ವಿಜಯವಾಣಿ ವಿಶೇಷಬೆಂಗಳೂರು:ಕೆಲವೇ ನಿಮಿಷಗಳಲ್ಲಿ ಸಾಲ ಕೊಡುವ ಡಿಜಿಟಲ್ ಆಪ್​ಗಳು ಜನರ ಜೀವಕ್ಕೆ ಆಪತ್ತಾಗಿ ಪರಿಣಮಿಸಿವೆ! ಅಂದಾಜು 600 ಅನಧಿಕೃತ ಲೋನ್ ಆಪ್​ಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಗುರುತಿಸಿದೆ. ನಿಯಮ ಉಲ್ಲಂಘನೆ ಆರೋಪದಲ್ಲಿ ಗೂಗಲ್ ಪ್ಲೇಸ್ಟೋರ್​ನಿಂದ 200ಕ್ಕೂ ಅಧಿಕ ಆಪ್​ಗಳನ್ನು ತೆಗೆದು ಹಾಕಿದರೂ ಫೇಸ್​ಬುಕ್, ಇನ್​ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಸಕ್ರಿಯವಾಗಿದ್ದು, ಸಾಲದ ಆಪತ್ತಿನ ಬಗ್ಗೆ ಸೈಬರ್ ಪೊಲೀಸರು ಎಚ್ಚರಿಸಿದ್ದಾರೆ.
ಗೂಗಲ್ ಪ್ಲೇಸ್ಟೋರ್​ನಲ್ಲಿ ನೂರಾರು ಸಾಲದ ಅಫ್ಲಿಕೇಷನ್​ಗಳು ಬಳಕೆಯಲ್ಲಿವೆ. ಇದರಲ್ಲಿ ಬೆರಳೆಣಿಕೆಯಷ್ಟೇ ಆರ್​ಬಿಐ ಅನುಮೋದಿತ ಆಪ್​ಗಳಾಗಿದ್ದು, ಉಳಿದೆಲ್ಲವೂ ಅನಧಿಕೃತ. ಇಂತಹ ಆಪ್​ಗಳ ಮೂಲಕ ಸಾಲ ಪಡೆಯುವುದು ಅಪಾಯಕಾರಿ. ಇಂತಹ ಬೇನಾಮಿ ಆಪ್​ಗಳ ನಿರ್ವಾಹಕರು ಸಾಲಕ್ಕೆ ಹೆಚ್ಚಿನ ಬಡ್ಡಿದರ ವಿಧಿಸುವುದು, ಇಎಂಐ ಪಾವತಿಸದವರಿಗೆ ಕಿರುಕುಳ ನೀಡುವುದಷ್ಟೇ ಅಲ್ಲದೆ, ಬ್ಲಾ್ಯಕ್​ವೆುೕಲ್ ಮಾಡುವ ನೂರಾರು ಪ್ರಕರಣಗಳು ನಿತ್ಯ ಬೆಳಕಿಗೆ ಬರುತ್ತಿವೆ. ಆಪ್​ಗಳ ಸಾಲದ ಟಾರ್ಚರ್ ತಾಳಲಾರದೆ ಈಗಾಗಲೆ ಆತ್ಮಹತ್ಯೆ ಮಾಡಿಕೊಂಡಿರುವ ಹಲವಾರು ಪ್ರಕರಣಗಳು ವರದಿಯಾಗಿವೆ.
ಅಂದಾಜು 600 ಅನಧಿಕೃತ ಲೋನ್ ಆಪ್​ಗಳಿರುವ ಬಗ್ಗೆ ಆರ್​ಬಿಐ ಮಾಹಿತಿ ನೀಡಿದೆ. 2020 ಜ.1ರಿಂದ 2021ರ ಮಾ.31ರವರೆಗೆ ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ 2,562 ದೂರುಗಳು ದಾಖಲಾಗಿವೆ. ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮತ್ತು ಹರಿಯಾಣ ರಾಜ್ಯಗಳಲ್ಲಿ ಲೋನ್ ಆಪ್​ಗಳ ಟಾರ್ಚರ್ ಬಗ್ಗೆ ಹೆಚ್ಚು ದೂರುಗಳು ದಾಖಲಾಗಿದ್ದು, ಕರ್ನಾಟಕ ಸೇರಿ ಕೆಲವೆಡೆ ಸೈಬರ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಹತ್ತೇ ನಿಮಿಷದಲ್ಲಿ 1 ಲಕ್ಷ ರೂ. ಸಾಲ!:ಸ್ಮಾರ್ಟ್​ಫೋನ್ ಹೊಂದಿದ್ದರೆ ಈ ಅನಧಿಕೃತ ಲೋನ್ ಆಪ್​ಗಳ ಮೂಲಕ ಬರೀ 10 ನಿಮಿಷದಲ್ಲಿ 10 ಸಾವಿರ ರೂ.ನಿಂದ 1 ಲಕ್ಷ ರೂ.ವರೆಗೆ ಸಾಲ ಪಡೆಯಬಹುದು. ನಿಮ್ಮ ವೈಯಕ್ತಿಕ ವಿವರಗಳನ್ನು ನಮೂದಿಸುವುದು, ಪಾನ್​ಕಾರ್ಡ್ ಸೇರಿ ಅವರು ಕೇಳುವ ದಾಖಲೆಗಳನ್ನು ಅಪ್​ಲೋಡ್ ಮಾಡಿದರೆ ಸಾಕು, ಪರಿಶೀಲನೆ ಪೂರ್ಣಗೊಳಿಸಿ ನಿಮ್ಮ ಖಾತೆಗೆ ಸಾಲದ ಹಣ ವರ್ಗಾವಣೆ ಮಾಡುತ್ತಾರೆ.
6.17 ಕೋಟಿ ರೂ. ಜಪ್ತಿ ಮಾಡಿದ್ದ ಇಡಿ:ಸಾಲ ಮತ್ತು ಹೂಡಿಕೆಯ ಚೀನಾ ಆಪ್ ಕಂಪನಿಗಳ ಮತ್ತು ವಂಚಕರ ಬ್ಯಾಂಕ್ ಖಾತೆ ಮತ್ತು ವ್ಯಾಲೆಟ್​ನಲ್ಲಿದ್ದ 6.17 ಕೋಟಿ ರೂ.ಗಳನ್ನು ಜಾರಿ ನಿರ್ದೇಶನಾಲಯ ಇತ್ತೀಚೆಗೆ ಜಪ್ತಿ ಮಾಡಿದೆ. ಸಾಲ ಕೊಟ್ಟು ದುಬಾರಿ ಬಡ್ಡಿ ವಸೂಲಿ ಹಾಗೂ ಹೂಡಿಕೆ ಆಪ್​ಗಳ ವಿರುದ್ಧ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಮತ್ತು ಮಾರತ್​ಹಳ್ಳಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿವೆ. ಪೊಲೀಸರ ತನಿಖೆ ವೇಳೆ ಕೋಟ್ಯಂತರ ರೂ. ಅಕ್ರಮ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಇ.ಡಿ ಪ್ರತ್ಯೇಕ ತನಿಖೆ ಕೈಗೊಂಡು ಹಣ ಜಪ್ತಿ ಮಾಡಿದ್ದು, ತನಿಖೆ ಮುಂದುವರಿದಿದೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − eight =
Remember me
