ಬೆಂಗಳೂರು:ವಿಧಾನ ಪರಿಷತ್ ಪ್ರತಿಪಕ್ಷ‌ ನಾಯಕನಾಗಿ‌ ಅಧಿಕಾರ ಸ್ವೀಕರಿಸಿ 20 ದಿನಗಳಾಗುತ್ತಾ ಬಂದಿವೆ. ಡಿಇಜಿ‌ಗೆ ಪತ್ರ ಬರೆದರೂ ಶಿಷ್ಟಾಚಾರದ ಪ್ರಕಾರ ಬೆಂಗಾವಲು ವಾಹನ, ಮೂವರು ಗನ್ ಮೆನ್, ಮನೆಗೆ ಭದ್ರತಾ ಸಿಬ್ಬಂದಿ ಒದಗಿಸಿಲ್ಲ. ಮೌಖಿಕವಾಗಿ ವಿಚಾರಿಸಿದರೆ ಸಭೆಯಲ್ಲಿಟ್ಟು ತೀರ್ಮಾನಿಸಬೇಕಾಗಿದೆ. ಕೊಡುವುದಿಲ್ಲ ಎಂದೇನೂ ಹೇಳಿಲ್ಲವಲ್ಲವೆಂದು ಹಾರಿಕೆ ಉತ್ತರ ನೀಡುತ್ತಾರೆ ಎಂದು ಛಲವಾದಿ ನಾರಾಯಸ್ವಾಮಿ ಆಕ್ಷೇಪಿಸಿದರು.
ದಲಿತ ವ್ಯಕ್ತಿಯೊಬ್ಬ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿದ್ದಕ್ಕೆ ಹೀಗೆ ತಾತ್ಸಾರ ಮಾಡುತ್ತಿರುವಂತಿದೆ. ಈ ಧೋರಣೆ ವಿರೋಧಿಸಿ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆ. ವಿಧಾನ ಪರಿಷತ್ ನಾಗಿದ್ದಕ್ಕೆ ಕೊಟ್ಟಿರುವ ಒಬ್ಬ ಗನ್ ಮೆನ್, ಸರ್ಕಾರಿ ವಾಹನ ಹಿಂತಿರುಗಿಸಿ ಪತ್ರ ಬರೆಯುವೆ ಎಂದು ತಿಳಿಸಿದರು.
ವಿಧಾನ ಸೌಧದ ಪರಿಷತ್ ಪ್ರತಿಪಕ್ಷ ನಾಯಕರ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಷ್ಟಾಚಾರದ‌ ಪ್ರಕಾರ ನನ್ನ ಹಕ್ಕು ಕೇಳುತ್ತಿರುವೆ. ಯಾವುದೇ ಜೀವಭಯವಿಲ್ಲ, ಹೆದರುವ ಜಾಯಮಾನವೂ ನನ್ನದಲ್ಲ. ವಿಳಂಬ ಗಮನಿಸಿದರೆ ರಾಜಕೀಯ ಹಗೆತನ ಸಾಧಿಸುತ್ತಿರುವ ಅನುಮಾನ ಉಂಟಾಗುತ್ತಿದೆ ಎಂದರು.
ವಿಧಾನಸಭಾಧ್ಯಕ್ಷರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಆಗಿನ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಶಿಷ್ಟಾಚಾರದ ಪ್ರಕಾರ ಕೊಡಬೇಕಾಗಿದ್ದ ಸವಲತ್ತು ಮೂರು ತಿಂಗಳು ಕಾಲ ಕೊಟ್ಟಿದ್ದಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ಸಭಾಧ್ಯಕ್ಷರ ವಿವೇಚನೆಗೆ ಬಿಟ್ಟದ್ದು ಎಂದಿದ್ದರು.
ವಿಳಂಬದ ಸಂಪ್ರದಾಯ ಬಿಜೆಪಿ ಆರಂಭಿಸಿದ್ದಲ್ಲವೆ ? ಎಂದು ಪತ್ರಕರ್ತರು ಪ್ರಶ್ನಿಸಿದಾಗ ಛಲವಾದಿ ಪ್ರತಿಕ್ರಿಯಿಸಿ, ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೊಸ ಕಾರು ಕೇಳಿದ್ದರು ಎಂದು ಮಾತ್ರ ಗೊತ್ತು. ವಿಳಂಬ ಮಾಡಿದ್ದರೆ ಅದು ಕೂಡ ತಪ್ಪು, ನಾನು ಸಮರ್ಥಿಸಿಕೊಳ್ಳುವುದಿಲ್ಲ. ಹಿಂದಿನ ಸರ್ಕಾರ ತಡೆ ಮಾಡಿದೆ ಎಂಬ ಕಾರಣಕ್ಕೆ ಈಗ ವಿಳಂಬ ಮಾಡುತ್ತಿದ್ದೇವೆ ಎಂದಾದರೂ ಸರ್ಕಾರ ಹೇಳಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಅಣೆಕಟ್ಟೆ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿದ್ದನ್ನು ಪರಿಶೀಲಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ನಿನ್ನೆ ಸ್ಥಳಕ್ಕೆ ಹೋಗಿದ್ದಲ್ಲ, ಬಿರಿಯಾನಿ ತಿನ್ನಲು ಹೋಗಿದ್ದರು. ನಿರ್ಲಕ್ಷ್ಯದ ಪರಿಣಾಮ ಟಿಬಿ ಡ್ಯಾಂ ಅವಘಡ ಸಂಭವಿಸಿದೆ. ರೈತರ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲ ಎನ್ನುವುದು ಮತ್ತೆ‌ ರುಜುವಾತಾಗಿದೆ ಎಂದು ಕಿಡಿಕಾರಿದರು.
ಭರಪೂರ ಮಳೆಯಿಂದಾಗಿ ಬರಗಾಲದ ಬವಣೆ ನೀಗಿತು ಎಂದು ರೈತರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರು. ಕ್ರಸ್ಟ್ ಗೇಟ್ ದುರಂತವು 65 ಟಿಸಿಎಂ ಅಡಿ ನೀರು ವ್ಯರ್ಥ ಹರಿಬಿಡುವ ಪರಿಸ್ಥಿತಿ ಸೃಷ್ಟಿಸಿದೆ. ನಾಟಿ ಮಾಡಿದ ಭತ್ತ ಹಾನಿ, ಭವಿಷ್ಯದ ಬೆಳೆ ಕೈತಪ್ಪುವ ಆತಂಕದಲ್ಲಿ ರೈತರಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ಹೊಣೆಗೇಡಿತನವೇ ಕಾರಣವೆಂದು ಆರೋಪಿಸಿದರು.
ಕನಕಪುರದಲ್ಲಿ ಕಾಂಗ್ರೆಸ್ ಪಕ್ಷದ ದಲಿತ ಕಾರ್ಯಕರ್ತನ ಕೈ ಕಡಿಯಲಾಗಿದೆ. ಚುನಾವಣಾ ವೈಷಮ್ಯದಿಂದ ಅದೇ ಪಕ್ಷದ ಕಾರ್ಯಕರ್ತ ಈ ಕೃತ್ಯ ಎಸಗಿದ್ದಾನೆ. ಭ್ರಷ್ಟಾಚಾರಕ್ಕೆ ದಲಿತ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡರು.
ಲಂಚ ದಾಹಕ್ಕೆ ಪಿಎಸ್ ಐ ಪರಶುರಾಮ್ ಸಾವಿಗೀಡಾದರು. ಶಾಸಕ ಚನ್ನಾರೆಡ್ಡಿ ಮತ್ತವರ ಪುತ್ರನನ್ನು ಈವರೆಗೆ ಬಂಧಿಸಿಲ್ಲ.‌ಕಾಂಗ್ರೆಸ್ ಆಡಳಿತದಲ್ಲಿ ದಲಿತರ ಹತ್ಯೆ, ಆತ್ಮಹತ್ಯೆ, ದೌರ್ಜನ್ಯ ಮೇರೆ ಮೀರಿದೆ ಎಂದು ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:14 − three =
Remember me
