ಉಡುಪಿ:ಕಟಪಾಡಿ, ಏಣಗುಡ್ಡೆ ರೈಲ್ವೆ ಟ್ರ್ಯಾಕ್ ಬಳಿ ವಾಸವಿರುವ ಮುದ್ದು ಪೂಜಾರಿ ಎಂಬವರ ಬದುಕು ಶೋಚನೀಯವಾಗಿ, ಲಾಕ್​ಡೌನ್ ಸಮಯದಲ್ಲಿ ಊಟಕ್ಕಿಲ್ಲದ ಪರಿಸ್ಥಿತಿ ಇದೆ. ಮುರುಕಲು ಮನೆಯಲ್ಲಿ ವಾಸವಿರುವ ಇವರು 8 ವರ್ಷಗಳಿಂದ ಗಂಜಿ ಬಿಟ್ಟು ಬೇರೇನೂ ಸೇವಿಸುತ್ತಿರಲಿಲ್ಲ.
ಸರ್ಕಾರದ ವೃದ್ಧಾಪ್ಯ ವೇತನದ ಹಣ ಮಾತ್ರ ಇವರಿಗೆ ಸಿಗುತ್ತದೆ. ವೋಟರ್ ಐಡಿ, ರೇಷನ್ ಕಾರ್ಡ್, ವಿದ್ಯುತ್, ನೀರಿನ ಸಂಪರ್ಕ ಇವರಿಗೆ ಇಲ್ಲ. ಲಾಕ್​ಡೌನ್​ನಿಂದಾಗಿ ವೇತನವೂ ಕೈ ಸೇರಿಲ್ಲ. ಅಂಗಡಿಯಿಂದ ಅಕ್ಕಿ ತರಲೂ ಆಗುತ್ತಿರಲಿಲ್ಲ. ಇವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಶಿಕ್ಷಕಿ, ಇನ್ನೊಬ್ಬರು ಇಂಜಿನಿಯರ್. ಮುದ್ದು ಪೂಜಾರಿ ಮನೆಬಿಟ್ಟು ಹೊರಹೋಗಲು ಕೇಳುತ್ತಿಲ್ಲ. ಮಕ್ಕಳ ಮಾತು ಕೇಳುತ್ತಿರಲಿಲ್ಲ.
ಈ ಬಗ್ಗೆ ದಿಗ್ವಿಜಯ ನ್ಯೂಸ್ 247 ವಿಶೇಷ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಮುದ್ದು ಪೂಜಾರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ. ಸ್ಥಳಕ್ಕೆ ಕಾಪು ತಹಸೀಲ್ದಾರ್ ಮಹಮ್ಮದ್ ಇಸಾಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − three =
Remember me
