ಬೆಂಗಳೂರು:ಸಚಿವರೊಬ್ಬರದ್ದು ಎನ್ನಲಾದ ಅಶ್ಲೀಲ ವಿಡಿಯೋ ಸಂಬಂಧ ಪಟ್ಟಂತೆ ದೂರು ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್​ ಕಲ್ಲಹಳ್ಳಿ ಇದೀಗ ದೂರನ್ನು ವಾಪಸ್ ಪಡೆದಿದ್ದಾರೆ. ಅಷ್ಟಕ್ಕೂ ಅವರು ದೂರು ವಾಪಸ್ ಪಡೆದಿರುವುದಕ್ಕೆ ಕಾರಣವೇನು? ಆ ಪ್ರಶ್ನೆಗೆ ಅವರೇ ಪತ್ರದ ಮೂಲಕ ಉತ್ತರ ನೀಡಿದ್ದಾರೆ.
ದಿನೇಶ್​ ಅವರು ಬೆಂಗಳೂರಿನ ಕಬ್ಬನ್​ ಪಾರ್ಕ್​ ಸರ್ಕಲ್​ ಇನ್​ಸ್ಪೆಕ್ಟರ್​ಗೆ ದೂರು ವಾಪಾಸು ಪಡೆಯುವ ಕುರಿತಾಗಿ ಪತ್ರ ಬರೆದಿದ್ದಾರೆ. ಬಟ್ಟೆ ಮುಳ್ಳ ಮೇಲೆ ಬಿದ್ದರೂ, ಮುಳ್ಳು ಬಟ್ಟೆ ಮೇಲೆ ಬಿದ್ದರೂ ಹರಿಯುವುದು ಬಟ್ಟೆ ಮಾತ್ರ. ಅದೇ ರೀತಿ ಈ ಪ್ರಕರಣದಲ್ಲಿ ಆಗಿದೆ. ನನ್ನನ್ನು ಸಾಮಾಜಿಕ ಕಾರ್ಯಕರ್ತನಾಗಿ ಬಲ್ಲವರೊಬ್ಬರು ನನಗೆ ಈ ಸಿಡಿ ಕಳುಹಿಸಿಕೊಟ್ಟು, ಒಂದು ವೇಳೆ ಇಲ್ಲಿ ಲೈಂಗಿಕ ದೌರ್ಜನ್ಯವಾಗಿದ್ದರೆ ನ್ಯಾಯ ಕೊಡಿಸಿ ಎಂದು ಕೇಳಿದ್ದರು. ಅದರಂತೆ ನಾನು ಅದನ್ನು ಎಲ್ಲಿಯೂ ಬಹಿರಂಗ ಪಡಿಸದೆ ನೇರವಾಗಿ ಕಮಿಷನರ್​ ಕಚೇರಿಗೆ ಕಳುಹಿಸಿದ್ದೆ. ಕಬ್ಬನ್​ ಪಾರ್ಕ್​ ಪೊಲೀಸರಿಗೂ ಕಳುಹಿಸಿದ್ದೆ. ಒಂದು ವೇಳೆ ಇಲ್ಲಿ ಮಹಿಳೆಗೆ ಲೈಂಗಿಕ ದೌರ್ಜನ್ಯವಾಗಿದ್ದರೆ ನ್ಯಾಯ ಸಿಗಲಿ ಎನ್ನುವ ಉದ್ದೇಶದಿಂದಷ್ಟೇ ದೂರು ಕೊಟ್ಟಿದ್ದು. ಆದರೆ ಅದಕ್ಕೆ ಬೇರೆಯದ್ದೇ ರೂಪ ಕೊಡಲಾಯಿತು. shoot the messenger ಎನ್ನುವ ನೀತಿ ಪಾಲನೆಯಾಯಿತು.
ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಮಹಿಳೆಯ ಬಗ್ಗೆ ತೀರಾ ಕೆಟ್ಟದಾಗಿ ಬಿಂಬಿಸಲಾಯಿತು. ಆಕೆ ದೇಶಕ್ಕೇ ಕಂಟಕ ಎನ್ನುವ ಹೇಳಿಕೆಯನ್ನು ನೀಡಲಾಯಿತು. ಜಾತಿ ಸಂಘಟನೆಗಳು ಹಲವಾರು ರೀತಿಯಲ್ಲಿ ವ್ಯಾಖ್ಯಾನ ಮಾಡಿದವು. ನಾನು ದೂರು ನೀಡಿದ ಉದ್ದೇಶವೇ ಮಹಿಳೆಗೆ ಮತ್ತು ಮಾಹಿತಿದಾರನಾದ ನನಗೆ ತಿರುಗಬಾಣದಂತಾಗಿದೆ. ಮಹಿಳೆ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ನಾನು ಈ ದೂರನ್ನು ವಾಪಸ್ ಪಡೆಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಮಂಚದ ಮೇಲೆ ನೇಣಿಗೆ ಶರಣಾದ ಮಹಿಳೆ! ಗಂಡನೇ ಕೊಲೆ ಮಾಡಿರುವ ಶಂಕೆ

ಮಗಳ ಹೆಸರೇ ಮನೆಯ ಹೆಸರು! ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಲ್ಲಿ ಹೊಸ ವರಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seventeen =
Remember me
