ಬೆಂಗಳೂರು:ರಾಜಕೀಯ ಸಭೆ-ಸಂವಾದ, ಚರ್ಚೆಗೆ ಡಿಜಿಟಲ್ ವೇದಿಕೆ ಎಷ್ಟು ಪರಿಣಾಮಕಾರಿಯೋ ತಿಳಿದಿಲ್ಲ. ಆದರೆ, ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜಕೀಯ ನಾಯಕರು ಡಿಜಿಟಲ್ ಪಾಲಿಟಿಕ್ಸ್​ಗೆ ಆದ್ಯತೆ ನೀಡುತ್ತಿದ್ದಾರೆ.
ಲಾಕ್​ಡೌನ್​ನಿಂದ ರಾಜಕೀಯ ಚಟುವಟಿಕೆಗೆ ಬ್ರೇಕ್ ಬಿದ್ದಿದ್ದು, ಸದ್ಯಕ್ಕೆ ರ್ಯಾಲಿ, ಸಮಾವೇಶ, ದೊಡ್ಡ ಮಟ್ಟದ ಸಭೆ ನಡೆಸುವಂತಿಲ್ಲ. ಒಂದು ವೇಳೆ ನಡೆಸಿದರೂ ಕಾರ್ಯಕರ್ತರು, ಜನರು ಸೇರುತ್ತಾರೆಂಬ ನಂಬಿಕೆ ನಾಯಕರಿಗಿಲ್ಲ. ಈ ಕಾರಣಕ್ಕೆ ಡಿಜಿಟಲ್ ವೇದಿಕೆ ಬಳಸಿಕೊಂಡು ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ ಆರಂಭಿಸಿದ್ದಾರೆ. ಅನುಯಾಯಿಗಳ ಸಂಖ್ಯೆ ಹೆಚ್ಚಿಸಿ ಕೊಳ್ಳುವುದು, ತಾವು ಮಾಡಿದ ಜನಪರ ಕೆಲಸಗಳನ್ನು ಜನರಿಗೆ ತಿಳಿಸುವುದು, ಸಂದೇಶ-ಅಭಿಪ್ರಾಯಗಳನ್ನು ಮತದಾರರಿಗೆ ಕಾಲಕಾಲಕ್ಕೆ ಮುಟ್ಟಿಸುವುದು ಇದರ ಉದ್ದೇಶ. ಲಾಕ್​ಡೌನ್ ಜಾರಿ ಬಳಿಕ ಮೂರೂ ಪಕ್ಷಗಳು ವಿಡಿಯೋ ಸಂವಾದ ಅಥವಾ ಡಿಜಿಟಲ್ ಮಾಧ್ಯಮ ಬಳಕೆ ಹೆಚ್ಚಿಸಿವೆ. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪಕ್ಷದ ಶಾಸಕರು, ಮುಖಂಡ ರೊಂದಿಗೆ ವಿಡಿಯೋ ಸಂವಾದ ನಡೆಸಿ ಕರೊನಾ ನಿರ್ವಹಣೆ ಬಗ್ಗೆ ವಿಚಾರಿಸಿದ್ದಾರೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ವಿಡಿಯೋ ಸಂವಾದ ಹೆಚ್ಚೆಚ್ಚು ನಡೆಸುತ್ತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ವಿಡಿಯೋ ಸಂವಾದದ ಮೂಲಕ ಸಮಾಜದ ಗಣ್ಯರು, ಮಠಾಧೀಶರು, ಬುದ್ಧಿಜೀವಿಗಳ ಜತೆಗೆ ಮಾತನಾಡಿದ್ದರು, ಅದೇ ಮಾದರಿಯಲ್ಲಿ ರಾಜ್ಯಾಧ್ಯಕ್ಷರೂ ಡಿಜಿಟಲ್ ಸಭೆ ನಡೆಸಿದ್ದಾರೆ.
ಪ್ರಯೋಜನಗಳು..
1. ಜಿಲ್ಲೆ-ತಾಲೂಕುಗಳಿಗೆ ಉಸ್ತುವಾರಿಗಳನ್ನು ಕಳಿಸಿ ಸಭೆ ಆಯೋಜಿಸಿ ಮಾಹಿತಿ ರವಾನಿಸುವ ಕೆಲಸ ಇನ್ನು ಇರದು. ಒಮ್ಮೆಲೇ ಪಕ್ಷದ ಸಂದೇಶ ಕೊನೆಯ ಘಟಕದವರೆಗೂ ಮುಟ್ಟಿಸಬಹುದು.
2. ಪಕ್ಷದ ಅಧ್ಯಕ್ಷರು, ಪ್ರಮುಖ ನಾಯಕರು ಬೂತ್​ವುಟ್ಟದವರೆಗೂ ಸಂಪರ್ಕ ಹೊಂದಬಹುದು, ಸಂವಾದ ನಡೆಸಬಹುದು, ನೇರ ಸಂದೇಶ ಕಳುಹಿಸಬಹುದು.
3. ಈ ಮಾಧ್ಯಮ ಪರಿಣಾಮಕಾರಿ ಎನಿಸಿದ್ದು, ಹಳ್ಳಿಯ ಮೂಲೆಯಲ್ಲಿರುವ ಕಾರ್ಯಕರ್ತ ರಿಗೂ ನಾಯಕರು ನೇರವಾಗಿ ಸಂಪರ್ಕದಲ್ಲಿದ್ದಾರೆ ಎಂಬ ಭಾವನೆ ಬಂದಿದೆ.
4. ಪಕ್ಷ ನೀಡಿದ ಕಾರ್ಯಭಾರ ಯಾವ ರೀತಿ ನಡೆಯುತ್ತಿದೆ ಎಂದು ಜವಾಬ್ದಾರಿ ಹೊತ್ತವರು ನೇರವಾಗಿ ಗಮನಿಸಲು ಸಾಧ್ಯವಾಗುತ್ತಿದೆ.
| ಶ್ರೀಕಾಂತ್ ಶೇಷಾದ್ರಿ
ಸಮುದಾಯಕ್ಕೆ ಸೋಂಕು? ರಾಜ್ಯದಲ್ಲಿ ಕೈಮೀರಿತೇ ಕರೊನಾ; ಆರೋಗ್ಯ ತಜ್ಞರ ಅನುಮಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × five =
Remember me
