯಲ್ಲಿಯೇ ಇದ್ದು ಇದರ ವಿರುದ್ಧ ಹೋರಾಟ ನಡೆಸಿದ್ದಾರೆ. ಶಾಲೆ-ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ತರಗತಿಯ ಪಾಠ ಕೇಳುವುದರಿಂದ ವಂಚಿತರಾಗಿದ್ದಾರೆ. ಜತೆಗೆ, ಮನೆಯಲ್ಲಿಯೇ ಕುಳಿತು ಅಧ್ಯಯನ ಮಾಡೋಣವೆಂದರೆ, ಪುಸ್ತಕಗಳಿಗಾಗಿ ಗ್ರಂಥಾಲಯಕ್ಕೂ ತೆರಳುವಂತಿಲ್ಲ.
ವಿದ್ಯಾರ್ಥಿಗಳ ಈ ಸಂಕಷ್ಟವನ್ನು ದೂರ ಮಾಡಲೆಂದೇ ರಾಷ್ಟ್ರೀಯ ಡಿಜಿಟಲ್​ ಗ್ರಂಥಾಲಯ ವಿಶೇಷ ಪಠ್ಯ ಹಾಗೂ ಸಾಮಗ್ರಿಗಳನ್ನು ಅಣಿಗೊಳಿಸಿದೆ.ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಅಧ್ಯಯನ ಸಾಮಗ್ರಿಗಳನ್ನು ನಿರಂತರವಾಗಿ ಅಪ್​ಡೇಟ್​ ಮಾಡುತ್ತಲೇ ಇದ್ದೇವೆ. ಈ ಬಗ್ಗೆ ರಾಷ್ಟ್ರೀಯ ಡಿಜಿಟಲ್​ ಗ್ರಂಥಾಲಯದ ಸೋಷಿಯಲ್​ ಮೀಡಿಯಾ ಜಾಲದ ಮೂಲಕ ಮಾಹಿತಿ ನೀಡಲಾಗುತ್ತಿದೆ ಎಂದು ಗ್ರಂಥಾಲಯ ಅಧಿಕಾರಿಗಳು ತಿಳಿಸಿದ್ದಾರೆ.
ಅಷ್ಟಕ್ಕೂ ಈ ಡಿಜಿಟಲ್​ ಲೈಬ್ರರಿಯಲ್ಲಿ ವಿದ್ಯಾರ್ಥಿಗಳಿಗೆ ಉಪಯೋಗ ಆಗುವಂತಾದ್ದು ಏನೇನಿದೆ ಗೊತ್ತಾ?ಪಠ್ಯಪುಸ್ತಕಗಳು, ಪ್ರಶ್ನೆಪತ್ರಿಕೆಗಳು, ವಿಡಿಯೋ ಉಪನ್ಯಾಸಗಳು, ಪ್ರಶ್ನೋತ್ತರ ಮಾಲಿಕೆ, ಸಿಬಿಎಸ್​ಇ, ಕರ್ನಾಟಕ ಶಿಕ್ಷಣ ಮಂಡಳಿ ಸೇರಿ ವಿವಿಧ ಮಂಡಳಿಗಳ ಪಠ್ಯಕ್ರಮಗಳನ್ನು ನೀಡಲಾಗಿದೆ. ಇದಲ್ಲದೇ, ನೀಟ್​, ಜೆಇಇ ಮೇನ್ಸ್​ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಸಾಮಗ್ರಿಗಳನ್ನು ನೀಡಲಾಗಿದೆ.
ನ್ಯಾಷನಲ್​ ಡಿಜಿಟಲ್​ ಲೈಬ್ರರಿಗೆ ಲಿಂಕ್​ಗಳು ಇಲ್ಲಿವೆ. www.ndl.gov.in ಅಥವಾ ndl.iitkgp.ac.in.
ನನಗೆ ಕೋವಿಡ್​-19 ಬಂದಿದೆ ಎಂದು ಹಾಡು ಹೇಳುತ್ತಾ ಆಸ್ಪತ್ರೆಯ ವಾರ್​ರೂಂನಲ್ಲಿ ನರ್ತಿಸಿದ ಸೋಂಕಿತ ವ್ಯಕ್ತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
