|ರುದ್ರಣ್ಣ ಹರ್ತಿಕೋಟೆ ಬೆಂಗಳೂರುರಾಜ್ಯದ ಎಲ್ಲ ತಾಲೂಕುಗಳಲ್ಲಿರುವ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಮಹತ್ವದ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದು, ಆ ಮೂಲಕ ಭ್ರಷ್ಟಾಚಾರದ ನಿಯಂತ್ರಣಕ್ಕೆ ಮುಂದಾಗಿದೆ. ಮೊದಲ ಹಂತದಲ್ಲಿ ಪ್ರಾಯೋಗಿ ಕವಾಗಿ ಚಿಕ್ಕಬಳ್ಳಾಪುರ, ಬಂಟ್ವಾಳ, ಧಾರವಾಡ, ಕೊರಟಗೆರೆ, ರಾಯ ಚೂರು ಹಾಗೂ ಚಾಮರಾಜನಗರ ತಾಲೂಕುಗಳಲ್ಲಿ ದಾಖಲೆಗಳ ಡಿಜಿಟಲೀಕರಣ ನಡೆಯಲಿದೆ. ಕಂದಾಯ ಮತ್ತು ಪೊಲೀಸ್ ಇಲಾಖೆಗಳೇ ಅತಿ ಹೆಚ್ಚಿನ ಭ್ರಷ್ಟಾಚಾರ ನಡೆಯುವ ಕೇಂದ್ರಗಳು ಎಂಬುದು ರ್ಚಚಿತ ವಿಷಯ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕಾದರೆ, ಮೊದಲು ಈ ಇಲಾಖೆಗಳಿಂದಲೇ ಆ ಕೆಲಸ ಶುರುವಾಗಬೇಕೆಂಬುದು ಸರ್ಕಾರದ ಚಿಂತನೆ. ಆದರೆ, ಅದಷ್ಟು ಸುಲಭವೂ ಅಲ್ಲ. ಹೀಗಾಗಿ ದಾಖಲೆಗಳ ಡಿಜಿಟಲೀಕ ರಣದ ಮೂಲಕ ಇಲಾಖೆಗಳನ್ನು ಜನಸ್ನೇಹಿ ಮತ್ತು ಪಾರದರ್ಶಕ ವಾಗಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ.
ರಾಜ್ಯದ 31 ಜಿಲ್ಲೆಗಳಲ್ಲಿ 221 ತಾಲೂಕು ಕೇಂದ್ರಗಳಿವೆ. ಪ್ರತಿಯೊಂದು ತಾಲೂಕಿನಲ್ಲಿಯೂ ಲಕ್ಷಾಂತರ ದಾಖಲೆಗಳಿವೆ. ಆಸ್ತಿಗಳ ದಾಖಲೆಗಳು, ನಕ್ಷೆಗಳು, ಅಪೂರ್ವ ಮಾಹಿತಿಗಳು ತಾಲೂಕು ಕಚೇರಿಯಲ್ಲಿಯ ರೆಕಾರ್ಡ್ ರೂಮ್ಲ್ಲಿರುತ್ತವೆ. ಈ ದಾಖಲೆಗಳನ್ನು ಹುಡುಕುವುದೇ ದೊಡ್ಡ ಕೆಲಸ. ಯಾವುದೇ ದಾಖಲೆ ಪಡೆಯಲು ಕನಿಷ್ಠ ಮೂರರಿಂದ ನಾಲ್ಕು ದಿನಗಳ ಕಾಲ ತಾಲೂಕು ಕಚೇರಿಗೆ ಅಲೆದಾಡಬೇಕು. ದೂರದ ಊರಿನಿಂದ ತಾಲೂಕು ಕೇಂದ್ರಕ್ಕೆ ಬಂದು ಹೋಗಲು ಬಡವರು ಹಣ ಹಾಗೂ ಸಮಯ ವ್ಯಯಿಸಬೇಕಾಗುತ್ತದೆ. ಅದನ್ನು ತಪ್ಪಿಸಿ, ಯಾವುದೇ ದಾಖಲೆಗಳು ಸಾರ್ವಜನಿಕರಿಗೆ ಬೆರಳ ತುದಿಯಲ್ಲಿಯೇ ಸಿಗುವಂತೆ ಮಾಡುವುದು ಯೋಜನೆಯ ಮೂಲಉದ್ದೇಶ.
ಸಾರ್ವಜನಿಕರಿಗೂ ಲಭ್ಯ: ಸಾರ್ವಜನಿಕರು ಯಾವುದೇ ದಾಖಲೆ ಬೇಕಾದರೂ ಆನ್​ಲೈನ್ ಮೂಲಕವೇ ಪಡೆಯಬಹುದು. ತಾಲೂಕು ಕಚೇರಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ. ಆನ್​ಲೈನ್​ನಲ್ಲಿ ನೋಡಬಹುದು. ಡೌನ್​ಲೋಡ್ ಸಹ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ.
ಆದರೆ, ಯಾವುದೇ ಪ್ರಕರಣದಲ್ಲಿ ನ್ಯಾಯಾಲಯಗಳಿಗೆ ಸಲ್ಲಿಸಲು ಅಥವಾ ಇನ್ನಾವುದೇ ಕೆಲಸಕ್ಕೆ ಅಧಿಕೃತವಾಗಿ ಬೇಕಾದರೆ ಪ್ರಮಾಣೀಕೃತ (ಸರ್ಟಿಫೈಡ್) ಪ್ರತಿಯನ್ನು ಪಡೆಯಲು ಅವಕಾಶ ಇರುತ್ತದೆ. ಯಾವುದೇ ದಾಖಲೆಗಳು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತೆ ಇರಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ.
ಪ್ರತಿಯೊಂದು ದಾಖಲೆಯನ್ನು ಸ್ಕಾ್ಯನಿಂಗ್ ಮಾಡಲಾಗುತ್ತದೆ. ಅದನ್ನು ಇಂಡೆಕ್ಸ್ ಮಾಡಿ ಸುಲಭವಾಗಿ ಲಭ್ಯವಾಗುವಂತೆ ಮಾಡಲಾಗುತ್ತದೆ. ಸ್ಕಾ್ಯನಿಂಗ್ ಜತೆಗೆ ಹಳೆಯ ದಾಖಲೆಗಳನ್ನು ಸುಭದ್ರವಾಗಿ ಸಂರಕ್ಷಣೆ ಕೆಲಸ ಮಾಡಲಾಗುತ್ತದೆ.
ಆರು ತಾಲೂಕುಗಳಲ್ಲಿ 10 ದಿನದಲ್ಲಿ ದಾಖಲೆಗಳ ಡಿಜಿಟಲೀಕರಣ ಕಾರ್ಯ ಆರಂಭವಾಗಲಿದೆ. ಎರಡು ತಿಂಗಳಲ್ಲಿ ಡಿಜಿಟಲೀಕರಣ ಮುಕ್ತಾಯವಾಗಬೇಕೆಂದು ಸರ್ಕಾರ ಗುರಿ ನೀಡಿದೆ. ಪ್ರತೀ ತಾಲೂಕಿನಲ್ಲಿ ದಾಖಲೆಗಳ ಡಿಜಿಟಲೀಕರಣಕ್ಕೆ ಮೂರು ತಿಂಗಳ ಕಾಲಾವಕಾಶ ಬೇಕೆಂದು ಗುತ್ತಿಗೆ ಪಡೆದ ಕಂಪನಿಗಳು ಕೇಳುತ್ತಿವೆ. ಆದರೆ, ಸರ್ಕಾರ ಎರಡು ತಿಂಗಳ ಗಡುವು ನೀಡಿದೆ ಎಂದು ಕಂದಾಯ ಇಲಾಖೆಯ ಮೂಲಗಳು ಹೇಳಿವೆ. ಡಿಜಿಟಲೀಕರಣ ಕಾರ್ಯಕ್ಕೆ ಈಗ 10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಹೆಚ್ಚಿನ ಹಣದ ಅಗತ್ಯ ಬಿದ್ದರೆ ಅದನ್ನು ಭರಿಸಲು ಸರ್ಕಾರ ಸಿದ್ಧವಿದೆ. ಈ ಆರು ತಾಲೂಕುಗಳು ಡಿಜಿಟಲೀಕರಣಗೊಂಡ ಬಳಿಕ ನ್ಯೂನತೆಗಳಿದ್ದರೆ ಸರಿಪಡಿಸಿಕೊಂಡು ಉಳಿದ ತಾಲೂಕುಗಳಿಗೆ ವಿಸ್ತರಣೆ ಮಾಡಲಾಗುತ್ತದೆ.
ಎಲ್ಲ ತಾಲೂಕು ಕಚೇರಿಗಳನ್ನು ಇ-ಆಫೀಸ್ ವ್ಯಾಪ್ತಿಗೆ ತರಲಾಗಿದೆ. ಇದರಿಂದ ಯಾವ ದಾಖಲೆ ಎಲ್ಲಿದೆ ಎಂಬುದು ಸುಲಭವಾಗಿ ತಿಳಿಯಲಿದೆ. ಕಡತಗಳು ಕಣ್ಮರೆಯಾಗುವುದು ತಪು್ಪತ್ತದೆ. ಜನರಿಗೆ ತ್ವರಿತವಾಗಿ ಯಾವುದೇ ಸೇವೆ ನೀಡಲು ಸಾಧ್ಯವಾಗುತ್ತದೆ. ಒಟ್ಟಾರೆ ತಂತ್ರಜ್ಞಾನ ವನ್ನು ಸಮರ್ಥವಾಗಿ ಬಳಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಪ್ರತಿ ಗ್ರಾಮದ ಪ್ರತಿಯೊಂದು ಭೂಮಿಯ ಹಕ್ಕು ಯಾರಿಗೆ ಸೇರಿದೆ, ಯಾವಾಗ ಹಕ್ಕು ಬಂತು, ಗ್ರಾಮದ ನಕ್ಷೆಗಳು, ದೇವಾಲಯಗಳ ಆಸ್ತಿಯ ವಿವರಗಳು, ಸರ್ಕಾರಿ ಭೂಮಿಯ ವಿವರ, ಕೆರೆ, ಕಟ್ಟೆಗಳ ಮಾಹಿತಿ, ಶಾಲೆಗಳ ಜಮೀನಿನ ವಿವರಗಳು ಹೀಗೆ ಪ್ರತಿಯೊಂದರ ದಾಖಲೆಗಳು ರೆಕಾರ್ಡ್ ರೂಮ್ಲ್ಲಿವೆ.
ದಾಖಲೆಗಳನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ. ನೂರಾರು ವರ್ಷಗಳ ಮಹತ್ವದ ದಾಖಲೆಗಳು ಶಿಥಿಲಾವಸ್ಥೆಯಲ್ಲಿವೆ. ಇವುಗಳನ್ನು ಕಾಪಾಡಿದ್ದರೆ ಮುಂದಿನ ತಲೆಮಾರಿಗೆ ಅನೇಕ ಮಾಹಿತಿಗಳೇ ಸಿಗುವುದಿಲ್ಲ. ಅಲ್ಲದೆ, ದಾಖಲೆಗಳನ್ನು ತಿದ್ದಿ ಆಸ್ತಿಗಳ ಅಕ್ರಮ ಪರಭಾರೆ ಮಾಡಿರುವ ಪ್ರಕರಣಗಳು ನಡೆದಿವೆ. ಆ ಮೂಲಕ ದೊಡ್ಡಮಟ್ಟದ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡಲಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ತಿದ್ದುಪಡಿಯಂತಹ ಅನಾಹುತಗಳು ನಡೆಯದಂತೆ ತಡೆ ಹಿಡಿಯುವ ಕಾರಣಕ್ಕಾಗಿಯೇ ಡಿಜಿಟಲೀಕರಣ ಮಾಡಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
