ಬೆಂಗಳೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊಸ ರೂಪದಲ್ಲಿ ಜನರ ನಡುವೆ ಕಾಣಿಸಿಕೊಳ್ಳುತ್ತಿದೆ. ಇಷ್ಟು ದಿನಗಳವರೆಗೆ ಸುದ್ದಿಮಾಧ್ಯಮಗಳಿಗೆ ಸರ್ಕಾರದ ಸುದ್ದಿ ತಲುಪಿಸುವ ಕೆಲಸ ಮತ್ತು ಸರ್ಕಾರಿ ಕಾರ್ಯಕ್ರಮಗಳನ್ನು ಸಾರ್ವಜನಿಕರಿಗೆ ಪ್ರಚಾರ ಮಾಡುತ್ತಿದ್ದ ಇಲಾಖೆ, ಈ ಕರ್ತವ್ಯದ ಜತೆಗೆ ಇದೀಗ ಜನರ ಸಮಸ್ಯೆಗೆ ಕಿವಿಯಾಗುತ್ತಿದೆ.
ಸರ್ಕಾರದ ಯಾವುದೇ ಇಲಾಖೆಯ ಸಮಸ್ಯೆಯನ್ನೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬಳಿ ಹೇಳಿಕೊಳ್ಳಲು ಒಂದು ವೇದಿಕೆ ಸೃಷ್ಟಿಯಾಗಿದೆ. ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಟ್ವಿಟ್ಟರ್ ಮೂಲಕ ಈ ಅವಕಾಶ ಸೃಷ್ಟಿಸಿದ್ದು, ಇದರ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಹೊಸ ವರ್ಷದ ಆರಂಭದಲ್ಲಿ ಆರಂಭಿಸಿದ ಈ ವೇದಿಕೆಗೆ ವಿದ್ಯುತ್, ರಸ್ತೆ, ಸಾರಿಗೆ ಸೇರಿ ವಿವಿಧ ಇಲಾಖೆಗಳ ಆಡಳಿತ ವಿಷಯದ ದೂರುಗಳನ್ನು ಸಾರ್ವಜನಿಕರು ನೀಡಿದ್ದಾರೆ. ಸಾರ್ವಜನಿಕ ಸಂಪರ್ಕ ಇಲಾಖೆಯೂ ಆ ದೂರನ್ನು ಸಂಬಂಧಪಟ್ಟ ಇಲಾಖೆ ಮುಖ್ಯಸ್ಥರಿಗೆ ರವಾನಿಸಿ ಪ್ರತ್ಯುತ್ತರ ಬಯಸುತ್ತಿದೆ. ಡಾಕೇಟ್ ನಂಬರ್ ಸೃಷ್ಟಿಸಿ ಅದನ್ನು ಫಾಲೋಅಪ್ ಮಾಡುವ ಮೂಲಕ ದೂರು ಕೊಟ್ಟವರಿಗೆ ಟ್ವಿಟ್ಟರ್ ಮೂಲಕವೇ ಪರಿಹಾರ ಒದಗಿಸಲು ಪ್ರಯತ್ನ ನಡೆಸಲಾಗಿದೆ. ಮೀಟರ್ ಬಡ್ಡಿ ದಂಧೆ ಬಗ್ಗೆಯೂ ದೂರೊಂದು ಸಲ್ಲಿಕೆಯಾಗಿತ್ತು. ತಕ್ಷಣವೇ ಇಲಾಖೆ ಸಂಬಂಧಪಟ್ಟ ಪೊಲೀಸ್ ಠಾಣೆವರೆಗೂ ವಿಷಯ ತೆಗೆದುಕೊಂಡು ಹೋಗಿ ಜಾಗೃತಿ ಮೂಡಿಸಲಾಗಿದೆ. ಈ ಪ್ರಯತ್ನಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಯಿಂದ ಜನರಿಗಾಗುತ್ತಿರುವ ಕಿರುಕುಳದ ಬಗ್ಗೆ ಬಂದ ದೂರನ್ನು ಎಸ್ಪಿ, ಡಿಸಿಗಳ ಗಮನಕ್ಕೆ ತರಲಾಯಿತು. ಕೂಡಲೇ ಸ್ಪಂದಿಸಿದ ಎಸ್ಪಿ, ಎಲ್ಲ ಠಾಣೆಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕಲಘಟಗಿ ಇನ್ಸ್​ಪೆಕ್ಟರ್ ಕರಪತ್ರ ಹಂಚಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಇಲಾಖೆ ಟ್ವೀಟ್ ಮೂಲಕವೇ ಕಾರ್ಯನಿರ್ವಹಣೆಯನ್ನು ಕಟ್ಟಿಕೊಟ್ಟಿದೆ. ಕೆಲವು ಪ್ರಕರಣಗಳಲ್ಲಿ ಇಲಾಖೆ ಕಾರ್ಯದರ್ಶಿ ಮಣಿವಣ್ಣನ್ ಅವರೇ ಸಾರ್ವಜನಿಕೊಂದಿಗೆ ಅಭಿಪ್ರಾಯ ಹಂಚಿಕೊಂಡು ಸಮಸ್ಯೆ ಆಲಿಸಿದ್ದಾರೆ. ಆಡಳಿತ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ಸಲಹೆ, ಪ್ರತಿಕ್ರಿಯೆ ಮತ್ತು ಅಹವಾಲುಗಳು ಹಾಗೂ ಕುಂದುಕೊರತೆಗಳನ್ನು ಟ್ಯಾಗ್ ಮಾಡಲು ಕೋರುತ್ತೇವೆ ಎಂದು ಇಲಾಖೆ ಸಾರ್ವಜನಿಕರನ್ನು ಕೋರಿದೆ. ಸಂಪರ್ಕ ವಿಳಾಸ@Karnataka_DIPR.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 19 =
Remember me
