ಬೆಂಗಳೂರು:ಸದ್ಯ ದೂರ ಶಿಕ್ಷಣ ನಡೆಸುತ್ತಿರುವ 6 ವಿಶ್ವವಿದ್ಯಾಲಯಗಳ ಹೊರತಾಗಿ ರಾಜ್ಯದಲ್ಲಿರುವ ಇತರ ವಿವಿಗಳು ಹೊಸದಾಗಿ ದೂರ ಶಿಕ್ಷಣ ಕೋರ್ಸ್ ಆರಂಭಿಸುವಂತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮೈಸೂರಿನ ರಾಜ್ಯ ಮುಕ್ತ ವಿಶ್ವವಿದ್ಯಾಲಯ(ಕೆಎಸ್​ಒಯು) ಹೊರತಾಗಿ ಬೇರೆ ವಿವಿಗಳು ದೂರ ಶಿಕ್ಷಣ ನೀಡುತ್ತಿರುವ ಪರಿಣಾಮ ಕೆಎಸ್​ಒಯು ಆದಾಯಕ್ಕೆ ಪೆಟ್ಟುಬಿದ್ದಿದೆ. ಸಿಬ್ಬಂದಿಗೆ ವೇತನ ನೀಡಲು ವಾರ್ಷಿಕ 40 ಕೋಟಿ ರೂ. ಕ್ರೋಡೀಕರಿಸುವುದೂ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ವಿವಿ ಹೊರತಾಗಿ ಬೇರೆ ಯಾವ ವಿವಿಗಳು ದೂರ ಶಿಕ್ಷಣ ಕೋರ್ಸ್ ಆರಂಭಿಸಬಾರದು ಎಂದು ಉನ್ನತ ಶಿಕ್ಷಣ ಇಲಾಖೆಗೆ ಕೆಎಸ್​ಒಯು ಮನವಿ ಮಾಡಿತ್ತು.
ಇತ್ತೀಚೆಗೆ ನಡೆದ ಉನ್ನತ ಶಿಕ್ಷಣ ಪರಿಷತ್ತಿನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿತ್ತು. ಸಭೆಯಲ್ಲಿ ಕೆಎಸ್​ಒಯು ವಾದಕ್ಕೆ ಕೆಲವು ಕುಲಪತಿಗಳು ವಿರೋಧ ವ್ಯಕ್ತಪಡಿಸಿದ್ದರು. ವಿಶ್ವವಿದ್ಯಾಲಯದ ಧನಸಹಾಯ ಆಯೋಗ(ಯುಜಿಸಿ) ನಿಯಮದ ಪ್ರಕಾರ ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್)ಯಿಂದ ‘ಎ’ ಶ್ರೇಣಿಯ ಮಾನ್ಯತೆ ಪಡೆದಿರುವ ಎಲ್ಲ ವಿವಿಗಳಿಗೂ ದೂರ ಶಿಕ್ಷಣ ಕೋರ್ಸ್ ಆರಂಭಿಸಲು ಅನುಮತಿ ನೀಡುತ್ತದೆ. ಉನ್ನತ ಶಿಕ್ಷಣ ಇಲಾಖೆ ಈ ರೀತಿ ನಿರ್ಬಂಧ ಹಾಕುವುದು ಸೂಕ್ತವಲ್ಲ ಎಂದಿದ್ದರು.
ಆರು ವಿವಿಗಳು:ರಾಜ್ಯದಲ್ಲಿ ಪ್ರಸುತ್ತ ಮೈಸೂರಿನ ಕೆಎಸ್​ಒಯು, ಮೈಸೂರು, ಬೆಂಗಳೂರು ವಿವಿ, ಶಿವಮೊಗ್ಗದ ಕುವೆಂಪು ವಿವಿ, ಮಂಗಳೂರು ವಿವಿ, ಧಾರವಾಡದ ಕರ್ನಾಟಕ ವಿವಿ ದೂರ ಶಿಕ್ಷಣದ ಮೂಲಕ ಕೋರ್ಸ್ ಆರಂಭಿಸಿವೆ. ಅಲ್ಲದೆ, ಕುವೆಂಪು ವಿವಿ 300ಕ್ಕೂ ಅಧಿಕ ದೂರ ಶಿಕ್ಷಣ ಕೇಂದ್ರಗಳನ್ನು ತೆರೆದಿದೆ. ಏಕಾಏಕಿ ಕೇಂದ್ರಗಳನ್ನು ರದ್ದು ಮಾಡಿದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗಲಿದೆ. ಆದ್ದರಿಂದ ಕೇಂದ್ರಗಳನ್ನು ಮುಂದುವರಿಸಬೇಕೆಂದು ವಿವಿ ಕುಲಪತಿ ಮನವಿ ಮಾಡಿದ್ದರು. ಇದೇ ರೀತಿ ಬೆಂಗಳೂರು ವಿವಿ ದೂರ ಶಿಕ್ಷಣ ಕೋರ್ಸ್​ಗಳಿಂದ ವಿವಿಗೆ ಆರ್ಥಿಕ ಸಹಾಯವಾಗುತ್ತಿದೆ. ವಿದ್ಯಾರ್ಥಿಗಳಿಗೂ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುತ್ತಿದೆ ಎಂದರು.
ಈ ಎಲ್ಲ ವಾದಗಳನ್ನು ಆಲಿಸಿದ ಉನ್ನತ ಶಿಕ್ಷಣ ಪರಿಷತ್ತು, ಹಾಲಿ ದೂರ ಶಿಕ್ಷಣ ನೀಡುತ್ತಿರುವ 6 ವಿವಿಗಳ ಹೊರತಾಗಿ ಇತರ ವಿವಿ ಯಾವುದೇ ಕಾರಣಕ್ಕೂ ದೂರ ಶಿಕ್ಷಣ ಕೋರ್ಸ್ ಆರಂಭಿಸುವಂತಿಲ್ಲ ಎಂದು ಸೂಚಿಸಿದೆ.
ಕುಸಿದ ಪ್ರವೇಶ:ವಿವಿಗಳಿಗೆ ದೂರ ಶಿಕ್ಷಣ ವಿಭಾಗ ಒಂದು ರೀತಿಯಲ್ಲಿ ಆರ್ಥಿಕ ಆದಾಯ ತಂದುಕೊಡುವ ಕೇಂದ್ರಗಳಾಗಿವೆ. ಮೈಸೂರಿನಲ್ಲಿ ಒಂದೇ ಕ್ಯಾಂಪಸ್​ನಲ್ಲಿರುವ ಕೆಎಸ್​ಒಯು ಮತ್ತು ಮೈಸೂರು ವಿವಿ ದೂರ ಶಿಕ್ಷಣ ಕೋರ್ಸ್ ಆರಂಭಿಸಿದ್ದರಿಂದ ಕೆಎಸ್​ಒಯು ಪ್ರವೇಶ ಕಡಿಮೆ ಆಗಿದೆ. ಬೆಂಗಳೂರು ವಿವಿಯಲ್ಲೂ ಮೊದಲಿನಂತೆ ಪ್ರವೇಶವಿಲ್ಲ. ಎಲ್ಲ ವಿವಿಗಳು ಆರಂಭಿಸಿದರೆ ಈ ಮೊದಲು ಆರಂಭಿಸಿದ ವಿವಿಗಳಿಗೆ ಪ್ರವೇಶ ಕಡಿತವಾಗಿ ಮುಚ್ಚುವ ಸ್ಥಿತಿ ತಲುಪಲಿವೆ.
|ದೇವರಾಜ್ ಎಲ್. ಬೆಂಗಳೂರು
ಅನುಮೋದನೆ ಇಲ್ಲದೆ 405.76 ಕೋಟಿ ರೂಪಾಯಿ ಹಂಚಿಕೆ ಮಾಡಿದ ಬಿಬಿಎಂಪಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eleven =
Remember me
