ಚಿಕ್ಕಮಗಳೂರು:ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ, ಕಾವಲ್​ಭೈರಸಂದ್ರ ಗಲಭೆ ಆರೋಪಿಗಳ ರಕ್ಷಣೆಗೆ ನಿಂತಿರುವ ಚಾಮರಾಜಪೇಟೆ ಶಾಸಕ ಜಮೀರ್​ ಅಹ್ಮದ್​ ಖಾನ್​ ಅವರೇ ಇಡೀ ಪ್ರಕರಣದ ಪ್ರೊಡ್ಯೂಸರ್​ ಮತ್ತು ಡೈರೆಕ್ಟರ್​. ಇದರಲ್ಲಿನ ಆ್ಯಕ್ಟರ್​ಗಳು ಯಾರೆಂದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಈ ಹಿಂದೆ ಪಾದರಾಯನಪುರದಲ್ಲಿ ಕರೊನಾ ಸೇನಾನಿಗಳ ಮೇಲೆ ಹಲ್ಲೆ ನಡೆಸಿ ಜೈಲಿಗೆ ಹೋಗಿ ಬಂದವರಿಗೆಹಾರ ಹಾಕಿ ಸನ್ಮಾನ ಮಾಡಿ ಇನ್ನಷ್ಟು ಪ್ರಚೋದಿಸುವ ಕೆಲಸ ಮಾಡಿದ್ದು ಜಮೀರ್​ ಅಹ್ಮದ್​. ಬೆಂಗಳೂರಿನ ಗಲಭೆಯ ಗೋಲಿಬಾರ್​ನಲ್ಲಿ ಸತ್ತವರು ಯಾರೂ ಅಮಾಯಕರಲ್ಲ. ಅಮಾಯಕರಾಗಿದ್ದರೆ ಮನೆಯಲ್ಲಿ ಮಲಗಿರುತ್ತಿದ್ದರು. ಹಾಗಿದ್ದರೆ 300ಕ್ಕೂ ಹೆಚ್ಚು ವಾಹನವನ್ನು ಸುಟ್ಟ ಕಿರಾತಕರು ಯಾರು ಎಂದು ಪ್ರಶ್ನಿಸಿದರು. ಸಮಾಜದ ಕಿಡಿಗೇಡಿಗಳಿಗೆ ಬೆಂಬಲವಾಗಿ ನಿಂತರೆ ಅಲ್ಪಸಂಖ್ಯಾತರ ಮುಖಂಡ ಎಂಬ ಟ್ರಂಪ್​ ಕಾರ್ಡ್​ ಸಿಗುತ್ತದೆ ಎನ್ನುವ ಕಾರಣಕ್ಕೆ ಜಮೀರ್​ ಅಹ್ಮದ್​ ಈ ಕೆಲಸ ಮಾಡುತ್ತಿದ್ದಾರೆ. ಯಾರು ಏನೇ ಮಾಡಿದರೂ ನಾನು ಬೆಂಬಲಕ್ಕಿದ್ದೇನೆ ಎನ್ನುವ ಸಂದೇಶ ನೀಡಲು ಹೊರಟಿದ್ದಾರೆ. ಈ ಬಗ್ಗೆ ಅವರ ಪಕ್ಷ ಯೋಚಿಸಬೇಕು ಎಂದು ಕಾಂಗ್ರೆಸ್​ಗೆ ಸಚಿವರು ಮಾತಿನಲ್ಲೇ ತಿವಿದರು.
ಇದನ್ನೂ ಓದಿರಿಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಮುಸ್ಲಿಂ ಮುಖಂಡರ ಭೇಟಿ, ಮನೆ ಕಟ್ಟಿಸಿಕೊಡುವುದಾಗಿ ಭರವಸೆ!
ಗಲಭೆಗೆ ಮುಂದಾಳತ್ವ ನೀಡಿದ್ದು ಎಸ್​ಡಿಪಿಐ. ಆ್ಯಕ್ಟಿಂಗ್​ ಮಾಡಿದವರು ಗಲಭೆಕೋರರು. ಹೀಗಾಗಿ ಇಡೀ ಪ್ರಕರಣದ ಬಗ್ಗೆ ಜಮೀರ್​ಗೆ ಚೆನ್ನಾಗಿ ಗೊತ್ತಿದೆ. ಅವರು ಎಲ್ಲವನ್ನೂ ಸ್ಪಷ್ಟಪಡಿಸಲಿ. ಘಟನೆಯಿಂದಾದ ಸಂಪೂರ್ಣ ನಷ್ಟವನ್ನು ಅವರೇ ಭರಿಸಲಿ ಎಂದರು.
ಇದನ್ನೂ ಓದಿರಿಪುಂಡರ ದಾಂಧಲೆ ಬಗ್ಗೆ ಕೊನೆಗೂ ದೂರು ದಾಖಲಿಸಿದ ಅಖಂಡ ಶ್ರೀನಿವಾಸ್​ ಮೂರ್ತಿ, ಯಾರ ವಿರುದ್ಧ ಗೊತ್ತಾ?
ಕಾಂಗ್ರೆಸ್​ ಪಕ್ಷ ಮಗುವನ್ನು ಚಿವುಟಿ ತೊಟ್ಟಿಲನ್ನು ತೂಗುವ ಕೆಲಸ ಮಾಡುತ್ತಿದೆ. ಆಧಾರ ಇದ್ದರೆ ಎಸ್​ಡಿಪಿಐ ಬ್ಯಾನ್​ ಮಾಡಲಿ ಎಂದು ದಿನೇಶ್​ ಗುಂಡೂರಾವ್​ ಹೇಳುತ್ತಾರೆ. ಈ ಮೂಲಕ ಆ ಸಂಘಟನೆ ಪರವಾಗಿ ಬೇಲ್​ ಅಪ್ಲಿಕೇಶನ್​ ಹಾಕಿ ವಕಾಲತ್ತು ವಹಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು. ಮೊನ್ನೆ ಗಲಭೆ ನಡೆಸಿ ಬೆಂಕಿ ಹಾಕಿದವರೆಲ್ಲರಿಗೂ ಜಾಮೀನು ಮತ್ತು ವಕಾಲತನ್ನು ಕಾಂಗ್ರೆಸ್​ ಪಕ್ಷವೇ ಒದಗಿಸುತ್ತದೆ. ಇದರಲ್ಲಿ ಅನುಮಾನ ಬೇಡ ಎಂದರು.
ನವೀನ್​ ಹಾಕಿದ ಪೋಸ್ಟ್​ನ ಸಮರ್ಥನೆಗೆ ನಾವು ನಿಂತುಕೊಂಡಿಲ್ಲ. ತಪ್ಪು ಮಾಡಿದ್ದರೆ ಅವನಿಗೂ ಶಿಕ್ಷೆಯಾಗಬೇಕು. ರಾಮ, ಕೃಷ್ಣನ ಬಗ್ಗೆ ಪೋಸ್ಟ್​ ಹಾಕಿದ್ದವರಿಗೂ ಶಿಕ್ಷೆಯಾಗಬೇಕು. ಕಾನೂನು ಕೈಗೆತ್ತಿಕೊಂಡವರಿಗೂ ಶಿಕ್ಷೆಯಾಗಬೇಕು ಎಂದರು.
ಶಾಸಕ ಅಖಂಡ ಶ್ರೀನಿವಾಸ್ ಮನೆಗೆ ಮುಸ್ಲಿಂ ಮುಖಂಡರ ಭೇಟಿ, ಮನೆ ಕಟ್ಟಿಸಿಕೊಡುವುದಾಗಿ ಭರವಸೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
