| ದೇವರಾಜ್ ಎಲ್. ಬೆಂಗಳೂರು
ಪ್ರಾಂಶುಪಾಲರ ಹುದ್ದೆಗೆ ಸರ್ಕಾರಿ ಪ್ರಾಧ್ಯಾಪಕರ ನಡುವೆಯೇ ಸಾಕಷ್ಟು ಪೈಪೋಟಿ ಇರುವಾಗ, ಖಾಸಗಿ ಕಾಲೇಜುಗಳ ಪ್ರಾಧ್ಯಾಪಕರೂ ಪರೀಕ್ಷೆ ಬರೆದು ನೇರವಾಗಿ ಪ್ರಾಂಶುಪಾಲರಾಗಲು ಸರ್ಕಾರ ಅವಕಾಶ ನೀಡಿರುವುದು ಸರ್ಕಾರಿ ಪ್ರಾಧ್ಯಾಪಕರ ಅಸಮಾಧಾನಕ್ಕೆ ಕಾರಣವಾಗಿದೆ. ಪದವಿ ಕಾಲೇಜುಗಳ ಪ್ರಾಂಶುಪಾಲರ ನೇಮಕಕ್ಕೆ ಉನ್ನತ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ರೂಪಿಸಿ ಸಾಕಷ್ಟು ಬದಲಾವಣೆ ತಂದಿದೆ.
15 ಸಾವಿರ ಜನರಲ್ಲಿ ಆತಂಕ: ರಾಜ್ಯದಲ್ಲಿ 428 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಇದರಲ್ಲಿ ಒಂದು ಕಾಲೇಜಿನಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಪ್ರಾಂಶುಪಾಲರು ಕರ್ತವ್ಯನಿರ್ವಹಿಸುತ್ತಿದ್ದಾರೆ. ಉಳಿದ 427 ಕಾಲೇಜುಗಳಲ್ಲಿ ಪ್ರಭಾರಿ ಪ್ರಾಂಶುಪಾಲರಿದ್ದಾರೆ. ಈ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಶಿಕ್ಷಣ ಇಲಾಖಾ ಸೇವೆ (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ಭರ್ತಿ)2020 ನಿಯಮ ಜಾರಿಗೆ ತರಲಾಗಿದೆ. ಇದರನ್ವಯ, ರಾಜ್ಯದ ವಿಶ್ವವಿದ್ಯಾಲಯಗಳಿಂದ ಸಂಯೋಜನೆ ಪಡೆದಿರುವ ಕಾಲೇಜುಗಳಲ್ಲಿ ಕರ್ತವ್ಯನಿರ್ವಹಿಸುವ ಪ್ರಾಧ್ಯಾಪಕರು ಅರ್ಜಿ ಸಲ್ಲಿಸಬಹುದು. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ 15 ಸಾವಿರ ಪ್ರಾಧ್ಯಾಪಕರಿದ್ದಾರೆ. ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನಿಸುವುದನ್ನೇ ಇವರು ಎದುರು ನೋಡುತ್ತಿದ್ದಾರೆ. ಹೊಸ ನಿಯಮದಿಂದಾಗಿ ಖಾಸಗಿ ಕಾಲೇಜಿನ ಪ್ರಾಧ್ಯಾಪಕರೂ ಪರೀಕ್ಷೆಗೆ ಹಾಜರಾಗಿ, ಅನೇಕ ಸರ್ಕಾರಿ ಪ್ರಾಧ್ಯಾಪಕರು ಪ್ರಾಂಶುಪಾಲರಾಗುವ ಅವಕಾಶ ಕೈತಪ್ಪಲಿದೆ ಎಂಬ ಆತಂಕ ಎದುರಾಗಿದೆ.
ಪರೀಕ್ಷೆ ಬರೆಯಬೇಕು:ಕಾಲೇಜು ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯ ಧನ ಸಹಾಯ ಅಯೋಗ(ಯುಜಿಸಿ) ನೀಡುವ ನಿಯಮಗಳನ್ನೇ ಪಾಲಿಸುತ್ತದೆ. ಇದರ ಜತೆ ಕೆಲವು ಹೆಚ್ಚುವರಿ ನಿಯಮಗಳನ್ನು ಸೇರ್ಪಡೆ ಮಾಡಿದೆ. ಇಷ್ಟು ವರ್ಷ ಅರ್ಜಿ ಸಲ್ಲಿಕೆಗೆ ವಯೋಮಿತಿ ಇರಲಿಲ್ಲ. ಈ ಬಾರಿ 55ವರ್ಷಕ್ಕೆ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸಲು ನಿರೀಕ್ಷೆಯಲ್ಲಿದ್ದ ಅನೇಕರ ಕನಸು ಇದರಿಂದಾಗಿಯೇ ಭಗ್ನವಾಗಿದೆ. ಪ್ರಾಂಶುಪಾಲರ ಹುದ್ದೆಗೆ ಪಡೆಯಲು ಪ್ರವೇಶ ಪರೀಕ್ಷೆ ಹಾಜರಾಗುವುದು ಕಡ್ಡಾಯ ಮಾಡಲಾಗಿದೆ. ಎರಡು ತಾಸಿನ ಪರೀಕ್ಷೆ ಬರೆದು, ಅರ್ಹತೆ ಪಡೆಯಲು ನಿಗದಿ ಪಡಿಸಿರುವ ಅಂಕಗಳನ್ನು ಗಳಿಸಬೇಕು.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ನೇಮಕಾತಿ ಪ್ರಾಧಿಕಾರ ಇರಲಿದೆ. ಇಲಾಖೆಯ ಇತರೆ ಅಧಿಕಾರಿಗಳು ಪ್ರಾಧಿಕಾರದ ಸದಸ್ಯರಾಗಿರುತ್ತಾರೆ.
ಕರಡು ಪ್ರತಿಗೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಅದನ್ನು ಪರಿಗಣಿಸದೆಯೇ ಅಂತಿಮ ನಿಯಮ ಬಿಡುಗಡೆ ಮಾಡಿದೆ. ಕೂಡಲೇ ಹಿಂಪಡೆಯಬೇಕು.
| ಡಾ.ಟಿ.ಎಂ.ಮಂಜುನಾಥಅಧ್ಯಕ್ಷ, ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘ

ನಿಗೂಢವಾಗಿ ನಾಪತ್ತೆಯಾದ ಮಹಿಳೆ; ಆ್ಯಂಬುಲೆನ್ಸ್​ ಸಿಬ್ಬಂದಿನೂ ಇಲ್ಲ..ಆಕೆಯೂ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
