ಬೆಂಗಳೂರು:ಡಿಜೆ ಹಳ್ಳಿ, ಕೆಜಿ ಹಳ್ಳಿ, ಕಾವಲ್​ಭೈರಸಂದ್ರ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
‘ಗಲಭೆಯ ಪ್ರಮುಖ ಆರೋಪಿ, ಎಸ್​ಡಿಪಿಐ ಕಾರ್ಯಕರ್ತ ಖಾಲಿದ್​​ನನ್ನು ಬುಧವಾರ ತಡರಾತ್ರಿ ಡಿಜೆ ಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಡಿಜೆ ಹಳ್ಳಿಯ ರೋಷನ್​ನಗರ ನಿವಾಸಿ ಖಾಲೀದ್, ಎಸ್​ಡಿಪಿಐ ಕಾರ್ಯಕರ್ತರನ್ನು ಒಗ್ಗೂಡಿಸಿ ಮುಜಾಮಿಲ್ ಮತ್ತು ಅಯಾಜ್, ಆಫ್ನಾನ್ ಜೊತೆಗೂಡಿ ಗಲಭೆ ಮಾಡಿಸಿದ್ದ ಆರೋಪ ಎದುರಿಸುತ್ತಿದ್ದಾನೆ.
ಇದನ್ನೂ ಓದಿರಿಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್​ ಸಾವು
ಖಾಲಿದ್​ ​ನನ್ನು ತಡರಾತ್ರಿ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಖಾಲಿದ್​ ಜೊತೆ ಹಲವು ಪ್ರಮುಖ ರಾಜಕೀಯ ನಾಯಕರು ಸಂಪರ್ಕದಲ್ಲಿರುವ ಮಾಹಿತಿ ಸಿಕ್ಕಿದೆ. ಗಲಭೆ ನಡೆಯುವ ದಿನ ಖಾಲಿದ್ ಯುಟ್ಯೂಬ್ ಚಾನೆಲ್​ವೊಂದಕ್ಕೆ ಮಾತನಾಡಿರುವ ವಿಡಿಯೋ ವೈರಲ್​ ಆಗಿದೆ.
ಮೊನ್ನೆಯಷ್ಟೇ(ಮಂಗಳವಾರ) ಗಲಭೆಯ ರೂವಾರಿ ಎನ್ನಲಾದ ವಾಜೀದ್ ಸಿಸಿಬಿ ಬಲೆಗೆ ಬಿದ್ದಿದ್ದ. ಈತ​ನನ್ನು ತೀವ್ರ ವಿಚಾರಣೆ ನಡೆಸಿದಾಗ ತನ್ನ ಸಹಚರರ ಬಗ್ಗೆ ಈತ ಸುಳಿವು ನೀಡಿದ್ದ. ಈ ಆಧಾರದ ಮೇಲೆ ನಗರದ ರಹಸ್ಯ ಸ್ಥಳವೊಂದರಲ್ಲಿ ಅಡಗಿ ಕುಳಿತಿದ್ದ ತೌಸಿಫ್​​, ಫಾಜಿಲ್​, ಅಫ್ಜಲ್​ ಹಾಗೂ ಪಾಷಾ ಎಂಬುವವರನ್ನೂ ಬುಧವಾರ ಬಂಧಿಸಿದ್ದರು.
https://www.facebook.com/DighvijayNews/videos/300994217838857/?v=300994217838857
ಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
