ಬೆಂಗಳೂರು:ಯುವಜನತೆ ಹಾಗೂ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ವರಾಜ್ಯ ಸಂಗ್ರಾಮದ ಅರಿವು-ಮಹತ್ವ, ದೇಶದ ಕುರಿತು ಶ್ರದ್ಧೆ, ಸಮರ್ಪಣಾ ಭಾವ, ಕರ್ತವ್ಯ ಪ್ರಜ್ಞೆ ಸೇರಿದಂತೆ ಮೌಲ್ಯಗಳನ್ನು ಪೋಷಿಸುವ ಪ್ರೇರಣಾದಾಯಿ ರಾಷ್ಟಮಟ್ಟದ ‘ನನ್ನ ಭಾರತ’ ಯುವ ಅಭಿಯಾನ ಇಂದಿನಿಂದ ಆ.15ರ ತನಕ ನಡೆಯಲಿದೆ.
ಅಭಿಯಾನದಲ್ಲಿ ಸ್ವರಾಜ್ಯ ರಥ, ತಜ್ಞರಿಂದ ಉಪನ್ಯಾಸ ಸರಣಿ, ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ವಿದ್ಯಾರ್ಥಿಗಳಿಂದ ದೇಶಭಕ್ತಿ ಕಾರ್ಯಕ್ರಮ, ಕಾಲೇಜುಗಳಲ್ಲಿ ಉಪನ್ಯಾಸ, ವಾಕಥಾನ್, ರಾಜ್ಯ ಮಟ್ಟದ ವಿಚಾರ ಸಂಕಿರಣದ ಮೂಲಕ ಭಾರತದ ಮಹೋನ್ನತ ಸಂಸ್ಕೃತಿಯ ಪರಿಚಯವನ್ನು ಮಾಡಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಮೊ: 9113263342 ಸಂಪರ್ಕಿಸಬಹುದಾಗಿದೆ.
ಸ್ವಾತಂತ್ರ್ಯ ಸಂಗ್ರಾಮದ ಅಜ್ಞಾತ ಬಲಿದಾನಿಗಳ, ನೇಪಥ್ಯದಲ್ಲಿ ಉಳಿದ ಹೋರಾಟಗಾರರ ಕುರಿತು ಹಾಗೂ ಕನ್ನಡ ನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮ ಎಂಬ ಆಶಯದೊಂದಿಗೆ ‘ಸ್ವರಾಜ್ಯ ರಥ’ವು ರಾಜ್ಯಾದ್ಯಂತ ಸಂಚರಿಸಲಿದೆ. ಬೆಂಗಳೂರಿನಿಂದ ಅಗಸ್ಟ್ 10ರ ಬೆಳಗ್ಗೆ 8 ಗಂಟೆಗೆ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಪೂಜೆಗೊಂಡು, ಬೆಳಗ್ಗೆ 8:30ಕ್ಕೆ ಚಾಲನೆ ದೊರೆಯಲಿದೆ. ಅಲ್ಲಿಂದ ಹೊರಡಲಿರುವ ಸ್ವರಾಜ್ಯ ರಥವು ರಾಜ್ಯದ ಎಲ್ಲಾ ಜಿಲ್ಲೆಗಳನ್ನು ತಲುಪಲಿದ್ದು ಸಾವಿರಾರು ಕಿ.ಮೀ ದೂರವನ್ನು ಕ್ರಮಿಸಿ ಆಗಸ್ಟ್ 15ರಂದು ಬೆಂಗಳೂರಿಗೆ ಮರಳಲಿದೆ.
ಆಗಸ್ಟ್ 1 ರಿಂದ 15ರವರೆಗೆ ಪ್ರತಿನಿತ್ಯ ಬೆಳಗ್ಗೆ 7 ಗಂಟೆಗೆ ವಿವಿಧ ರಾಜ್ಯದ ಕಾಲೇಜುಗಳ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಕಥಾಮಾಲಿಕೆ, ರಾಷ್ಟಿçÃಯ ವಿಚಾರಗಳ ಕುರಿತು ಭಾಷಣ, ಸಾಮಾಜಿಕ ವಿಷಯಗಳ ಕುರಿತು ವಿಶ್ಲೇಷಣೆ ಮೂಡಿಬರಲಿವೆ. ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.
‘ನನ್ನ ಭಾರತ’ ಅಭಿಯಾನದ ಭಾಗವಾಗಿ ಅಗಸ್ಟ್ 1 ರಿಂದ 15ರ ತನಕ ಪ್ರತಿನಿತ್ಯ ಸಂಜೆ 7 ಕ್ಕೆ ಆನ್‌ಲೈನ್ ಉಪನ್ಯಾಸ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು ವಿಷಯತಜ್ಞರಿಂದ ಉಪನ್ಯಾಸ ಕಾರ್ಯಕ್ರಮಗಳು ಪ್ರಸಾರಗೊಳ್ಳಲಿವೆ. ಆಗಸ್ಟ್ ೧ ರಂದು ಮೊದಲ ಉಪನ್ಯಾಸ ಸರಣಿಯಲ್ಲಿ ‘Nalanda: A Legacy of Indian Knowledge Ethos’ ಎಂಬ ವಿಷಯದ ಕುರಿತು ನಳಂದ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಪ್ರೊ. ಸುನೈನಾ ಸಿಂಗ್ ಮಾತನಾಡಲಿದ್ದಾರೆ.
ಸ್ವಾತ್ರಂತ್ಯೋತ್ಸವ ವರ್ಷಾಚರಣೆಯ ಹಿನ್ನೆಲೆಯಲ್ಲಿ ‘ಅಮೃತಕಾಲದಲ್ಲಿ ಭಾರತ: ಯುವಜನತೆಯ ಪಾತ್ರ’ ಎಂಬ ವಿಷಯದ ಕುರಿತು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪದವಿ ಯಾ ತತ್ಸಮಾನ ಮತ್ತು ಸ್ನಾತಕೋತ್ತರ ಕಾಲೇಜು ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ವಹಸ್ತಾಕ್ಷರದಲ್ಲಿ 2500 ಶಬ್ದಮಿತಿಯಲ್ಲಿ ಬರೆದ ಪ್ರಬಂಧವನ್ನು ಆಗಸ್ಟ್ 15ರ ಒಳಗೆ ಕಳುಹಿಸಿಕೊಡಲು ಕೋರಲಾಗಿದೆ. ಪ್ರಬಂಧ ಕಳುಹಿಸಬೇಕಾದ ವಿಳಾಸ: ‘ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ’, Disha Bharat, 106, 2nd Floor, Vikrama Building, 5th main, Chamarajapete, Bengaluru 560018.
ಯುವಕರಲ್ಲಿ ಪ್ರೇರಣೆ, ಕ್ರಾಂತಿಕಾರಿಗಳ ಕುರಿತು ಆದರ್ಶ, ದೇಶದ ಬಗ್ಗೆ ಸ್ವಾಭಿಮಾನ ಮೂಡಿಸುವ ಉತ್ಸಾಹದಾಯಕ ಕಾಲ್ನಡಿಗೆ ಕಾರ್ಯಕ್ರಮ ‘ಸ್ವರಾಜ್ಯ ವಾಕಥಾನ್’ ಆಗಸ್ಟ್ 13ರಂದು ನಡೆಯಲಿದೆ. ಯುವಕ ಯುವತಿಯರು ಆಸಕ್ತಿಯಿಂದ ಈ ವಾಕಥಾನ್‌ನಲ್ಲಿ ಹೆಜ್ಜೆ ಹಾಕಲಿದ್ದಾರೆ. ಆಗಸ್ಟ್ 13ರ ಮುಂಜಾನೆ 7.30ಕ್ಕೆ ಲಾಲ್ ಬಾಗ್ ಪಶ್ಚಿಮದ್ವಾರದ ಆವರಣದಿಂದ ಹೊರಟು ರಾಮಕೃಷ್ಣ ಆಶ್ರಮದ ವೃತ್ತವನ್ನು ತಲುಪಿ, ಹಿಂದಿರುಗಲಿದೆ.
ವಿವಿಧ ಕಾಲೇಜುಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಭಾರತದ ಸ್ವಾತಂತ್ರ್ಯೋತ್ಸವಕ್ಕೆ 76 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷ ಉಪನ್ಯಾಸ ಕರ‍್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಈ ವಿಷಯದ ಕುರಿತು ಸಂಪನ್ಮೂಲ ವ್ಯಕ್ತಿಗಳಿಗಾಗಿ ವಿಶೇಷ ಭಾಷಣ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.
ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗೆ, ಶಿಕ್ಷಣ ವಲಯದ ವಿವಿಧ ಶ್ರೇಣಿಯ ಅಧ್ಯಾಪಕರಿಗೆ, ಸ್ನಾತಕೋತ್ತರ ತರಗತಿಗಳ ಆಯ್ದ ವಿದ್ಯಾರ್ಥಿಗಳಿಗೆ ‘Lead India: Harnessing the power of youth towards Ethical Leadership’ ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಆರ್.ವಿ.ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್‌ನ ಸಹಭಾಗಿತ್ವದೊಂದಿಗೆ ಆಗಸ್ಟ್ 10ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬೆಂಗಳೂರಿನ ಜಯನಗರದ ಶಾಶ್ವತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × two =
Remember me
