ಬೆಂಗಳೂರು:ಮಾಸ್ಕ್ ಕಡ್ಡಾಯ ನಿಯಮವನ್ನು ರಾಜ್ಯದಲ್ಲಿ ಸಡಿಲಗೊಳಿಸುವ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಜನರು ಬಗೆ ಬಗೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮೈಕ್ರೋ ಬ್ಲಾಗಿಂಗ್ ವೇದಿಕೆ ಕೂ ಆ್ಯಪ್​ನಲ್ಲಿ #ಮಾಸ್ಕ್_ಕಡ್ಡಾಯ ಎನ್ನುವ ಹ್ಯಾಷ್​ಟ್ಯಾಗ್​ ಅಡಿ ನೆಟ್ಟಿಗರು ಮಾಸ್ಕ್ ಬೇಕೇ ಬೇಡವೇ ಎನ್ನುವ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕರೊನಾ ಇರಲಿ ಬಿಡಲಿ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಹೇಳಿದರೆ, ಇನ್ನು ಕೆಲವರು ಅಯ್ಯೋ ಎರಡುವರ್ಷದಿಂದ ಮಾಸ್ಕ್ ಧರಿಸಿ ಸಾಕಾಗಿದೆ ಎಂದೂ ಹೇಳಿದ್ದಾರೆ.
‘ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಈ ನಿಯಮ ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ, ಸ್ವಲ್ಪ ದಿನಗಳ ಮಟ್ಟಿಗೆ, ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಒಳಿತು. ಯಾಕೆಂದರೆ ಕರೊನಾದಿಂದ ನಾವಿನ್ನೂ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದಿಲ್ಲ’ ಎಂದಿದ್ದಾರೆ ಶಿಕ್ಷಕಿ ಸವಿತಾ.
Koo App
#ಮಾಸ್ಕ್_ಕಡ್ಡಾಯ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಈ ನಿಯಮವನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ, ಸ್ವಲ್ಪ ದಿನಗಳ ಮಟ್ಟಿಗೆ, ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಒಳಿತು. ಯಾಕೆಂದರೆ ಕೊರೊನಾದಿಂದ ನಾವಿನ್ನೂ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದಿಲ್ಲ. #ಸವಿತಾಸಿಂಚನ✍️ #ದಿನದಕೂ
–ಸವಿತಾ (@ಗಡಿನಾಡ_ಕನ್ನಡತಿ)5 Apr 2022

‘ಪಂಚೇಂದ್ರಿಯಗಳಲಿ ನಾಸಿಕವು ಒಂದು, ಜೀವಾನಿಲದ ಹೀರುವಿಕೆಯ ಇದರ ಕಾರ್ಯ ಸೂಕ್ಷ್ಮವಾದುದು, ಗಾಳಿಯಲ್ಲಿ ಮುಕ್ಕಾಲು ಭಾಗ ಸಾರಜನಕ, ಮತ್ತಿತರ ಅನಿಲಗಳಿರಲು ಕೇವಲ ಆಮ್ಲಜನಕವನಷ್ಟೇ ಹೀರುವ ಶ್ವಾಸನಾಳಕ್ಕೆ, ಮಾಸ್ಕ್​ನಿಂದ ರಿಸ್ಕೇ ಆಗುತಿದೆ, ಮಾಸ್ಕ್ ಧರಿಸಿದಾಗ ನಿಶ್ವಾಸದಲಿ ಹೊರಹೋಗುವ ಇಂಗಾಲದ ಡೈ ಆಕ್ಸೈಡ್ ಮಾಸ್ಕ್​ನಲ್ಲೇ ಬಹುಕಾಲ ಉಳಿದು, ಮತ್ತದೆ ಅನಿಲ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಇದೆ, ಮಾಸ್ಕ್​ ಬದಲು ಅಂತರಪಾಲಿಸಿ, ಕರೊನಾ ಓಡಿಸಿ’ ಎಂದು ಕವಿಸುತ ಎನ್ನುವವರು ಅಭಿಪ್ರಾಯಪಟ್ಟಿದ್ದಾರೆ.
Koo App
#ಮಾಸ್ಕ್_ಕಡ್ಡಾಯ ಪಂಚೇಂದ್ರಿಯಗಳಲಿ ನಾಸಿಕವು ಒಂದು, ಜೀವಾನಿಲದ ಹೀರುವಿಕೆಯ ಇದರ ಕಾರ್ಯ ಸೂಕ್ಷ್ಮವಾದದು,ಗಾಳಿಯಲಿ ಮುಕ್ಕಾಲು ಭಾಗ ಸಾರಜನಕ, ಮತ್ತಿತ್ತರ ಅನಿಲಗಳಿರಲೂ ಕೇವಲ ಆಮ್ಲಜನಕವನಷ್ಟೇ ಹೀರುವ ಶ್ವಾಸನಾಳಕ್ಕೆ,ಮಾಸ್ಕ್ ನಿಂದ ರಿಸ್ಕೇಆಗುತಿದೆ,ಮಾಸ್ಕ್ ಧರಿಸಿದಾಗ ನಿಶ್ವಾಸದಲಿ ಹೊರಹೋಗುವ ಇಂಗಾಲದ ಡೈ ಆಕ್ಸೈಡ್ ಮಾಸ್ಕನಲ್ಲೆ ಬಹುಕಾಲ ಉಳಿದು,ಮತ್ತದೆ ಅನಿಲ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಇದೆ,ಮಾಸ್ಕ ಬದಲು ಅಂತರಪಾಲಿಸಿ,ಕೊರೋನಾ ಓಡಿಸಿ. ನನ್ನ ಅಭಿಪ್ರಾಯ, ಕವಿಸುತ
–ಕವಿಸುತ (@ಕವಿಸುತ)5 Apr 2022

‘ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು ವೈಯಕ್ತಿಕವಾಗಿ ಲಾಭದಾಯಕ’ ಎನ್ನುತ್ತಾರೆ ಬಸವರಾಜು ಮೈಸೂರು.
Koo App
#ಮಾಸ್ಕ್_ಕಡ್ಡಾಯ ಸಾರ್ವಜನಿಕ ಸ್ಥಳಗಳಲ್ಲಿ ಬಳಸುವುದು ವೈಯಕ್ತಕವಾಗಿ ಲಾಭದಾಯಕವಾಗಿರುತ್ತದೆ.
–ಬಸವರಾಜು ಮೈಸೂರು (@ಬಸವರಾಜು_526)5 Apr 2022

‘#ಮಾಸ್ಕ್_ಕಡ್ಡಾಯ ಮಾಡುವುದು ಒಳ್ಳೆಯದು. ಕಾರಣ ಕೇವಲ ಕರೊನಾ ಒಂದೇ ಅಲ್ಲ. ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲೆಲ್ಲಿಯೂ ಬರಿ ಧೂಳು ರಸ್ತೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಕರೊನಾ ಯಾವಾಗ ಸೃಷ್ಟಿ ಆಗುತ್ತದೆಯೇ ಗೊತ್ತಾಗುವುದಿಲ್ಲ. ಹಾಗಾಗಿ ಮಾಸ್ಕ್ ಕಡ್ಡಾಯ ಆದರೆ ಸೂಕ್ತ’ ಎಂದು ರೇಖಾ ವಿ. ಸಿಂಗ್ ಬರೆದುಕೊಂಡಿದ್ದಾರೆ.
Koo App
#ಮಾಸ್ಕ್_ಕಡ್ಡಾಯ ಮಾಡುವುದು ಒಳ್ಳೆಯದು. ಕಾರಣ ಕೇವಲ ಕೊರೊನಾಒಂದೇ ಅಲ್ಲ.ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲೆಲ್ಲಿಯೂ ಬರಿ ಧೂಳು ರಸ್ತೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಕೊರೊನಾ ಯಾವಗ ಸೃಷ್ಟಿ ಆಗುತ್ತದೆಯೇ ಗೊತ್ತಾಗುವುದಿಲ್ಲ. ಹಾಗಾಗಿ ಮಾಸ್ಕ್ ಕಡ್ಡಾಯ ಆದರೆ ಸೂಕ್ತ.
–ರೇಖಾ ವಿ ಸಿಂಗ್ (@ರೇಖಾ_ವಿ_ಸಿಂಗ್)5 Apr 2022

‘ನಮ್ಮ ಅರೋಗ್ಯ ನಮ್ಮ ಕೈಯಲ್ಲಿ ಅನ್ನೋ ಹಾಗೆ ಮಾಸ್ಕ್​ ಬಳಸೋದು ಬಿಡೋದು ಅವರ ಅವರ ವಿಚಾರ ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ಬಳಸೋದು ಉತ್ತಮ. ಆ ಅಲೆ ಬಂತು ಈಗ ಈ ಅಲೆ ಬಂತು ಅಂತ ಭಯದಲ್ಲಿ ಇರೋದಕ್ಕಿಂತ ನಮ್ಮ ನಮ್ಮ ಎಚ್ಚರಿಕೆಯಲ್ಲಿ ಇರೋದು ಉತ್ತಮ’ ಎನ್ನುವುದು ಮಧು ಅವರ ಅಭಿಪ್ರಾಯ.
Koo App
#ಮಾಸ್ಕ್_ಕಡ್ಡಾಯ # ನಮ್ಮ ಅರೋಗ್ಯ ನಮ್ಮ ಕೈ ಯಲ್ಲಿ ಅನ್ನೋ ಹಾಗೆ ಮಾಸ್ಕ ಬಳಸೋದು ಬಿಡೋದು ಅವರ ಅವರ ವಿಚಾರ್ ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಬಳಸೋದು ಉತ್ತಮ. ಆ ಅಲೆ ಬಂತು ಈಗ ಈ ಅಲೆ ಬಂತು ಅಂತ ಭಯದಲ್ಲಿ ಇರೋದಕ್ಕಿಂತ ನಮ್ಮ ನಮ್ಮ ಎಚ್ಚರಿಕೆಯಲ್ಲಿ ಇರೋದು ಉತ್ತಮ 👍🙏🏻…
–Madhu💞💚🧕786… 😊 (@Madhu_Mr_786)5 Apr 2022

‘ದೇಶದಲ್ಲಿ ಸುಮಾರು 1000 ಮತ್ತು ರಾಜ್ಯದಲ್ಲಿ 30 ಆಸುಪಾಸು ಕರೊನ ಪ್ರಕರಣಗಳಿವೆ! ನಿಮ್ಮ ಪ್ರಕಾರ ”ಮಾಸ್ಕ್” ಇನ್ನೂ ಅಗತ್ಯವಿದೆಯೇ? ಎಂಬ ಮಂಜುನಾಥ್ ಪಾಪಣ್ಣ ಅವರ ಪೋಲ್​ಗೆ ಮಾಸ್ಕ್ ಅಗತ್ಯವಿದೆ ಎಂದೇ ಬಹುತೇಕರು ವೋಟ್ ಮಾಡಿದ್ದಾರೆ.
Koo App
#ಮಾಸ್ಕ್_ಕಡ್ಡಾಯ ದೇಶದಲ್ಲಿ ಸುಮಾರು 1000 ಮತ್ತು ರಾಜ್ಯದಲ್ಲಿ 30 ಆಸುಪಾಸು ಕೊರೊನ ಪ್ರಕರಣಗಳಿವೆ! ಇದೆ ಸಮಯದಲ್ಲಿ ಕೆಲವು ದೇಶಗಳಲ್ಲಿ ವಿವಿಧ ಬಗೆಯ ಹೊಸ ರೂಪಾಂತರಗಳು ಬರುತ್ತಿವೆ,ಇನ್ನೂ ಸ್ವಲ್ಪ ಸಮಯ ಮಾಸ್ಕ್ ಧರಿಸಿದರೆ ಕಳೆದುಕೊಳ್ಳುವುದೇನೂ ಇಲ್ಲ, ಸರ್ಕಾರಗಳು ಸಹ ಲಸಿಕೆ ಮತ್ತು ಸುರಕ್ಷತಾ ಕ್ರಮದ ಬಗ್ಗೆ ಅಸಡ್ಡೆ ಮಾಡದಿರಲಿ! ಒಮ್ಮೆ ”ಎರಡನೇ ಅಲೆ” ಯೋಚಿಸಿಕೊಳ್ಳಿ. ನಿಮ್ಮ ಪ್ರಕಾರ ”ಮಾಸ್ಕ್” ಇನ್ನೂ ಅಗತ್ಯವಿದೆಯೇ? .
–Manjunath Papanna (@Manjunath_Papanna)5 Apr 2022

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
