ಬೆಂಗಳೂರು:ಇದು ಪ್ರಸಂಗದೊಳಗೊಂದು ಪ್ರಸಂಗ, ಅದರಲ್ಲಿ ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿ ಆಯಿತು ರಸಭಂಗ!– ಹೌದು.. ಯಕ್ಷಗಾನ ಪ್ರಸಂಗವೊಂದರಲ್ಲಿ ವೇಷಧಾರಿಯೊಬ್ಬರು ಪ್ರಸಂಗದ ಹೊರತಾಗಿ ಮಾತನಾಡಿ ಯಕ್ಷಗಾನ ಕಲಾರಸಿಕರಿಗೆ ರಸಭಂಗವಾಗಿದೆ. ಅದೀಗ ಯಕ್ಷಗಾನಪ್ರಿಯರ ವಲಯದಲ್ಲಿ ಚರ್ಚೆಗೆ ಒಳಗಾಗಿದ್ದು ಸರಿತಪ್ಪುಗಳ ವಿಮರ್ಶೆ ನಡೆಯಲಾರಂಭಿಸಿದೆ.
ಇತ್ತೀಚೆಗೆ ಕರಾವಳಿ ಪ್ರದೇಶದಲ್ಲಿ ಮೇಳವೊಂದು ಯಕ್ಷಗಾನ ಪ್ರದರ್ಶನ ನೀಡಿದ್ದು, ಅದರಲ್ಲಿ ಪ್ರಾಗ್ಜ್ಯೋತಿಷಪುರದ ರಾಣಿ ಮಾತನಾಡುವ ಸನ್ನಿವೇಶ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವೇಷಧಾರಿ, ರಾಣಿಯಾಗಿ ಮಾತನಾಡುತ್ತಿದ್ದರೂ ಕೆಲವು ಪ್ರೇಕ್ಷಕರ ವರ್ತನೆಯಿಂದ ವಿಚಲಿತರಾಗಿ ಪಾತ್ರದ ಸಂಭಾಷಣೆ ಹೊರತಾದ ಮಾತನಾಡಿದರು.
ರಂಗಸ್ಥಳದ ಎದುರಿಗೇ ಇದ್ದ ಕೆಲವು ಹುಡುಗರು ಮೊಬೈಲ್​ಫೋನ್​ ಬಳಸುತ್ತಿದ್ದುದರಿಂದ ಕಿರಿಕಿರಿಗೆ ಒಳಗಾಗಿ ವೇಷಧಾರಿ ತನ್ನ ಪಾತ್ರವನ್ನೂ ಮರೆತು ಅವರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದ್ದು ಸರಿ-ತಪ್ಪುಗಳ ವಿಮರ್ಶೆ ನಡೆಯುತ್ತಿದೆ.
ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿದ್ದೇಕೆ? ನಟ್ಟಿರುಳಲಿ ಪ್ರಸಂಗದ ನಡುವೆ ಆಯ್ತು ರಸಭಂಗ!ವಿವರಗಳಿಗೆhttps://t.co/YaFZZbZDD9ನೋಡಿpic.twitter.com/dWUiWdWoaY
— Vijayavani (@VVani4U)March 9, 2021

ಪ್ರೇಕ್ಷಕರು ತಲ್ಲೀನರಾಗಿ ನೋಡಿದರೆ ಪಾತ್ರಧಾರಿಗಳಿಗೂ ಉತ್ಸಾಹವಿರುತ್ತದೆ, ಸಾರ್ವಜನಿಕರು ಒಂದು ಕಲೆಯನ್ನು ಸಂಪೂರ್ಣವಾಗಿ ಆಸ್ವಾದಿಸಬೇಕು ಎಂದು ಒಂದಷ್ಟು ಮಂದಿ ಆ ಕಲಾವಿದರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಪ್ರೇಕ್ಷಕರಿಗೆ ಇರುವಷ್ಟೇ ಶಿಸ್ತು ಕಲಾವಿದರಿಗೂ ಇರಬೇಕು. ಕಲಾ ಪ್ರದರ್ಶನಕ್ಕೆ ಅಡ್ಡಿ ಆಗುವಂತೆ ಪ್ರೇಕ್ಷಕರ ವರ್ತನೆ ಇದ್ದಿದ್ದರೆ ಅದನ್ನು ಆ ಸನ್ನಿವೇಶದ ಬಳಿಕ ಬೇರೆಯವರಿಂದ ಹೇಳಿಸಬೇಕಿತ್ತು. ಅದರ ಬದಲು ವೇಷಧಾರಿಯೇ ರಂಗಸ್ಥಳದಿಂದಲೇ ಹಾಗೆ ಹೇಳಬಾರದಿತ್ತು ಎಂದು ಒಂದಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಹಂಚಿಕೆ ಮುಂದುವರಿದಿದ್ದು, ಪರ-ವಿರೋಧದ ಚರ್ಚೆ ಕೂಡ ಅಲ್ಲಲ್ಲಿ ಮತ್ತೆ ಮತ್ತೆ ಕೇಳಿಬರುತ್ತಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
ಸದನದಲ್ಲಿ ಬಟ್ಟೆ ಬಿಚ್ಚಿದ ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡನೆ; ನಾನು ಅಂಗಿ ಬಿಚ್ಚಿಲ್ಲ ಎಂದು ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

ಇಲ್ಲಿ ಕಪ್ಪು ಬಟ್ಟೆ ತೊಟ್ಟವರಿಗೆ ಪ್ರವೇಶವಿಲ್ಲ!; ಕಪ್ಪು ಮಾಸ್ಕ್ ಧರಿಸಿದವರಿಗೂ ನಿರ್ಬಂಧ!!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 3 =
Remember me
