ಬೆಂಗಳೂರು:ಕಾಂಗ್ರೆಸ್ ನಡೆಸುತ್ತಿರುವ ಭಾರತ ಐಕ್ಯತಾ ಯಾತ್ರೆಯ ಉದ್ದೇಶ ಸಾಮರಸ್ಯ ಸಮಾಜದಲ್ಲಿ ಸಾಮರಸ್ಯ ಸ್ಥಾಪಿಸುವುದು. ಭಾರತ ಐಕ್ಯತಾ ಯಾತ್ರೆ ಬಿಜೆಪಿ ನಾಯಕರ ಎದೆ ನಡುಗಿಸಿದೆ. ಹೀಗಾಗಿ ಜನಸಂಕಲ್ಪ ಯಾತ್ರೆ ಎಂಬ ನಾಟಕದ ಥೇರು ಎಳೆಯುತ್ತಿದ್ದಾರೆ. ಈ ಯಾತ್ರೆಯ ಉದ್ದೇಶವೇನು ಎಂದು ಸರಣಿ ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ನಾಯಕ‌ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಬಿಜೆಪಿ ಕಳೆದ ತಿಂಗಳು ದೊಡ್ಡಬಳ್ಳಾಪುರದಲ್ಲಿ ನಡೆಸಿದ ಸಾಧನಾ ಸಮಾವೇಶ ಜನರಿಲ್ಲದೆ ಸೋತು ಹೋಯಿತು.‌ ಈಗ ಯಾವ ಮುಖ ಇಟ್ಟುಕೊಂಡು ಬಿಜೆಪಿಯವರು ಬಿಎಸ್​​ವೈ, ಬೊಮ್ಮಾಯಿ ಹಾಗೂ ಕಟೀಲ್ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಇದು 40% ಕಮೀಷನ್ 50% ಪರ್ಸೆಂಟ್ ಏರಿಸುವ ಸಂಕಲ್ಪದ ಯಾತ್ರೆಯೇ? ಅಥವಾ ರಾಜ್ಯವನ್ನು ಭ್ರಷ್ಟಾಚಾರದಲ್ಲಿ ನಂ.1 ಮಾಡುವ ಯಾತ್ರೆಯೇ ಎಂದು ಪ್ರಶ್ನಿಸಿದ್ದಾರೆ.
2018 ರ ಪ್ರಣಾಳಿಕೆಯಲ್ಲಿ ಬಿಜೆಪಿ 600ಕ್ಕೂ ಹೆಚ್ಚು ಆಶ್ವಾಸನೆ ನೀಡಿತ್ತು. ಆ ಆಶ್ವಾಸನೆಗಳೆಲ್ಲ ಏನಾಯ್ತು? ಪ್ರಣಾಳಿಕೆ ಈಡೇರಿಸುವ ಸಂಕಲ್ಪ ಹಳ್ಳ ಹಿಡಿದಿದೆ. ಈಗ ಜನಸಂಕಲ್ಪ ಯಾತ್ರೆ ಎಂಬ ಹೊಸ ನಾಟಕವನ್ನು ಬಿಜೆಪಿ ಆರಂಭಿಸಿದೆ. ಇದು ಕಾಂಗ್ರೆಸ್​​ನ ಐಕ್ಯತಾ ಯಾತ್ರೆಯ ಯಶಸ್ಸಿನಿಂದ ಕಂಗೆಟ್ಟು ಬಿಜೆಪಿ ಮಾಡುತ್ತಿರುವ ಯಾತ್ರೆ ಎಂದು ಹೇಳಿದ್ದಾರೆ.
1@BSYBJP,@BSBommai&@nalinkateel‌'ಯಂಕ-ಸೀನಾ-ನಾಣಿ'ಯಂತೆ ಜನಸಂಕಲ್ಪ ಯಾತ್ರೆ ಕೈಗೊಂಡಿದ್ದಾರೆ.#ಭಾರತಐಕ್ಯತಾಯಾತ್ರೆಈ ಯಂಕ-ಸೀನಾ-ನಾಣಿಗಳ ಎದೆ ನಡುಗಿಸಿದೆ.ಹಾಗಾಗಿಯೇ ಜನಸಂಕಲ್ಪ ಯಾತ್ರೆ ಎಂಬ ನಾಟಕದ ಥೇರು ಎಳೆಯುತ್ತಿದ್ದಾರೆ‌.ಭಾರತ ಐಕ್ಯತಾ ಯಾತ್ರೆಯ ಉದ್ದೇಶ ಸಾಮರಸ್ಯ.ಯಂಕ-ಸೀನಾ-ನಾಣಿಗಳ ಜನಸಂಕಲ್ಪ ಯಾತ್ರೆಯ ಉದ್ದೇಶವೇನು?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
