ಬೆಂಗಳೂರು:ಉತ್ತಮ ಪ್ರಜಾಕೀಯ ಪಕ್ಷಕ್ಕೆ ಆರು ವರ್ಷ ಪೂರೈಸಿದ್ದ ಹಿನ್ನೆಲೆಯಲ್ಲಿ ಲೈವ್​ನಲ್ಲಿ ಮಾತನಾಡುವಾಗ ನಟ-ನಿರ್ದೇಶಕ ರಿಯಲ್ ಸ್ಟಾರ್ ಉಪೇಂದ್ರ ಗಾದೆಮಾತೊಂದನ್ನು ಹೇಳಿ ಜಾತಿನಿಂದನೆ ಆರೋಪಕ್ಕೆ ಒಳಗಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದೆರಡು ದಿನಗಳಿಂದ ಭಾರಿ ಬೆಳವಣಿಗೆಗಳು ನಡೆಯುತ್ತಿವೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಈ ಪ್ರಕರಣ ಬಳಿಕ ಹೈಕೋರ್ಟ್ ವರೆಗೂ ತಲುಪಿದೆ. ಈ ಪ್ರಕರಣದಲ್ಲಿ ಉಪೇಂದ್ರ ವಿರುದ್ಧ ಎಫ್​ಐಆರ್ ದಾಖಲಾಗಿದ್ದು, ಅದರ ವಿರುದ್ಧ ಹೈಕೋರ್ಟ್​ನಿಂದ ಮಧ್ಯಂತರ ತಡೆಯಾಜ್ಞೆ ಕೂಡ ಸಿಕ್ಕಿದೆ. ಮತ್ತೊಂದೆಡೆ ಈ ಪ್ರಕರಣ ಸಂಬಂಧವಾಗಿ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಒಂದು ಕಡೆ ಉಪೇಂದ್ರ ಬಂಧನಕ್ಕಾಗಿ ಕೆಲವರು ಒತ್ತಾಯಿಸುತ್ತಿದ್ದರೆ, ಉಪೇಂದ್ರ ಪರವಾಗಿಯೂ ಹಲವರು ಬೆಂಬಲ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ಗಳನ್ನು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ತಮ್ಮ ಅಭಿಮಾನಿಗಳು ಹಾಗೂ ಪ್ರಜಾಕೀಯ ಬೆಂಬಲಿಗರಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:ಚಾಕೊಲೇಟ್ ಎಂದು ಜೀನ್ಸ್​ ಪ್ಯಾಂಟ್ ಬಟನ್ ಕೊಟ್ಟ ಅಕ್ಕ; ಉಸಿರುಗಟ್ಟಿ ಪ್ರಾಣಾಪಾಯಕ್ಕೆ ಸಿಲುಕಿತು 2 ತಿಂಗಳ ಮಗು
ನಾನು ಬಳಸಿದ ಗಾದೆ ಮಾತಿನ ಕುರಿತ ದೂರಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ್ದು, ಇದು ಸೂಕ್ಷ್ಮ ವಿಷಯವಾಗಿರುವ ಕಾರಣ ಪ್ರಜಾಕೀಯದ ಬೆಂಬಲಿಗರು ಹಾಗೂ ನನ್ನ ಅಭಿಮಾನಿಗಳು ಯಾವುದೇ ಕಾರಣಕ್ಕೂ ಎಲ್ಲಿಯೂ ಯಾವುದೇ ವ್ಯಕ್ತಿ-ಜಾತಿ-ಧರ್ಮ ಮುಂತಾದ ವಿಷಯಗಳಿಗೆ ಪ್ರತಿಕ್ರಿಯಿಸಬೇಡಿ (ಕಾಮೆಂಟ್, ವಿಡಿಯೋ & ಪೋಸ್ಟ್ ಇತ್ಯಾದಿಗಳನ್ನು ಮಾಡಬೇಡಿ) ಹಾಗೂ ಪ್ರಜಾಕೀಯ (ಯುಪಿಪಿ) ಹೆಸರನ್ನು ಈ ವಿಷಯಕ್ಕೆ ಬಳಸಿಕೊಳ್ಳಬೇಡಿ ಎಂದಿದ್ದಾರೆ.
ಅಲ್ಲದೆ, ಕಾನೂನು ವ್ಯವಸ್ಥೆಯ ಮೇಲೆ ಗೌರವವಿಟ್ಟು ಶಾಂತಿಯುತವಾಗಿ ಸತ್ಯದ ಪರವಾದ ತೀರ್ಪಿಗಾಗಿ ಸಮಾಧಾನದಿಂದ ಕಾಯೋಣ. ಈ ವಿಷಯದಲ್ಲಿ ಪ್ರತಿಭಟಿಸುವವರನ್ನು, ದೂರು ನೀಡಿದವರನ್ನೂ ಗೌರವದಿಂದ ಪ್ರೀತಿಯಿಂದಲೇ ನೋಡೋಣ. ದ್ವೇಷವನ್ನು ಹಂಚದೆ ಪ್ರೀತಿಯನ್ನು ಹಂಚೋಣ ಎಂದು ಹೇಳಿದ್ದಾರೆ.
ಇನ್ನೂ ಹೆಚ್ಚು ಹೆಚ್ಚು ಪ್ರೀತಿಸುವ ಹೃದಯ ನನಗೆ ಕೊಡೆ ತಾಯಿ ನನಗೆ ಕೊಡೆ: ಹೈಕೋರ್ಟ್​​ ತಡೆ ಸಿಗುತ್ತಿದ್ದಂತೆ ಉಪೇಂದ್ರ ಫಸ್ಟ್ ರಿಯಾಕ್ಷನ್​

ಹೇಗಿದೆ ನೋಡಿ ಪೂಜಾ ಗಾಂಧಿ ಕೈಬರಹ!; ಕನ್ನಡದಲ್ಲೇ ಬರೆದು ಶುಭಾಶಯ ಕೋರಿದ ‘ಮುಂಗಾರು ಮಳೆ’ ಬೆಡಗಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
