ಕೊಡಗು:ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ಭೈರಸಂದ್ರದಲ್ಲಿ ಬೆಂಕಿ ಇಟ್ಟು ದಾಂಧಲೆ ನಡೆಸಿದ್ದು ಎಸ್​ಡಿಪಿಐನ ಪುಂಡರು. ಎಸ್​ಡಿಪಿಐ ಮತ್ತು ಪಿಎಫ್‌ಐ ಅನ್ನು ನಿಷೇಧಿಸಬೇಕು ಎಂದು ಸಂಸದ ಪ್ರತಾಪ್​ ಸಿಂಹ ಆಗ್ರಹಿಸಿದ್ದಾರೆ.
ಎಸ್​ಡಿಪಿಐ ನಿಷೇಧದಬಗ್ಗೆ ಗೃಹ ಸಚಿವರೇ ಸ್ಪಷ್ಟವಾಗಿ ಹೇಳಿದ್ದಾರೆ. ಮಂಗಳೂರು ಘಟನೆ ನಂತರ ಆ ಪ್ರಕ್ರಿಯೆ ಶುರುವಾಗಿದೆ. ಬೆಂಗಳೂರು ಗಲಭೆಯಲ್ಲಿ ಎಸ್​ಡಿಪಿಐ ಕುಕೃತ್ಯದ ಬಗ್ಗೆ ಪೂರಕ ದಾಖಲೆಗಳಿದ್ದು, ಈ ಸಂಘಟನೆ ನಿಷೇಧ ಆಗುತ್ತದೆ. ಗೃಹ ಸಚಿವರು ಮತ್ತು ಮುಖ್ಯಮಂತ್ರಿ ಮೇಲೆ ವಿಶ್ವಾಸ ಇದೆ ಎಂದು ಭಾಗಮಂಡಲದಲ್ಲಿ ಹೇಳಿದರು.
ಇದನ್ನೂ ಓದಿರಿಶಾಸಕನ ಮನೆ, ಪೊಲೀಸ್​ ಠಾಣೆಗೆ ಬೆಂಕಿ ಇಟ್ಟ ಗಲಭೆಕೋರರು ನೇರವಾಗಿ ಹೋಗಿದ್ದು ದರ್ಗಾಕ್ಕೆ!
ಕಾಂಗ್ರೆಸ್​ನ ಹಿರಿಯ ಮುಖಂಡ ದಿನೇಶ್ ಗುಂಡೂರಾವ್ ಶಿಕ್ಷಣವಂತರು, ಒಳ್ಳೆಯ ಹಿನ್ನೆಲೆ ಇರುವವರು. ಆದ್ರೆ ಯಾವಾಗಲೂ ಜನರ ದಾರಿ ತಪ್ಪಿಸುತ್ತಿರುತ್ತಾರೆ ಎಂದು ಪ್ರತಾಪ್​ ಸಿಂಹ ಕುಟುಕಿದರು. ಕಾಂಗ್ರೆಸ್ ಶಾಸಕರ ಮನೆ ಮೇಲೆ ಎಸ್​ಡಿಪಿಐ ದಾಂಧಲೆ ನಡೆಸಿದೆ. ಆದರೂ ದಿನೇಶ್ ಗುಂಡೂರಾವ್​ಗೆ ಆ ಸಂಘಟನೆ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ದರ್ದು ಏನಿದೆ? ಎಂದು ಪ್ರಶ್ನಿಸಿದ ಪ್ರತಾಪ್​ ಸಿಂಹ, ಅವರಿಗೆ ಮನೆಯಲ್ಲಿ ಒತ್ತಡ ಇರಬಹುದೇನೋ ಎಂದು ಲೇವಡಿ ಮಾಡಿದರು.
ಪುಂಡರ ದಾಂಧಲೆ ಬಗ್ಗೆ ಕೊನೆಗೂ ದೂರು ದಾಖಲಿಸಿದ ಅಖಂಡ ಶ್ರೀನಿವಾಸ್​ ಮೂರ್ತಿ, ಯಾರ ವಿರುದ್ಧ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
