ಬೆಂಗಳೂರು:ರಾಮಮಂದಿರವನ್ನು ದೇಶದ ರಾಷ್ಟ್ರಪತಿ ಉದ್ಘಾಟನೆ ಮಾಡಬೇಕು. ರಾಷ್ಟ್ರಪತಿಯು ಕೆಳಜಾತಿಯಾದ ಆದಿವಾಸಿ ಸಮುದಾಯಕ್ಕೆ ಸೇರಿದ ಮಹಿಳೆಯಾಗಿದ್ದಾರೆ ಎಂಬ ಕಾರಣಕ್ಕೆ ದೇಶದ ಸಂಸತ್ ಭವನವನ್ನೂ ಉದ್ಘಾಟನೆ ಮಾಡಿಸಿಲ್ಲ. ಭವನದ ಒಳಗಡೆಗೆ ಬಿಟ್ಟಿಲ್ಲ. ಈಗ ಶ್ರೀರಾಮನ ದೇವಾಲಯವನ್ನು ಕೂಡ ಉದ್ಘಾಟನೆ ಮಾಡಿಸದೆ ಅವಮಾನ ಮಾಡುತ್ತಿದ್ದು, ಇಂದಿಗೂ ಜಾತಿ ವ್ಯವಸ್ಥೆ ಎಷ್ಟು ಆಳವಾಗಿದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದು ಹಿರಿಯ ಸಾಹಿತಿ ಪ್ರೊ. ಎಲ್.ಎನ್. ಮುಕುಂದರಾಜು ಮಾರ್ಮಿಕವಾಗಿ ನುಡಿದರು.
ಸವಿತಾ ಸಮಾಜದ ವತಿಯಿಂದ ಗಾಂಧಿ ಭವನದಲ್ಲಿ ಮಂಗಳವಾರ ಲೇಖಕ ಡಾ. ಎಂ.ಎಸ್. ಮುತ್ತುರಾಜ್ ರಚಿತ ‘ಮಂಗಳವಾದ್ಯ’ ಕಾದಂಬರಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ದೇಶದ ಪ್ರಥಮ ಪ್ರಜೆ, ನಮ್ಮಲ್ಲೆರ ಪ್ರತಿನಿಧಿಯಾದ ರಾಷ್ಟ್ರಪತಿಯನ್ನು ಏಕೆ ಕರೆದಿಲ್ಲವೆಂದು ನಾವು ಪ್ರಶ್ನಿಸುತ್ತಿಲ್ಲ. ಅವರಿಗೆ ಇಟ್ಟಿಗೆ ಬೇಕು ಎಂದಾದರೆ ಕೊಡುತ್ತೇವೆ. ದುಡ್ಡು ಬೇಕು ಎಂದರೆ ಅದನ್ನೂ ಕೊಡುತ್ತೇವೆ. ಅಕ್ಷತೆಯನ್ನು ತಲೆ ಮೇಲೆ ಹಾಕಿಸಿಕೊಂಡು ಬಾವುಟ ಹಿಡಿದು, ಕುಂಕುಮ ಹಚ್ಚಿಕೊಂಡು ಜೈ ಶ್ರೀರಾಮ್ ಎಂದು ಕಣ್ನು ಮುಚ್ಚಿ ೋಷಣೆ ಕೂಗುತ್ತಿದ್ದೇವೆ. ಇಂದು ರಾಷ್ಟ್ರಪತಿಗೆ ಆಗಿರುವ ಅವಮಾನ ನಾಳೆ ನನಗೂ ಆಗಿಲಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಿದೆ ಎಂದು ಎಚ್ಚರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
