ಬೆಂಗಳೂರು:ಇದು ಅತ್ಯಂತ ವಿಪರ್ಯಾಸ ಹಾಗೂ ದುರಂತ ಎನ್ನಬಹುದಾದ ಪ್ರಸಂಗ. ಅತ್ತ ‘ಕಥೆಗೆ ಸಾವಿಲ್ಲ’ ಎಂಬ ಕಥಾಸಂಕಲನ ಬೆಳಗ್ಗೆಯಷ್ಟೇ ಬಿಡುಗಡೆ ಆಗಿದೆ. ಆದರೆ ಆ ಕಥಾಸಂಕಲನದ ಲೇಖಕರ ತಂದೆ ರಾತ್ರಿ ಆಗುವಷ್ಟರಲ್ಲಿ ಕೋವಿಡ್​ಗೆ ಬಲಿಯಾಗಿದ್ದಾರೆ.
ಚಲನಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್ ಅವರ ತಂದೆ ಕೋವಿಡ್​ಗೆ ಬಲಿಯಾಗಿದ್ದು, ಬೆಳಗ್ಗೆಯಷ್ಟೇ ಗಿರಿರಾಜ್ ಅವರ ಕಥಾಸಂಕಲನ ‘ಕಥೆಗೆ ಸಾವಿಲ್ಲ’ ಬಿಡುಗಡೆ ಆಗಿತ್ತು. ಇಂಥದ್ದೊಂದು ದುಃಖದ ಸಂಗತಿಯನ್ನು ಮತ್ತೊಬ್ಬ ನಿರ್ದೇಶಕ ಜಯತೀರ್ಥ ಅವರು ಫೇಸ್​ಬುಕ್​ನಲ್ಲಿ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
‘ಎಂಥ ವಿಪರ್ಯಾಸ.. ಚಲನಚಿತ್ರ ನಿರ್ದೇಶಕ ಬಿ.ಎಂ.ಗಿರಿರಾಜ್ ಬರೆದಿರುವ ‘ಕಥೆಗೆ ಸಾವಿಲ್ಲ’ ಕಥಾ ಸಂಕಲನ ಇವತ್ತು ಬೆಳಗ್ಗೆ ಹಂಸಲೇಖಾರ ಕಡೆಯಿಂದ ಲೋಕಾರ್ಪಣೆಗೊಳ್ಳುತ್ತದೆ. ರಾತ್ರಿ 8 ಗಂಟೆ ಹೊತ್ತಿಗೆ ಗಿರಿರಾಜ್ ಅವರ ತಂದೆ ಕರೊನಾದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪ್ಪ ಮನೆಗೆ ಬಂದು ಮಗನ ಪುಸ್ತಕವನ್ನು ಓದಿ ಏನು ಹೇಳುತ್ತಾರೋ ಎಂದು ಕುತೂಹಲದಿಂದ ಕಾಯುತ್ತಿದ್ದ ಗಿರಿರಾಜ್​ಗೆ ಇದು ದೊಡ್ಡ ಆಘಾತ. ಅವರ ಕುಟುಂಬಸ್ಥರು ಧೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಲಿ. ಅವರ ತಂದೆಯ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಜಯತೀರ್ಥ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಗಿರಿರಾಜ್ ಅವರು ‘ಜಟ್ಟ’, ‘ಮೈತ್ರಿ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 18 =
Remember me
