ಬೆಂಗಳೂರು: ಕರೊನಾ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ ಹೇಳಿದ್ದಾರೆ.
ಯಶವಂತಪುರ ಎಪಿಎಂಸಿ ಮಾರುಕಟ್ಟೆ 1ನೇ ದ್ವಾರದಲ್ಲಿ ಸ್ಥಾಪಿಸಿರುವ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್ ಉದ್ಘಾಟಿಸಿ ಮಾತನಾಡಿದರು.
ಎಪಿಎಂಸಿ ಮಾರುಕಟ್ಟೆಗೆ ನಿತ್ಯ ಹಲವು ಜಿಲ್ಲೆಗಳಿಂದ, ಹೊರರಾಜ್ಯಗಳಿಂದ ರೈತರು, ಲಾರಿ ಚಾಲಕರು, ಕ್ಲೀನರ್​ಗಳು ಮತ್ತು ವರ್ತಕರು ಓಡಾಡುತ್ತಾರೆ. ಈ ಭಾಗದಲ್ಲಿ ವೈರಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಟನಲ್ ಸ್ಥಾಪಿಸಲಾಗಿದೆ ಎಂದರು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಸದಾಸ್ಮಿತ ಫೌಂಡೇಷನ್ ಅಧ್ಯಕ್ಷ ಡಿ.ವಿ. ಶಿವರಾಮ್ ಸಹಕಾರದಲ್ಲಿ ಟನಲ್ ಸ್ಥಾಪಿಸಲಾಗಿದೆ. ಇನ್ನೂ 2- 3 ಯಂತ್ರಗಳ ಅವಶ್ಯಕತೆಯಿದ್ದು, ಕೃಷಿ ಮಾರಾಟ ಇಲಾಖೆ ನಿದೇರ್ಶಕರೊಂದಿಗೆ ರ್ಚಚಿಸ ಲಾಗುವುದು. ಸಾರ್ವಜನಿಕರು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದರು. ಯಶವಂತಪುರ ಎಪಿಎಂಸಿ ಕಾರ್ಯದರ್ಶಿ ಅನಿಲಾ ಕುಮಾರಿ, ಜಂಟಿ ನಿರ್ದೇಶಕ ರಮೇಶ್, ಸದಾಸ್ಮಿತ ಫೌಂಡೇಷನ್​ನ ಉಪಾಧ್ಯಕ್ಷ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಅನಿತಾ ಇತರರಿದ್ದರು.
ಎಪಿಎಂಸಿಯಲ್ಲಿ ಅಳವಡಿಸಿರುವ ಸ್ಯಾನಿಟೈಸರ್ ಟನಲ್​ನಿಂದ ಮಾನವನ ಅಥವಾ ವಸ್ತುಗಳಿಗೆ ಹಾನಿಯಾಗುವುದಿಲ್ಲ. ಈ ದ್ರಾವಣವು ನೈಸರ್ಗಿಕ ಸಂಪನ್ಮೂಲ ಗಳಿಂದ ಮಾಡಲ್ಪಟ್ಟಿದೆ. ಇದರಲ್ಲಿ ಯಾವುದೇ ರಾಸಾಯನಿಕ ಸೇರ್ಪಡೆ ಮಾಡಿಲ್ಲ. ಶೇ. 99.99 ಪರಿಣಾಮಕಾರಿ ಕಾರ್ಯನಿರ್ವಹಿಸಲಿದೆ. ಇದನ್ನು ಚಿತ್ರಮಂದಿರಗಳು, ಕಚೇರಿ ಸ್ಥಳ ಇತ್ಯಾದಿಗಳಲ್ಲಿ ಸೋಂಕು ನಿವಾರಕೆಗೆ ಬಳಸಬಹುದಾಗಿದೆ.
| ಡಿ.ವಿ. ಶಿವರಾಮ್. ಸದಾಸ್ಮಿತ ಫೌಂಡೇಷನ್​ನ ಅಧ್ಯಕ್ಷ
https://www.vijayavani.net/london-court-defers-hearing-on-vijay-mallyas-bankruptcy-case/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
