ಬೆಂಗಳೂರು :ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮಾಜಿ ಮೇಯರ್, ಕಾಂಗ್ರೆಸ್ ಮುಖಂಡ ಸಂಪತ್ ರಾಜ್ ತಪ್ಪಿಸಿಕೊಳ್ಳಲು ಸಹಕರಿಸಿದವರಿಗೆ ಸಿಸಿಬಿ ಬಿಸಿ ಮುಟ್ಟಿಸಿದೆ. ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಸಂಪತ್ ರಾಜ್, ಸಹೋದರಿಯ ಪತಿ, ಕುಟುಂಬ ಸದಸ್ಯರು, ಆಪ್ತರು ಸೇರಿದಂತೆ 18 ಮಂದಿಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಸಂಪತ್ ರಾಜ್‌ಗೆ ಚಿಕಿತ್ಸೆ ನೀಡಿದ ಬ್ಯಾಪಿಸ್ಟ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಯನ್ನು ಸಹ ಕರೆದು ಸೋಮವಾರ ಸಂಜೆ ವರೆಗೂ ವಿಚಾರಣೆ ನಡೆಸಿ ಕಳುಹಿಸಿದ್ದಾರೆ.
ಗಲಭೆ ಪ್ರಕರಣದಲ್ಲಿ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಕೋರ್ಟ್‌ಗೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಸಂಪತ್ ರಾಜ್ ಪಾತ್ರ ಇರುವುದು ಸಾಕ್ಷಿ ಸಮೇತ ಉಲ್ಲೇಖಿಸಿದ್ದರು. ಅಲ್ಲದೆ, 2ನೇ ಬಾರಿ ವಿಚಾರಣೆಗೆ ಬರುವಂತೆ ನೋಟಿಸ್ ಜಾರಿ ಮಾಡಿದ್ದರು. ಇದಾದ ಮೇಲೆ ಬಂಧನ ಭೀತಿಯಿಂದ ಸಂಪತ್ ರಾಜ್, ಕರೊನಾ ಸೋಂಕು ದೃಢವಾಗಿರುವ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.
ಈ ನಡುವೆ ಅ.2ರಂದು ಆಸ್ಪತ್ರೆಯಿಂದ ಸಂಪತ್ ರಾಜ್ ಡಿಸ್ಚಾರ್ಜ್ ಆಗಿದ್ದ ಸಂಪತ್ ರಾಜ್ ಎರಡು ದಿನ ಬಿಟ್ಟು ದಿಢೀರ್ ವಾಸಪ್ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ಸಂಪೂರ್ಣ ಗುಣಮುಖವಾದ ಮೇಲೆ ವಿಚಾರಣೆ ನಡೆಸಲು ನಿರ್ಧರಿಸಿದ್ದರು. ಆದರೆ, ಒಂದೂವರೆ ತಿಂಗಳು ಆದರೂ ಡಿಸ್ಚಾರ್ಜ್ ಆಗದ ಕಾರಣಕ್ಕೆ ಆಸ್ಪತ್ರೆ ವೈದ್ಯರಿಗೆ ನೋಟಿಸ್ ಕೊಟ್ಟು, ಸಂಪತ್ ರಾಜ್ ಗುಣಮುಖವಾದ ಮೇಲೆ ಮಾಹಿತಿ ಕೋರಿದ್ದರು.
ಇದ್ಯಾವುದಕ್ಕೂ ಲೆಕ್ಕಿಸದ ಆಸ್ಪತ್ರೆ ವೈದ್ಯರು, ಅ.14ರಂದು ಸಂಪತ್ ರಾಜ್‌ನನ್ನು ಡಿಸ್ಚಾರ್ಜ್ ಮಾಡಿದ್ದಾರೆ. ಇತ್ತೀಚೆಗೆ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಹೋಗಿದ್ದ ಸಿಸಿಬಿ ಪೊಲೀಸರಿಗೆ ಶಾಕ್ ಆಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆಸ್ಪತ್ರೆ ವೈದ್ಯರಿಗೆ ಮತ್ತು ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಯವರು ಸಿಸಿಬಿ ಕಚೇರಿಗೆ ಬಂದು ವಿಚಾರಣೆ ಎದುರಿಸಿದ್ದಾರೆ. ಮತ್ತೊಂದೆಡೆ ಸಂಪತ್ ರಾಜ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಾಜಿ ಮೇಯರ್ ಸಹೋದರಿಯ ಪತಿ ಬಾಲಕೃಷ್ಣ ಎಂಬುವರನ್ನು ಸಿಸಿಬಿ ಡಿಸಿಪಿ ರವಿಕುಮಾರ್, ತೀವ್ರ ವಿಚಾರಣೆ ನಡೆಸಿದ್ದಾರೆ. ಇನ್ನೂ ಆಪ್ತರು ಮತ್ತು ಕುಟುಂಬ ಸದಸ್ಯರ ಮೊಬೈಲ್ ಮಾಹಿತಿ ಪಡೆದು ಕಳುಹಿಸಿರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.
ಸಂಪತ್‌ಗೆ ರಾಜಕೀಯ ಶ್ರೀರಕ್ಷೆ :ಮಾಜಿ ಮೇಯರ್ ಸಂಪತ್ ರಾಜ್, ತಲೆಮರೆಸಿಕೊಳ್ಳಲು ಪ್ರಭಾವಿ ರಾಜಕಾರಣಿಗಳ ಶ್ರೀರಕ್ಷೆ ಇರುವುದು ಕೇಳಿ ಬಂದಿದೆ. ಗಲಭೆ ಪ್ರಕರಣದ ತನಿಖೆ ಶುರುವಾರ ಕೆಲವೇ ದಿನಕ್ಕೆ ಪೊಲೀಸರ ತನಿಖೆಯಲ್ಲಿ ಸಂಪತ್ ರಾಜ್, ಕೈವಾಡ ದೃಢವಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಒಂದಲ್ಲೊಂದು ನೆಪದಲ್ಲಿ ಪೊಲೀಸರಿಗೆ ಸಿಗದೆ ಓಡಾಡುತ್ತಿದ್ದಾರೆ. ಕರೊನಾಗೆ ಚಿಕಿತ್ಸೆ ನೀಡಿದ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ಮೇಲೂ ರಾಜಕೀಯ ಒತ್ತಡತಂದು ಡಿಸ್ಚಾರ್ಜ್ ಆಗಿರುವ ಆರೋಪ ಕೇಳಿಬಂದಿದೆ. ಒಂದು ವೇಳೆ ಬಂಧನಕ್ಕೆ ಒಳಗಾದರೇ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನೆಡೆಯಾಗುವ ಭಯದಲ್ಲಿ ಸಂಪತ್ ರಾಜ್‌ನನ್ನು ಭೂಗತ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 2 =
Remember me
