ಹೊಳೆಆಲೂರ (ಗದಗ):ಐತಿಹಾಸಿಕ ಎನ್ನುವಂತೆ ಅಸೂಟಿ ಗ್ರಾಮದ ಕೋರಣೇಶ್ವರ ಶಾಂತಿಧಾಮದಲ್ಲಿ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ದಿವಾನ ಶರೀಫ್ ಮುಲ್ಲಾ ಅವರ ಪಟ್ಟಾಧಿಕಾರ ನೆರವೇರಿತು. ಹೊಳೆಆಲೂರ ಸಮೀಪದ ಅಸೂಟಿ-ಸೋಮನಕಟ್ಟಿ ಮಧ್ಯದಲ್ಲಿ ನೂತನವಾಗಿ ನಿರ್ವಣವಾಗಿರುವ ಶಾಂತಿಧಾಮದಲ್ಲಿ ಕಲಬುರಗಿ ಕೋರಣೇಶ್ವರ ಮಠದ ಮುರುಘೕಂದ್ರ ಶ್ರೀಗಳ ದಿವ್ಯ ಮಾರ್ಗದರ್ಶನದಲ್ಲಿ ಪಟ್ಟಾಧಿಕಾರದ ವಿಧಿ-ವಿಧಾನಗಳು ಸಂಪನ್ನಗೊಂಡವು.
ನಂತರ ಆಶೀರ್ವಚನ ನೀಡಿದ ಮುರುಘೕಂದ್ರ ಕೋರಣೇಶ್ವರ ಶ್ರೀಗಳು, ಮಠ-ಮಾನ್ಯಗಳ ಸಾಧು-ಸಂತರು ಕೇವಲ ಆಚಾರ-ವಿಚಾರದಲ್ಲಿ ಮೈಮರೆಯದೆ ಜಗಜ್ಯೋತಿ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ವಿಚಾರಧಾರೆಗಳನ್ನು ಅನುಷ್ಠಾನ ಮಾಡುವ ಮೂಲಕ ಸಮಾನತೆಯ ಕನಸು ನನಸಾಗಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದರು.
ದಿವಾನ ಶರೀಫ್ ಅವರಿಗೆ ಕಳೆದ ನವೆಂಬರ್ 10ರಂದು ಲಿಂಗದೀಕ್ಷೆ ನೀಡಲಾಗಿದೆ. ಕಲಬುರಗಿಯ ಕೋರಣೇಶ್ವರ ಮಠದಲ್ಲಿ ಲಿಂಗಾಯತ ಧರ್ಮದ ಆಚಾರ-ವಿಚಾರ, ಹಿನ್ನೆಲೆ, ಪರಂಪರೆ, 12ನೇ ಶತಮಾನದ ವಚನಗಳನ್ನು ಕಲಿಸಲಾಗಿದೆ. ಇನ್ಮುಂದೆ ಅವರ ನೇತೃತ್ವದಲ್ಲಿ ಅಸೂಟಿಯ ಕೋರಣೇಶ್ವರ ಶಾಂತಿಧಾಮವನ್ನು ಸರ್ವಧರ್ಮಗಳ ಸಮಾನತೆಯ ಶ್ರದ್ಧಾ ಕೇಂದ್ರವಾಗಿ ರೂಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ಲಿಂಗಾಯತ ಧರ್ಮ ಜಾತಿ ವಾಚಕವಲ್ಲ, ಕಾಯಕ ಮಂತ್ರ, ಸಮಾನತೆಯ ತತ್ತ್ವ ಇಷ್ಟಲಿಂಗ, ಭಾವಲಿಂಗ, ಪ್ರಾಣಲಿಂಗಗಳ ತತ್ತ್ವನ್ನು ಜೀವನದಲ್ಲಿ ಅಳವಡಿಸಿಕೊಂಡು ಬಾಳುವ ಯಾರು ಬೇಕಾದರೂ ಲಿಂಗಾಯತ ಧರ್ಮ ಸೇರಬಹುದು ಎಂದರು.
ಮುರುಘೕಂದ್ರ ಕೋರಣೇಶ್ವರ ಶ್ರೀಗಳ ಸಾನ್ನಿಧ್ಯದಲ್ಲಿ 7 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು. ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು, ರೋಣದ ವಿಶ್ವನಾಥ ದೇವರು, ಕಮತಗಿಯ ಶಿವಕುಮಾರ ಸ್ವಾಮಿಗಳು, ಬಾದಾಮಿಯ ಶಿವಪೂಜಾ ಶ್ರೀಗಳು, ಬೆಟಗೇರಿಯ ವೀರೇಶ್ವರ ಶ್ರೀಗಳು, ರೋಣದ ಬೂದೀಶ್ವರ ಮಠದ ವಿಶ್ವನಾಥ ದೇವರು, ಶರಣೆ ನೀಲಲೋಚನಾ ತಾಯಿ, ನರಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್ಲ, ರವೀಂದ್ರ ಹಿರೇಮಠ, ಮಂಜುನಾಥ ಸಾಲಿಮಠ, ಗ್ರಾಪಂ ಅಧ್ಯಕ್ಷ ವೀರೇಶ ದಿಂಡೂರ, ಇತರರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
