| ವಿಲಾಸ ಮೇಲಗಿರಿ
ಬೆಂಗಳೂರು:ವರ್ಗಾವಣೆ ವಿಳಂಬ, ಗೊಂದಲ, ಜಟಿಲ ಕಾಯ್ದೆಯ ಸವಾಲುಗಳಿಂದಾಗಿ ರಾಜ್ಯದ ನೂರಾರು ಶಿಕ್ಷಕರೀಗ ವರ್ಗಾವಣೆಗಾಗಿ ರಾಜ‘ತಾಂತ್ರಿಕ’ ಮಾರ್ಗ ಕಂಡುಕೊಂಡಿದ್ದಾರೆ. ಹತ್ತಾರು ವರ್ಷಗಳಿಂದ ಒಂದೇ ಕಡೆ ಇದ್ದು, ವರ್ಗಾವಣೆ ಸಿಗದೆ ರೋಸಿ ಹೋಗಿರುವ ಅನೇಕರು ತಮಗಿಷ್ಟವಾದ ಸ್ಥಳಗಳಿಗೆ ಬರಲು ಖಾಲಿ ಇರುವ ತಾಂತ್ರಿಕ ಹುದ್ದೆಗಳನ್ನು ವಾಮಮಾರ್ಗವಾಗಿ ಬಳಸಿಕೊಂಡಿದ್ದಾರೆ. ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆ ನಡೆದಿಲ್ಲ. ಅದಕ್ಕೂ ಮೊದಲು ವರ್ಗಾವಣೆಯಾದಾಗಲೂ ಅನೇಕರಿಗೆ ನಾನಾ ಕಾರಣಗಳಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಬರಲು ಆಗಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಹುದ್ದೆ ಭರ್ತಿ ಮಾಡದಿರುವುದರಿಂದ ನಿಯಮದ ಪ್ರಕಾರ ವರ್ಗಾವಣೆ ಸಿಗದಿರುವ ಶಿಕ್ಷಕರಂತೂ ಕಂಗಾಲಾಗಿದ್ದಾರೆ.
ಶಾಲೆಗಳಲ್ಲಿ ಪಾಠ ಮಾಡಬೇಕಾದ ಅನುಭವಿ ಶಿಕ್ಷಕರೇ ಬೇರೆ ಬೇರೆ ದಾರಿಯ ಮೂಲಕ ವರ್ಗಾವಣೆ ಆಗುತ್ತಿರುವುದರಿಂದ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ ಎಂಬ ಪ್ರಶ್ನೆ ಶೈಕ್ಷಣಿಕ ವಲಯದಲ್ಲಿ ತಲೆ ಎತ್ತಿದೆ.
ತಾಂತ್ರಿಕ ಹುದ್ದೆ ಯಾವುವು?
ಕರೊನಾ ಕಾರಣದಿಂದ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ವಿಳಂಬವಾಗುತ್ತಿದೆ. ಇದರಿಂದ ಕೆಲ ಶಿಕ್ಷಕರು ಕಾರ್ಯಕ್ರಮ ಸಹಾಯಕ, ಕಂಪ್ಯೂಟರ್ ಶಿಕ್ಷಣ ಬೋಧಕ, ತಾಂತ್ರಿಕ ಸಹಾಯಕ, ಟ್ಯೂಟರ್, ಕ್ಷೇತ್ರ ಸಮನ್ವಯಾಧಿಕಾರಿ, ಕಿರಿಯ ಸಂಶೋಧನಾಧಿಕಾರಿ, ಪರಿವೀಕ್ಷಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಸಹಾಯಕ ನಿರ್ದೇಶಕರು ಮತ್ತಿತರ ಹುದ್ದೆ ಹೆಸರಲ್ಲಿ ತಮಗಿಷ್ಟವಾದ ಸ್ಥಳಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಅನೇಕ ಕಡೆ ಅತಂತ್ರ
ಬಿ ದರ್ಜೆ ಹುದ್ದೆಗಳಲ್ಲಿರುವ ಕೆಲವರು ನೇರವಾಗಿ ಸ್ವಯಂ ಬಿಡುಗಡೆಗೊಂಡು ನಿಗದಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿ ಕೊಂಡಿದ್ದಾರೆ. ಆದರೆ, ಸಹಾಯಕ ಶಿಕ್ಷಕರು ಆಯುಕ್ತಾಲಯದಿಂದ ಚಲನ-ವಲನ (ಮೂವ್​ವೆುಂಟ್ ಆರ್ಡರ್)ಆದೇಶ ಪಡೆದು ವರ್ಗಾಯಿತ ಸ್ಥಳಕ್ಕೆ ಬರಲು ಸಾಧ್ಯವಾಗದೆ ಇನ್ನೂ ಕೆಲವರು ಒದ್ದಾಡುತ್ತಿದ್ದಾರೆ. ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಮುಗಿದ ಮೇಲೆ ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಅವಶ್ಯವಿದ್ದರಷ್ಟೇ ವರ್ಗಾವಣೆ ಮಾಡುವ ಪರಮಾಧಿಕಾರ ಸರ್ಕಾರಕ್ಕಿದೆ. ಈಗ ವರ್ಗಾವಣಾ ಪ್ರಕ್ರಿಯೆ ಶುರುವಾಗಿದೆ. ಅದಕ್ಕೂ ಮುನ್ನವೇ ಅನೇಕ ಶಿಕ್ಷಕರನ್ನು ಸರ್ಕಾರ ವರ್ಗ ಮಾಡಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ, ಹಿಂದೆಂದೂ ತಾಂತ್ರಿಕ ಹುದ್ದೆ ನೆಪದಲ್ಲಿ ಇಷ್ಟೊಂದು ಸಂಖ್ಯೆಯ ವರ್ಗಾವಣೆಯಾದ ಉದಾಹರಣೆಗಳಿಲ್ಲ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 3 =
Remember me
