ಬೆಂಗಳೂರು:ತಮಿಳುನಾಡಿಗೆ ಕಾವೇರಿ ನೀರು ಬಿಡಬೇಕೆಂದು ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಕಾವೇರಿ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ರೈತರು ಸಾಕಷ್ಟು ಹೋರಾಟ ನಡೆಸುತ್ತಿದ್ದರೂ ಯಾವೊಬ್ಬ ನಟರು ಕೂಡ ಧ್ವನಿಯೆತ್ತದೆ ಇದ್ದಿದ್ದಕ್ಕೆ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಯಿತು. ಇದರ ಬೆನ್ನಲ್ಲೇ ದರ್ಶನ್​, ಸುದೀಪ್​ ಹಾಗೂ ಶಿವರಾಜ್​ಕುಮಾರ್​ರಂತಹ ನಟರು ಪ್ರತಿಕ್ರಿಯೆ ನೀಡಿದರು.
ಇದರ ನಡುವೆ ನಟ ಯಶ್​ ಅಭಿನಯದ ಮಾಸ್ಟರ್​ ಪೀಸ್​ ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯ ಅವರು ಕಾವೇರಿ ಹೋರಾಟದ ಬಗ್ಗೆ ಮಾಡಿರುವ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. ಅನೇಕ ವರ್ಷಗಳಿಂದ ಸಾಕಷ್ಟು ಬದಲಾವಣೆಯಾದರೂ ಕಾವೇರಿ ಹೋರಾಟದಲ್ಲಿ ಮಾತ್ರ ಏನು ಬದಲಾಗಿಲ್ಲ ಎಂಬರ್ಥದಲ್ಲಿ ಮಂಜು ಮಾಂಡವ್ಯ ಪೋಸ್ಟ್​ ಮಾಡಿದ್ದು, ಅದರ ಸಾರಾಂಶ ಈ ಕೆಳಕಂಡಂತಿದೆ.
ಸಂಡೆ ಮಂಡೆ ಜಯಲಲಿತ ಮು*ಡೆ ಅಂತ ಗೆಳೆಯನೊಬ್ಬ ಪ್ರಾಸಬದ್ದವಾಗಿ ಘೋಷಣೆ ಕೂಗಿದಾಗ ಬೀಸಿ ಬಂದ ಪೊಲೀಸ್ ಲಾಠಿ ಗೆಳೆಯನ ಮೇಲೆ ಬಾಸುಂಡೆ ಮೂಡಿಸಿತ್ತು. ಅದು ಮಂಡ್ಯದಲ್ಲಿ ನಮನ್ನೆಲ್ಲ ಸ್ಕೂಲ್ ಇಂದ ಕಾವೇರಿ ಹೋರಾಟಕ್ಕೆ ಕರೆದುಕೊಂಡು ಹೋದಾಗ ನಡೆದ ಘಟನೆ. ತಜ್ಞರು ಆಗಿನಿಂದಲೂ ಸಮೀಕ್ಷೆ ನಡೆಸುತ್ತಲೇ ಇದ್ದಾರೆ. ಈಗ AI world, ಹುಡುಗಿಯರ ಬಾಯ್ ಫ್ರೆಂಡ್​ಗಳು watsapp status ಗಿಂತ ವೇಗವಾಗಿ ಬದಲಾಗುತ್ತಿದ್ದಾರೆ. ಆದರೆ ಕಾವೇರಿ ಮಾತ್ರ ಅದೇ ನಿಷ್ಠೆಯಿಂದ ತಮಿಳುನಾಡಿಗೆ ಹರಿಯುತ್ತಲೇ ಇದ್ದಾಳೆ. ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ.
ಇದನ್ನೂ ಓದಿ:ಚೈತ್ರಾ ಕುಂದಾಪುರ ವರ್ತನೆಯಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಲೆನೋವು!
ರಾಜಕೀಯ ಪಕ್ಷಗಳು ಬದಲಾಗಿದೆ. ರಾಜಕಾರಣಿಗಳು ಪಕ್ಷ ಬದಲಾಯಿಸಿದ್ದಾರೆ. ಕಾವೇರಿ ಹೋರಾಟಗಾರರು ಬದಲಾಗಿದ್ದಾರೆ. ಸ್ಟಾರ್ ನಟರ stardom ಬದಲಾಗಿದೆ. ಆದರೆ, ಕಾವೇರಿ ಬದಲಾಗಿಲ್ಲ. ಅದೇ ನಿಷ್ಠೆಯಿಂದ ಹರಿಯುತ್ತಿದ್ದಾರೆ. ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ. ಕರೊನಾ ಬಂದಮೇಲೆ ಕನ್ನಡಕ್ಕೆ ಡಬ್ಬಿಂಗ್ ಬೇಡ ಎಂದು ಡಬ್ಬಿಂಗ್ ವಿರೋಧವಾಗಿ ನಿಂತವರ(ನನ್ನನ್ನು ಸೇರಿಸಿ) ಮನಸ್ಥಿತಿಗಳು ಬದಲಾಗಿ ಬದಲಾವಣೆಯನ್ನು ಒಪ್ಪಿಕೊಂಡಿವೆ. ಅಪ್ಪಿಕೊಂಡಿವೆ. ಡಬ್ಬಿಂಗ್ ವಿರೋಧವಾಗಿ ಬರೆದ ನನ್ನ ಲೇಖನವನ್ನು ನಾನು ಕೂಡ ಸೈಲೆಂಟ್ ಆಗಿ ಡಿಲೀಟ್​ ಮಾಡಿ ಆಗಿದೆ. ಆದರೆ ಕರೊನಾ ಬಂದ ಮೇಲೂ ಕಾವೇರಿದು ಅದೇ ನಿಷ್ಠೆ, ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ.
ನನ್ನದು ಒಂದೇ ಕೋರಿಕೆ ಸ್ವಾಮಿ, ಕಾವೇರಿ ಬದಲಾಗಲ್ಲ, ಕನಿಷ್ಠ ಪಕ್ಷ ತಜ್ಞರನ್ನು ಬದಲಾಯಿಸಿ. ನಮ್ಮ ನಾಡಿನ ರೈತರಿಗೆ ನ್ಯಾಯ ಕೊಡಿಸಿ. ಇಲ್ಲ ಅಂದರೆ ಆ ಪದವನ್ನಾದರು ಬದಲಾಯಿಸಿ. ಎಷ್ಟು ವರ್ಷದಿಂದ ಅದೇ ಪದ, ಅದೇ ವಾಕ್ಯ ಕೇಳುವುದು. ಭಯದಿಂದಲೋ ಅಥವಾ ಜವಾಬ್ದಾರಿಯಿಂದಲೋ I stand with kaveri ಅಂತ ಎಲ್ಲರೂ ಟ್ವೀಟ್ ಮಾಡುತ್ತಿದ್ದಾರೆ. ಆದರೆ ಕಾವೇರಿ ಯಾರ ಬಳಿ ಕೂಡ stand ಆಗಲ್ಲ. ಅದೇ ನಿಷ್ಠೆಯಿಂದ ಹರಿಯುತ್ತಲೇ ಇದ್ದಾಳೆ. ತಜ್ಞರು ಸಮೀಕ್ಷೆ ನಡೆಸುತ್ತಲೇ ಇದ್ದಾರೆ. ಏನೇ ಇರಲಿ #istandwithkaveri ಎಂದು ಮಂಜು ಮಾಂಡವ್ಯ ಬರೆದುಕೊಂಡಿದ್ದಾರೆ.
ಹೊಟ್ಟೆ ಉಬ್ಬರದ ಸಮಸ್ಯೆ ಹೆಚ್ಚಾಗಿದೆಯೇ? ಇದಕ್ಕೆ ಮುಖ್ಯ ಕಾರಣಗಳೇನು? ಈ ಆಹಾರಗಳನ್ನು ತಪ್ಪಿಸಿ…

ಚೈತ್ರಾ ಕುಂದಾಪುರ ವರ್ತನೆಯಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಲೆನೋವು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:9 − five =
Remember me
