ಬೆಂಗಳೂರು:ನಿನ್ನೆ ಲೋಕಸಭಾದಲ್ಲಿ ರಾಹುಲ್​ ಗಾಂಧಿಯವರು ಸಂಸತ್ತಿನಲ್ಲಿ ಆಡಿದ ನೇರ ನಿಷ್ಠೂರ ಮಾತುಗಳು ಬಿಜೆಪಿಯವರ ಬುಡಕ್ಕೆ ಬೆಂಕಿ ಕಾಯಿಸಿದಂತಿದೆ. ರಾಹುಲ್‌ ಮಾತುಗಳನ್ನು ಅರಗಿಸಿಕೊಳ್ಳಲಾಗದ ಅಶೋಕ್‌ರಂತಹ ರಾಜ್ಯ ಬಿಜೆಪಿ ನಾಯಕರು, ಅವರ ಭಾಷಣ ಸುಳ್ಳಿನ ಭಾಷಣ ಎಂದು ಒಂದಂಶದ ಷರಾ ಬರೆದಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಲೇವಡಿ ಮಾಡಿದ್ದಾರೆ.
ಇದನ್ನೂ ಓದಿ:ಮದುವೆಯಾದ 10 ದಿನಕ್ಕೆ ಝಹೀರ್ ಇಕ್ಬಾಲ್ ಕೈಗೆ ಚಪ್ಪಲಿ ಕೊಟ್ಟ ಸೋನಾಕ್ಷಿ ಸಿನ್ಹಾ
“ಇದೊಂದು ರೀತಿ ಕಂಡದನ್ನು ಕಂಡ ಹಾಗೇ ಹೇಳಿದರೆ ಕೆಲವರಿಗೆ ಕೆಂಡದಂತ ಕೋಪ ಎಂದ ಹಾಗೆ. ರಾಹುಲ್‌ರವರು ನಿನ್ನೆ ಪ್ರಸ್ತಾಪಿಸಿದ ಅಂಶಗಳು ಮೋದಿ ಸರ್ಕಾರದ ಕಳೆದ ಹತ್ತು ವರ್ಷಗಳ‌ ಆಡಳಿತ ವೈಫಲ್ಯದ ಕೈಗನ್ನಡಿಯಾಗಿತ್ತು. ಸತ್ಯ ಯಾವಾಗಲೂ‌ ಕಹಿ ಎಂಬಂತೆ ರಾಹುಲ್‌ರವರ ಸತ್ಯದ ಮಾತುಗಳು ಬಿಜೆಪಿಯವರಿಗೆ ಅಜೀರ್ಣವಾಗಿದೆ. ಚಲಾವಣೆಯಲ್ಲಿರಲು ಎಲ್ಲದಕ್ಕೂ ಪ್ರತಿಕ್ರಿಯಿಸುವ ಚಾಳಿ ಹೊಂದಿರುವ ಅಶೋಕ್‌ರವರು ನಿನ್ನೆಯ ರಾಹುಲ್​ ಭಾಷಣ ಮತ್ತೊಮ್ಮೆ ಕೇಳಿ ಪ್ರತಿಕ್ರಿಯಿಸಲಿ” ಎಂದರು.
“ರಾಹುಲ್ ಹೇಳಿದಂತೆ ‘ಅಗ್ನಿವೀರ್’ ಯೋಜನೆ ಯುವ ಜನರನ್ನು ವಂಚಿಸುತ್ತಿರುವುದು, ನೀಟ್ ಪರೀಕ್ಷಾ ಹಗರಣ, ನಿರುದ್ಯೋಗ ಸಮಸ್ಯೆಯಿರುವುದು, ಮೋದಿ ಸರ್ಕಾರ ಧರ್ಮದ ಆಧಾರದಲ್ಲಿ ದೇಶದಲ್ಲಿ ಹಿಂಸಾಚಾರಕ್ಕೆ ಪ್ರಚೋದಿಸುತ್ತಿರುವುದು, ಮಣಿಪುರದಲ್ಲಿ ರಕ್ತಪಾತವಾಗುತ್ತಿದ್ದಾಗ ಪ್ರಧಾನಿಯವರು ಬಾಯಿಗೆ ಬೀಗ ಹಾಕಿಕೊಂಡಿದ್ದು ಸುಳ್ಳೆ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಮದುವೆಯಾಗಲು ನಿರಾಕರಿಸಿದ್ದಕ್ಕೆ ಬಾಯ್​​ಫ್ರೆಂಡ್​ ಗುಪ್ತಾಂಗವನ್ನೇ ಕತ್ತರಿಸಿದ ಯುವತಿ!
“ರೈತರ ಬಹುದಿನದ ಬೇಡಿಕೆಯಾದ ಎಂಎಸ್​ಪಿ ನಿರಾಕರಿಸುತ್ತಿರುವುದು, ಮೋದಿಯವರು ಅಂಬಾನಿ-ಅದಾನಿಯವರ ಪವರ್ ಆಫ್ ಅಟಾರ್ನಿಯಂತೆ ಆಡಳಿತ ನಡೆಸುತ್ತಿರುವುದು ಅಸತ್ಯವೇ? ಯಾವುದು ಸುಳ್ಳು? ಹೇಳಿ ಅಶೋಕ್‌ ಅವರೇ” ಎಂದು ದಿನೇಶ್ ಗುಂಡೂರಾವ್​ ತಮ್ಮ ಎಕ್ಸ್​ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.
ಕ್ರಿಕೆಟ್​ ಫ್ಯಾನ್ಸ್​ಗೆ ಸಿಹಿಸುದ್ದಿ! ಯಾವುದೇ ತೊಂದರೆಯಿಲ್ಲದೆ ಭಾರತಕ್ಕೆ ಮರಳುತ್ತಿದ್ದಾರೆ ವಿಶ್ವಕಪ್​ ಚಾಂಪಿಯನ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − nine =
Remember me
