ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಕರೊನಾ ವಿಪತ್ತಿನ ನಡುವೆಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯದಲ್ಲಿ ಕಾಂಗ್ರೆಸ್ ಚಹರೆ ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದು, ಬೇರು ಮಟ್ಟದಿಂದ ಪಕ್ಷ ಸಂಘಟಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕಾರಕ್ಕೂ ಕರೊನಾ ಅವಕಾಶ ನೀಡದಾಯಿತು. ಈ ನಡುವೆಯೇ ಆರೋಗ್ಯ ತುರ್ತು ಸಂದರ್ಭದಲ್ಲಿ ಪಕ್ಷದ ಸಂಘಟನೆ ತೊಡಗಿಸಿಕೊಂಡ ಅವರು, ಇದೀಗ ಸಂಘಟನೆ ಕಡೆ ಚಿತ್ತ ಹರಿಸಿದ್ದಾರೆ. ಬಿಜೆಪಿಯಲ್ಲಿರುವ ಕೇಡರ್ ಆಧಾರಿತ ಸಂಘಟನೆಯಂತೆ ಕಾಂಗ್ರೆಸ್ ಸಂಘಟನೆಯನ್ನೂ ಬಲಗೊಳಿಸುವ ಹಿಂದಿನ ಆಲೋಚನೆಯನ್ನು ಕಾರ್ಯರೂಪಕ್ಕಿಳಿಸಲು ಮುಂದಾಗಿರುವ ಡಿಕೆಶಿ, ‘ಮಾಸ್ ಬೇಸ್’ನಿಂದ ಪಕ್ಷವನ್ನು ‘ಕೇಡರ್ ಬೇಸ್’ ಆಗಿ ಪರಿವರ್ತಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಈಗಾಗಲೆ ಹಿರಿಯ ಮುಖಂಡರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದು, ಎಲ್ಲರೂ ಇದೇ ಇಚ್ಛೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಸಂದೇಶ ಕಳಿಸಿರುವ ಡಿ.ಕೆ.ಶಿವಕುಮಾರ್, ತಮ್ಮ ಕಲ್ಪನೆಯನ್ನು ಬಿಡಿಸಿಟ್ಟಿದ್ದಾರೆ.
ವಿದ್ಯಾರ್ಥಿಗಳು, ಯುವಕರು, ಮಹಿಳೆಯರು, ಎಲ್ಲ ಘಟಕಗಳು, ಕೋಶಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಗುರಿ ನೀಡಿರುವ ಅವರು, ಜವಾಬ್ದಾರಿಯನ್ನೂ ನಿಗದಿ ಮಾಡಿದ್ದಾರೆ. ಪ್ರತಿಯೊಬ್ಬರು ಬೂತ್ ಸಂಘಟನೆಯನ್ನು ಶಕ್ತಿಶಾಲಿ ಮಾಡಲು ಬೂತ್​ನಿಂದಲೇ ಪ್ರತಿನಿಧಿಸುವಂತಾಗಬೇಕು. ಆ ಮೂಲಕ ಬೂತ್​ಗೆ ಶಕ್ತಿ ಕೊಡಬೇಕು, ಬೂತ್ ನಾಯಕರಿಗೆ ಗೌರವ ಕೊಡಬೇಕು. ಎಷ್ಟೇ ಹಿರಿಯ ನಾಯಕರಾದರೂ ಬೂತ್ ಪ್ರತಿನಿಧಿಯಾಗಿಯೇ ಸಂಘಟನೆ ಜವಾಬ್ದಾರಿಗೆ ಬರಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ‘ನಾವು, ನಮ್ಮ ಬೂತ್ ಗಟ್ಟಿ ಮಾಡೋಣ, ನಂತರ ತಾಲೂಕು, ಜಿಲ್ಲೆ, ರಾಜ್ಯ ಮಟ್ಟಕ್ಕೆ ಬರೋಣ’ ಎಂಬ ಸರಳ ಸೂತ್ರವನ್ನು ತಿಳಿಸಿಕೊಟ್ಟಿದ್ದಾರೆ.
ತಕ್ಷಣಕ್ಕೆ ಪ್ರತಿ ಬೂತ್​ನಲ್ಲಿ ಮಾಹಿತಿ ಸಂಗ್ರಹ ಮಾಡುವ ವ್ಯಕ್ತಿ ಅವಶ್ಯಕತೆ ಇದ್ದು, ಒಬ್ಬ ಮಾಹಿತಿ ಪ್ರತಿನಿಧಿ ಗುರುತಿಸಲು ಸೂಚಿಸಿದ್ದಾರೆ. ಹೀಗಾಗಿ ರಾಜ್ಯದ ಸರಾಸರಿ 54 ಸಾವಿರ ಮಾಹಿತಿ ಪ್ರತಿನಿಧಿಗಳ ಆಯ್ಕೆ ಶೀಘ್ರವೇ ನಡೆಯಲಿದೆ. ಜತೆಗೆ ಬೂತ್ ಹಂತದ ಸಾಮಾಜಿಕ ಜಾಲ ತಂಡ ರಚಿಸಬೇಕು ಮತ್ತು ನೀವೇ ನಿಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ. ಈ ಮಾಹಿತಿದಾರರು ತಮ್ಮ ಬೂತ್​ನ ಜಾತಿ ಲೆಕ್ಕಾಚಾರ, ಪ್ರಭಾವಿಗಳ ಮಾಹಿತಿಗಳನ್ನು ಪಕ್ಷಕ್ಕೆ ನೇರವಾಗಿ ಸಲ್ಲಿಸಲಿದ್ದಾರೆ. ಬೂತ್​ನ ಜಾಲತಾಣ ಹೇಗೆ ಕೆಲಸ ಮಾಡಬೇಕು ಎಂಬುದು ಇನ್ನೂ ನಿರ್ಧಾರವಾಗಿಲ್ಲ.
ಹೊಸ ಅಧ್ಯಕ್ಷರ ಉದ್ದೇಶವೇನು?
ಬಿಜೆಪಿಯ ಕೇಡರ್ ಗಟ್ಟಿಯಾಗಿದ್ದು, ಎಂಥದೇ ರಾಜಕೀಯ ಬೆಳವಣಿಗೆ ನಡೆದರೂ, ನಾಯಕತ್ವ, ಅಭ್ಯರ್ಥಿ ಬದಲಾದರೂ ಪಕ್ಷದೊಟ್ಟಿಗೆ ಗಟ್ಟಿ ಕಾರ್ಯಕರ್ತರು ಉಳಿಯುತ್ತಾರೆ. ಅದೇ ಮಾದರಿ ಪ್ರಯತ್ನ ನಡೆಸುವುದು.
ಕಳೆದ ಚುನಾವಣೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮತ ಪಡೆಯಲೇಬೇಕು ಎಂದು ಪ್ರತಿ ಬೂತ್​ಗೆ ಬಿಜೆಪಿ ಗುರಿ ನೀಡಿತ್ತು. ಆ ಪ್ರಕಾರವೇ ಚುನಾವಣೆ ತಂತ್ರ ರೂಪಿಸಿತ್ತು. ಅದರಲ್ಲಿ ತಕ್ಕಮಟ್ಟಿಗೆ ಯಶ ಸಾಧಿಸಿತ್ತು.
ಸಾಮಾಜಿಕ ಜಾಲತಾಣದಲ್ಲೇ ರಾಜಕೀಯ ನಡೆಯುತ್ತಿದೆ. ಬೂತ್ ಹಂತದಲ್ಲೂ ತಂಡಗಳಾದಾಗ ಪಕ್ಷದ ಸಂದೇಶಗಳು ಹೆಚ್ಚು ಜನರಿಗೆ ತಲುಪಿಸಲು ಸುಲಭವಾಗುತ್ತದೆ. ಮನವೊಲಿಕೆ ಚಟುವಟಿಕೆ ಕೂಡ ಸರಳವಾಗುತ್ತದೆ.
ಪಕ್ಷದ ಪ್ರತಿ ಮುಖಂಡರೂ, ಶಾಸಕರೂ ತಂತಮ್ಮ ಬೂತ್ ಬಗ್ಗೆ ಅಭಿಮಾನವಿಟ್ಟು ಗಮನ ಹರಿಸಿದಾಗ ಅಂತ ಕಡೆ ಪಕ್ಷ ಇನ್ನಷ್ಟು ಬೆಳೆಯುತ್ತದೆ, ಬಳಿಕ ಅಕ್ಕಪಕ್ಕದ ಬೂತ್​ಗಳ ಮೇಲೂ ಗಮನ ಹರಿಸಿಕೊಳ್ಳುತ್ತಾ ಹೋದರೆ ನೆಲೆ ವಿಸ್ತಾರವಾಗುತ್ತದೆ.
ಕರೊನಾ ಮಹಾಮಾರಿಗೆ ಕಲಬುರಗಿಯಲ್ಲಿ 5ನೇ ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ 20ಕ್ಕೆ ಏರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 3 =
Remember me
