ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸರಣಿ ಟ್ವೀಟ್​ ಮಾಡುವ ಮುಖೇನ ಆರೋಪಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್​, ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕನ್ನಡ ಬೆಳವಣಿಗೆಗೆ ಹೆಚ್ಚಿನ ಅನುದಾನ ಸಿಗಲಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ
ಈ ಕುರಿತು ಟ್ವೀಟ್​ ಮಾಡಿರುವ ಅವರು, “ಮೋದಿಯವರು ಮೌನವಾಗುವ ಸಂದರ್ಭಗಳಿದು, ಗಲಭೆಗಳಾದಾಗ, ಸಾಮೂಹಿಕ ನರಮೇಧಗಳಾಗುವಾಗ, ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ, ಬೆಲೆ ಏರಿಕೆಯಾದಾಗ, ಪಿಎಂ ಕೇರ್ಸ್ ಫಂಡ್ ಬಗ್ಗೆ ಕೇಳಿದಾಗ, 2 ಕೋಟಿ ಉದ್ಯೋಗದ ಬಗ್ಗೆ ಪ್ರಶ್ನಿಸಿದಾಗ, ಕಪ್ಪುಹಣದ ಬಗ್ಗೆ ಕೇಳಿದಾಗ ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ, ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ” ಎಂದು ಹೇಳಿದ್ದಾರೆ.
1ಮೋದಿಯವರು ಮೌನವಾಗುವ ಸಂದರ್ಭಗಳು.
* ಗಲಭೆಗಳಾದಾಗ* ಸಾಮೂಹಿಕ ನರಮೇಧಗಳಾಗುವಾಗ* ಮಹಿಳೆಯರ ನಗ್ನ ಮೆರೆವಣಿಗೆಯಾಗುವಾಗ* ಬೆಲೆಯೇರಿಕೆಯಾದಾಗ* PMCares ಫಂಡ್ ಬಗ್ಗೆ ಕೇಳಿದಾಗ* 2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ* ಕಪ್ಪುಹಣದ ಬಗ್ಗೆ ಕೇಳಿದಾಗ* ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ
ಈ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao)August 2, 2023

“ಮೋದಿಯವರು ಮಾತನಾಡುವ ಸಂದರ್ಭಗಳಿದು, ಚುನಾವಣೆ ಬಂದಾಗ, ಪ್ರಚಾರಕ್ಕೆ ಕರೆದಾಗ, ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ,ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ, ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ‌ ಪಕ್ಷದ ನಾಯಕರು ಎದುರಿರುವ ಸಂದರ್ಭಗಳಲ್ಲಿ ಮಾತ್ರ ‌ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ” ಎಂದು ಹೇಳಿದ್ದಾರೆ.
3ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ.
ಆದರೆ ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ.
ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ?
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao)August 2, 2023

“ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದ್ರೆ, ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ. ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ?” ಎಂದು ಸರಣಿ ಟ್ವೀಟ್​ ಮುಖೇನ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
VIDEO | ಮೆಟ್ರೋ ರೈಲಿನೊಳಗೆ ಪುಟ್ಟ ಪೋರಿಯ ಡ್ಯಾನ್ಸ್​; ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:six + 15 =
Remember me
