ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಇವೆರಡೂ ತೀವ್ರ ಎದುರಾಳಿ ಕುಟುಂಬಗಳೆಂದೇ ಜನಜನಿತ. ಆದರೆ ಕಳೆದೆರಡು ದಿನಗಳಿಂದ ಈ ಎರಡೂ ಕುಟುಂಬಗಳ ಮಧ್ಯೆ ಲವ್ವಿ-ಡವ್ವಿ!
ನಿನ್ನೆ (ಸೋಮವಾರ) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬರ್ತ್‌ಡೇ ಇತ್ತು. ಅವರ ಕುಟುಂಬದ ರಾಜಕೀಯ ಶತ್ರು ಎಂದೇ ಪರಿಗಣಿತರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ದೇವೇಗೌಡರ ಮನೆಗೇ ಹೋಗಿ ಶುಭಾಶಯ ಕೋರಿದ್ದರು. ಅಷ್ಟೇ ಅಲ್ಲ, ದೇವೇಗೌಡರ ಪಕ್ಕ ನಸುನಗುತ್ತ ಕುಳಿತು ಊಟ ಮಾಡಿ ಅಚ್ಚರಿ ಮೂಡಿಸಿದ್ದರು.
ಈಗ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ- ಸಂಸದ ಡಿ.ಕೆ. ಸುರೇಶ್ ಸರದಿ. ಇಂದು (ಮಂಗಳವಾರ) ಇವರಿಬ್ಬರೂ ಜತೆಗೂಡಿ ಚನ್ನಪಟ್ಟಣ ತಾಲೂಕಿನ ಹಳ್ಳಿಗಳಿಗೆ ಭೇಟಿ ನೀಡಿದ್ದಾರೆ. ರೈತರ ಸಂಕಷ್ಟಗಳಿಗೆ ಜತೆಯಾಗಿಯೇ ಸ್ಪಂದಿಸಿದ್ದಾರೆ!
ಇದನ್ನೂ ಓದಿತ್ಯಾಜ್ಯ ನಿರ್ವಹಣೆಯಲ್ಲಿ ಸಾಂಸ್ಕೃತಿಕ ನಗರ ಮೈಸೂರಿಗೆ ಪಂಚತಾರಾ ಗ್ರೇಡ್​
ರಾಮನಗರ ತಾಲೂಕಿನಲ್ಲಿ ಎರಡು ದಿನಗಳ ಹಿಂದೆ ಬಿರುಗಾಳಿ ಸಹಿತ ಭಾರಿ ಮಳೆಗೆ 150 ಎಕರೆಯಷ್ಟು ಬಾಳೆ ತೋಟ ಹಾಗೂ ತೆಂಗಿನ ಮರಗಳು ಹಾನಿಗೀಡಾಗಿದ್ದವು. ಗೋವಿಂದಹಳ್ಳಿ, ಕೋಲೂರು, ಬೆಳಕೆರೆ, ಸೀಬನಹಳ್ಳಿ ಹಾಗೂ ಮುದಿಗೆರೆ ಗ್ರಾಮಗಳಲ್ಲಿನ ತೋಟಗಳಿಗೆ ಕುಮಾರಸ್ವಾಮಿ ಹಾಗೂ ಸುರೇಶ್ ಭೇಟಿ ನೀಡಿ ರೈತರನ್ನು ಸಂತೈಸಿದರು. ಅವರ ಜತೆಗೆ ಎಚ್‌ಡಿಕೆ ಪುತ್ರ, ನಟ ನಿಖಿಲ್ ಕೂಡ ಇದ್ದಿದ್ದು ಗಮನ ಸೆಳೆಯಿತು.
ಹಾನಿಗೀಡಾದ ಪ್ರತಿ ಎಕರೆ ಬಾಳೆತೋಟಕ್ಕೆ ವೈಯಕ್ತಿಕವಾಗಿ ಹತ್ತು ಸಾವಿರ ರೂ. ಪರಿಹಾರವನ್ನು ಎಚ್.ಡಿ.ಕೆ. ಘೋಷಣೆ ಮಾಡಿದರು.
https://www.facebook.com/VVani4U/videos/616978122268352/
ಹೊಲ-ಗದ್ದೆಯ ಮೇಲ್ವಿಚಾರಣೆಗೆ ತೆರಳಿದ್ದ ಅಪ್ಪ-ಮಗ ಹೆಣವಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 17 =
Remember me
