ಪುತ್ತೂರು:ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ದಿವಿತ್​ ಯು. ರೈ ಎಂಬುವವರು 10ನೇ ತರಗತಿ ಓದುತ್ತಿರುವಾಗ ರಚಿಸಿದ್ದ ಆಂಗ್ಲ ಕವನ ಇದೀಗ 8ನೇ ತರಗತಿಯ ಪಠ್ಯ ಪುಸ್ತಕದಲ್ಲಿ ಸೇರ್ಪಡೆಯಾಗಿದೆ.
ಉದಯ ಕುಮಾರ್​ ರೈ ನೀಲಂಪಾಡಿ ಮತ್ತು ಪ್ರತಿಮಾ ಯು. ರೈ ದಂಪತಿ ಪುತ್ರ ದಿವಿತ್​, ಸದ್ಯ ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್​ ಕಾಲೇಜಿನಲ್ಲಿ ಎರಡನೇ ವರ್ಷದ ಬಿಇ ​ವಿದ್ಯಾರ್ಥಿ. 4 ವರ್ಷದ ಹಿಂದೆ ಅಂದರೆ ಪುತ್ತೂರಿನ ರಾಮಕೃಷ್ಣ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವಾಗ ದಿವಿತ್​ ರಚನೆಯ “ಸಿಂಪಲ್​ ಲೈಫ್​” ಎಂಬ ಆಂಗ್ಲ ಕವನ ಸಂಕಲನ ಬಿಡುಗಡೆಯಾಗಿತ್ತು. ಆ ಕೃತಿಯ “ಮದರ್​ ಅರ್ಥ್​” ಕವನವನ್ನು ರಾಜ್ಯ ಸರ್ಕಾರ ಈ ಬಾರಿಯ 8ನೇ ತರಗತಿಯ ಕಲಿಕಾ ಚೇತರಿಕೆ ಪಠ್ಯದಲ್ಲಿ ಅಳವಡಿಸಿದೆ.
ದಿವಿತ್​ ಪುತ್ತೂರಿನ ಹಾರಾಡಿ ಸರ್ಕಾರಿ ಶಾಲೆಯಲ್ಲಿ 6ನೇ ತರಗತಿ ಕಲಿಯುತ್ತಿದ್ದ ವೇಳೆ “ಡ್ಯೂ ಡ್ರಾಪ್ಸ್​” ಎಂಬ ಆಂಗ್ಲ ಕವನ ಸಂಕಲನ ರಚಿಸಿ ಬಿಡುಗಡೆಗೊಳಿಸಿದ್ದರು.
ಗಮನ ಸೆಳೆದಿದ್ದ ಬಾಲಕ: 2016ರಲ್ಲಿ ಹಾರಾಡಿ ಸರ್ಕಾರಿ ಶಾಲೆಯ ಐವರು ಶಿಕ್ಷಕಿಯರ ವರ್ಗಾವಣೆ ಸಂದರ್ಭ ವಿದ್ಯಾರ್ಥಿ ದಿವಿತ್​ ರೈ ನಡೆಸಿದ್ದ ಪ್ರತಿಭಟನೆ ಅಂದಿನ ಗೃಹಸಚಿವ ಡಾ.ಜಿ.ಪರಮೇಶ್ವರ್​ ಅವರ ಗಮನ ಸೆಳೆದಿತ್ತು. ವಿದ್ಯಾರ್ಥಿಯ ಒತ್ತಾಸೆಯಂತೆ ಗೃಹಸಚಿವರು ಶಾಲೆಗೂ ಭೇಟಿ ನೀಡಿದ್ದರು. ಸ್ಕೌಟ್ಸ್​-ಗೈಡ್ಸ್​ ಜಾಂಬೂರಿಗಾಗಿ ಜಪಾನ್​ಗೆ ತೆರಳುವ ಸಂದರ್ಭ ದಿವಿತ್​ ರೈ ಅವರ ಖರ್ಚನ್ನು ಭರಿಸಿದ್ದ ಪರಮೇಶ್ವರ್​, ಪ್ರಸಕ್ತ ಇಂಜಿನಿಯರಿಂಗ್​ ವಿದ್ಯಾಭ್ಯಾಸದ ವೆಚ್ಚವನ್ನೂ ಪಾವತಿಸುತ್ತಿದ್ದಾರೆ.
ಇನ್ನೇನು ತಾಳಿಕಟ್ಟಬೇಕು, ನಾಳೆಯೇ ಹನಿಮೂನ್​… ಅಷ್ಟರಲ್ಲಿ ಪೊಲೀಸರ ಅತಿಥಿಯಾದ ವರ! ನಿಟ್ಟುಸಿರು ಬಿಟ್ಟ ವಧುವಿನ ಕುಟುಂಬಸ್ಥರು

ಸರ್ಕಾರಿ ಮಹಿಳಾ ನಿಲಯದ ಹುಡುಗಿಯ ಕೈಹಿಡಿದ ದಾವಣಗೆರೆ ಯುವಕ! ಶಾಸ್ತ್ರೋಕ್ತವಾಗಿ ಮದ್ವೆ ನಡೆಸಿಕೊಟ್ಟ ಅಧಿಕಾರಿಗಳು- ಶಾಸಕರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − six =
Remember me
