ಬೆಂಗಳೂರು:ಪರಿಶಿಷ್ಟ ಜಾತಿ/ಪಂಗಡಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸಲು ರೋಸ್ಟರ್ ಬಿಂದುಗಳನ್ನು ಗುರುತಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಪೂರ್ಣಗೊಳಿಸಿದೆ. ಎಸ್​ಸಿ, ಎಸ್​ಟಿ ಮೀಸಲು ಹೆಚ್ಚಳದ ಪ್ರಮಾಣವನ್ನು ಸಾಮಾನ್ಯ ವರ್ಗದಿಂದ ಕಡಿತಗೊಳಿಸಿ ಸರಿದೂಗಿಸಲಾಗಿದೆ. ರೋಸ್ಟರ್ ಬಿಂದು ಗುರುತಿಸುವ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎಲ್ಲ ನೇರ ನೇಮಕಾತಿ ಹಾಗೂ ಮುಂಬಡ್ತಿ ಪ್ರಕ್ರಿಯೆಗಳು ತಕ್ಷಣದಿಂದಲೇ ಪುನರಾರಂಭಗೊಳ್ಳಲಿವೆ.
ಸರ್ಕಾರ ಎಸ್​ಸಿ ಮೀಸಲು ಪ್ರಮಾಣವನ್ನು ಶೇ.15ರಿಂದ 17ಕ್ಕೆ ಹಾಗೂ ಎಸ್​ಟಿ ಮೀಸಲನ್ನು ಶೇ.3ರಿಂದ 7ಕ್ಕೆ ಹೆಚ್ಚಿಸಿದೆ. ಈಗ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಇದರ ಅನುಷ್ಠಾನಕ್ಕೆ ಅಧಿಸೂಚನೆ ಪ್ರಕಟವಾಗಿದೆ. ಎಲ್ಲ ಹುದ್ದೆಗಳ ಮೀಸಲಾತಿ ಪ್ರಮಾಣದ ಮರು ನಿಗದಿಪಡಿಸಿರುವ ಪ್ರಕಾರ ಮೀಸಲಾತಿ ಈಗ ಶೇ.56ಕ್ಕೆ ಹೆಚ್ಚಿದ್ದು, ಸಾಮಾನ್ಯ ವರ್ಗದ ಮೀಸಲಾತಿಯನ್ನು ಶೇ.44ಕ್ಕೆ ಸೀಮಿತಗೊಳಿ ಸಲಾಗಿದೆ. ಅಂತೆಯೇ, ಪ್ರವರ್ಗ ಒಂದಕ್ಕೆ ಶೇ.4, 2(ಎ)ಗೆ ಶೇ.15, 2(ಬಿ)ಗೆ ಶೇ.4, 3 (ಎ)ಗೆ ಶೇ.4, 3(ಬಿ)ಗೆ ಶೇ.5, ಪರಿಶಿಷ್ಟ ಜಾತಿಗೆ ಶೇ.17, ಪರಿಶಿಷ್ಟ ಪಂಗಡಕ್ಕೆ ಶೇ.7 ಹಾಗೂ ಸಾಮಾನ್ಯ ವರ್ಗಕ್ಕೆ ಶೇ.44 ಎಂದು ನಿಗದಿ ಮಾಡಲಾಗಿದೆ. ಮುಂಬಡ್ತಿ ಹಾಗೂ ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ ಶೇ.6ರಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಹೊಸ ನೇಮಕಾತಿಗಷ್ಟೇ ಅನ್ವಯ: ಮೀಸಲಾತಿ ಹೆಚ್ಚಳ ಹೊಸ ನೇರ ನೇಮಕಾತಿಗಷ್ಟೇ ಅನ್ವಯವಾಗಲಿದೆ. ಯಾವುದೇ ವೃಂದದ ಹುದ್ದೆಗಳಿಗೆ ಈಗಾಗಲೇ ನೇರ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ನೇಮಕಾತಿ ಪ್ರಕ್ರಿಯೆ ಬಾಕಿ ಉಳಿದಿದ್ದಲ್ಲಿ 1995ರ ಜೂ.20ರ ಆದೇಶದಂತೆ ಗೊತ್ತುಪಡಿಸಿರುವ ರೋಸ್ಟರ್ ಅನುಸರಿಸಿ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಖಾಲಿ ಹುದ್ದೆಗೆ ಅನುಗುಣವಾಗಿ ನಿಗದಿ: ಈಗ ಮೀಸಲಾತಿ ಹೆಚ್ಚಳದನ್ವಯ ರೋಸ್ಟರ್ ಪದ್ಧತಿಯಡಿ ಯಾವ ಇಲಾಖೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಉಳಿದಿವೆ ಎಂದು ಜಾತಿಗೆ ಅನುಗುಣವಾಗಿ ಗುರುತಿಸಲಾಗಿದೆ. ಆಯಾ ಜಾತಿ, ಪಂಗಡದವರಿಗೆ ಮೀಸಲಾತಿ ಪ್ರಮಾಣವನ್ನು ಹೆಚ್ಚುವರಿಗೊಳಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಹೊಸ ಮೀಸಲಾತಿ ಪ್ರಮಾಣದಲ್ಲೇ ಎಲ್ಲ ಹುದ್ದೆಗಳ ಮುಂಬಡ್ತಿ ಪ್ರಕ್ರಿಯೆ ನಡೆಯಲಿದೆ.
ಹಲವರು ಬಡ್ತಿ ವಂಚಿತ: ರೋಸ್ಟರ್ ಬಿಂದುಗಳನ್ನು ಗುರುತಿಸಲು 2022 ಅ.23ರಂದು ಸರ್ಕಾರ ಆದೇಶ ಹೊರಡಿಸಿತ್ತು. ಆ ದಿನದಿಂದಲೇ ಎಲ್ಲ ನೇರ ನೇಮಕಾತಿ ಹಾಗೂ ಬಡ್ತಿ ಪ್ರಕ್ರಿಯೆಗಳು ಬಂದ್ ಆಗಿದ್ದವು. ನವೆಂಬರ್ ಹಾಗೂ ಡಿಸೆಂಬರ್​ನಲ್ಲಿ ಸಾಕಷ್ಟು ನೌಕರರು ಸೇವೆಯಿಂದ ನಿವೃತ್ತಿ ಹೊಂದಿದ್ದರಿಂದ ಬಡ್ತಿಯಿಂದ ವಂಚಿತರಾಗಿದ್ದರು. ಮುಂಬಡ್ತಿಯಾದ ನೌಕರರಿಗೆ ಪಿಂಚಣಿ ಸೇರಿ ಕೆಲ ಸೌಲಭ್ಯಗಳು ಸಿಗಲಿದ್ದವು.
ಎಲ್ಲೆಲ್ಲಿ ಮೀಸಲಾತಿ ಜಾರಿ?
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 12 =
Remember me
