ಬೆಂಗಳೂರು: ಡಿಪ್ಲೊಮಾ ಕೋರ್ಸ್ ವೈಭವವನ್ನು ಮರುಕಳಿಸುವ ಉದ್ದೇಶದಿಂದ ಸರ್ಕಾರ ಕೋರ್ಸ್ ಪಠ್ಯ ಮತ್ತು ಸ್ವರೂಪವನ್ನು ಆಮೂಲಾಗ್ರ ಬದಲಾಯಿಸುವ ಕಾರ್ಯಕ್ಕೆ ಕೈಹಾಕಿದೆ. ಈ ಕೋರ್ಸ್​ನ ಪ್ರತಿ ವರ್ಷದ ಪ್ರಮಾಣ ಪತ್ರದ ಮೇಲೆ ಉದ್ಯೋಗ ಪಡೆದುಕೊಳ್ಳಲು ಅವಕಾಶ ಕಲ್ಪಿಸುವುದು ಮತ್ತು ಕೈಗಾರಿಕೆ, ಉದ್ಯಮ ನಿರೀಕ್ಷಿಸುವ ಕೌಶಲಗಳನ್ನು ಪಠ್ಯದಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಈಗಿರುವ ಡಿಪ್ಲೊಮಾ ಪಠ್ಯವೂ ಸಕಾಲಿಕವಾಗಿಲ್ಲ, ಇವತ್ತಿನ ಕೈಗಾರಿಕೆ ಅಗತ್ಯಗಳಿಗೆ ಅದು ಅಪ್ರಸ್ತುತವಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಅಗತ್ಯ ಇರುವ, ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಹಾಗೂ ಸದಾಕಾಲ ಕೆಲಸಕ್ಕೆ ಅರ್ಹತೆ ಕಲ್ಪಿಸಬಲ್ಲ ಪಠ್ಯವನ್ನು ಸಂಬಂಧಪಟ್ಟ ಎಲ್ಲರ ಜತೆ ರ್ಚಚಿಸಿ ರೂಪಿಸಲಾಗುತ್ತಿದೆ ಎಂದು ವಿವರಿಸಿದರು. ಪ್ರತೀ ವರ್ಷಕ್ಕೆ ರಾಜ್ಯದಲ್ಲಿ 40,000 ಅಂತಿಮ ವರ್ಷದ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದು, ಈ ಪೈಕಿ ಶೇ.20 ವಿದ್ಯಾರ್ಥಿಗಳಿಗೂ ಉದ್ಯೋಗ ಸಿಗುತ್ತಿಲ್ಲ ಎಂದರು. ಪ್ರಮುಖವಾಗಿ ಮೊದಲ ವರ್ಷ, 2ನೇ ವರ್ಷ ಅಥವಾ ಮೂರನೇ ವರ್ಷ ಮುಗಿಯುತ್ತಿದ್ದಂತೆ ಆ ಪ್ರಮಾಣ ಪತ್ರದ ಮೇಲೆ ಕೆಲಸ ಪಡೆದುಕೊಳ್ಳುವಂತೆ ಸ್ವರೂಪ ಬದಲಿಸಲಾಗುತ್ತಿದೆ ಎಂದರು.
ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ 5 ಲಕ್ಷ ವಿದ್ಯಾರ್ಥಿ ಗಳಿಗೆ ತಂತ್ರಜ್ಞಾನದ ಮೂಲಕ ಶಿಕ್ಷಣ ನೀಡುವ ಎಲ್​ಎಂಎಸ್ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ಹೇಳಿದರು. ರಾಜ್ಯದಲ್ಲಿರುವ ಒಟ್ಟು 8 ಸಾವಿರ ತರಗತಿ ಕೊಠಡಿಗಳನ್ನು ಸ್ಮಾರ್ಟ್ ಕ್ಲಾಸ್ ರೂಂ ಆಗಿ ಪರಿವರ್ತಿಸಲಾಗುತ್ತಿದೆ. ಮೊದಲ ಹಂತದಲ್ಲಿ 2.500 ರೂಂಗಳನ್ನು ಸ್ಮಾರ್ಟ್​ಕ್ಲಾಸ್​ಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಹೈಸ್ಪೀಡ್ ಇಂಟರ್​ನೆಟ್, ಪವರ್ ಪಾಯಿಂಟ್ ಪ್ರಸಂಟೇಶನ್ ಬಳಕೆ, 2 ಕೆವಿ ಬ್ಯಾಕ್​ಅಪ್ ಬ್ಯಾಟರಿ ಸೌಲಭ್ಯ ತರಗತಿಗಳಿಗೆ ಕಲ್ಪಿಸಲಾಗುವುದು ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 14 =
Remember me
