| ದೇವರಾಜ್ ಎಲ್. ಬೆಂಗಳೂರುಕನ್ನಡ ಉಳಿಸಿ ಬೆಳೆಸುವ ಬಗ್ಗೆ ನಮ್ಮವರಿಗೇ ಕಾಳಜಿ ಇಲ್ಲ. ಪದವಿ ಮತ್ತು ಸ್ನಾತಕೋತ್ತರ ಪದವಿ ಅಂಕಪಟ್ಟಿಗಳನ್ನು ಆಂಗ್ಲ ಭಾಷೆ ಜತೆಗೆ ಕನ್ನಡದಲ್ಲೂ ಮುದ್ರಿಸಿ ನೀಡಬೇಕೆಂಬ ಆದೇಶಕ್ಕೆ ವಿಶ್ವವಿದ್ಯಾಲಯಗಳು ಬೆಲೆ ನೀಡುತ್ತಿಲ್ಲ. ಎಂದಿನಂತೆ ಆಂಗ್ಲಭಾಷೆಯಲ್ಲೇ ಅಂಕಪಟ್ಟಿ ಮುದ್ರಣ ಮಾಡುವ ಮೂಲಕ ಕನ್ನಡ ಭಾಷೆ ಬೆಳವಣಿಗೆ ಬಗ್ಗೆ ಅಸಡ್ಡೆ ತೋರಿವೆ.
ರಾಜ್ಯದಲ್ಲಿ 28 ಸರ್ಕಾರಿ ವಿವಿ, 10 ಖಾಸಗಿ ಮತ್ತು 15 ಡೀಮ್್ಡ ವಿವಿಗಳಿವೆ. ಪ್ರತಿ ವಿವಿಯಿಂದ ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆಯುತ್ತಾರೆ. ಈ ಅಂಕಪಟ್ಟಿಗಳಲ್ಲಿ ವಿದ್ಯಾರ್ಥಿ ನೋಂದಣಿ ಸಂಖ್ಯೆಯಿಂದ ಕುಲಪತಿ ಸಹಿ ವರೆಗೂ ಎಲ್ಲವೂ ಅಂಗ್ಲಭಾಷೆಯಲ್ಲೇ ಇರುತ್ತದೆ. 2019ರ ಜೂನ್​ನಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ 21ನೇ ಸಾಮಾನ್ಯಸಭೆಯಲ್ಲಿ ಅಂಕಪಟ್ಟಿಯನ್ನು ಆಂಗ್ಲಭಾಷೆ ಮಾತ್ರವಲ್ಲದೆ, ಕನ್ನಡದಲ್ಲೂ ಮುದ್ರಣ ಮಾಡಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸಿತ್ತು.
ಈ ಕುರಿತು ಸಭೆಯಲ್ಲಿ ಎಲ್ಲ ಕುಲಪತಿಗಳ ಸಮ್ಮುಖ ಉನ್ನತ ಶಿಕ್ಷಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಎರಡೂ ಭಾಷೆಯಲ್ಲಿ ಅಂಕಪಟ್ಟಿ ಮುದ್ರಣ ಮಾಡಿ ನೀಡಬೇಕೆಂದು ಸೂಚನೆ ನೀಡಿದರು. ಅಲ್ಲದೆ, ಸಂಸ್ಕ್ಪ್ರ ವಿವಿ ಕುಲಪತಿ ಆಂಗ್ಲ ಮತ್ತು ಕನ್ನಡ ಭಾಷೆ ಜತೆಗೆ ಸಂಸ್ಕ್ಪ್ರದಲ್ಲೂ ಮುದ್ರಣ ಮಾಡಬೇಕೆಂದರು. ಆದರೆ, ಮೂರು ಭಾಷೆಯಲ್ಲಿ ಮುದ್ರಣ ಮಾಡಿ ನೀಡುವುದು ಕಷ್ಟ. ಬದಲಾಗಿ ಸಂಸ್ಕ್ಪ್ರ ವಿವಿ ಮಾತ್ರ ಸಂಸ್ಕ್ಪ್ರದಲ್ಲಿ ಮುದ್ರಣ ಮಾಡಿ ನೀಡಲಿ. ಉಳಿದ ವಿವಿಗಳು ದ್ವಿಭಾಷೆಯಲ್ಲಿ ಮುದ್ರಣ ಮಾಡಿ ನೀಡಬೇಕೆಂದು ನಿರ್ಣಯ ತೆಗೆದುಕೊಂಡಿತು.
ಆದರೆ, ನಿರ್ಣಯ ತೆಗೆದುಕೊಂಡು ಒಂದೂವರೆ ವರ್ಷ ಕಳೆದರೂ ಇದರ ಅನುಷ್ಠಾನ ಮಾಡುವಲ್ಲಿ ವಿವಿಗಳು ಅಸಡ್ಡೆ ತೋರಿದ್ದಾರೆ. ಸರ್ಕಾರದ ವಿವಿಗಳೇ ದ್ವಿಭಾಷೆಯಲ್ಲಿ ಮುದ್ರಣ ಮಾಡದೇ ಇರುವುದರಿಂದ ಖಾಸಗಿ ಮತ್ತು ಡೀಮ್ಡ್​ ವಿವಿಗಳು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಪ್ರತಿ ವರ್ಷ 24 ಲಕ್ಷದವರೆಗೆ ಅಂಕಪಟ್ಟಿ ಮುದ್ರಣ ಮಾಡಲಾಗುತ್ತದೆ. ಆಂಗ್ಲ ಭಾಷೆಯಲ್ಲಿ ಮುದ್ರಣ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚು ಎನ್ನುತ್ತಾರೆ ಕುಲಪತಿಗಳು.
ನಾನು ಅಧಿಕಾರವಹಿಸಿಕೊಂಡ ಮೇಲೆ ದ್ವಿಭಾಷೆಯಲ್ಲಿ ಅಂಕಪಟ್ಟಿ ಮುದ್ರಣ ಮಾಡುವಂತೆ ಯಾವುದೇ ಆದೇಶ ಬಂದಿಲ್ಲ. ಬಹುತೇಕ ಎಲ್ಲ ವಿವಿಗಳು ಆಂಗ್ಲಭಾಷೆಯಲ್ಲಿ ಮಾತ್ರವೇ ಅಂಕಪಟ್ಟಿ ಮುದ್ರಣ ಮಾಡಿ ನೀಡುತ್ತಿದ್ದಾರೆ. ಅದನ್ನೇ ನಾವು ಪಾಲಿಸುತ್ತಿದ್ದೇವೆ.| ಪ್ರೊ.ಜೆ.ಟಿ.ದೇವರಾಜುಕುಲಸಚಿವ(ಮೌಲ್ಯಮಾಪನ), ಬೆಂ.ವಿವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
