ಬೆಂಗಳೂರು:ಆ.11ರ ರಾತ್ರಿ ರಾಜ್ಯ ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಸಂಬಂಧ ತನಿಖೆ ಚುರುಕುಗೊಂಡಿದ್ದು, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಹಿಂದಿರೋ ಮಾಸ್ಟರ್​ ಪ್ಲ್ಯಾನ್​ ಯಾರದ್ದು? ತಣ್ಣಗಿದ್ದ ಬೆಂಗಳೂರಿಗೆ ಬೆಂಕಿ ಇಟ್ಟದ್ದು ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಗೆರಿಲ್ಲಾ ಮಾದರಿಯಲ್ಲಿ ಅಟ್ಯಾಕ್​ ನಡೆಸಲು ಪುಂಡರು ತಯಾರಿ ಮಾಡಿಕೊಂಡಿದ್ದರು ಎಂಬ ಮಾಹಿತಿಯೂ ಲಭ್ಯವಾಗಿದೆ. ಅಲ್ಲದೆ ಪೊಲೀಸ್​ ಠಾಣೆಗೆ ಬೆಂಕಿ ಇಟ್ಟದ್ದು ಕಾಂಗ್ರೆಸ್ ಮುಖಂಡ ಎಂಬ ಆಘಾತಕಾರಿ ಅಂಶವೂ ಬಯಲಾಗಿದೆ.
ಶಾಸಕ ಅಖಂಡ ಶ್ರೀನಿವಾಸ್​ ಮೂರ್ತಿ ಅವರ ಸಂಬಂಧಿಯೊಬ್ಬ ಫೇಸ್​ಬುಕ್​ನಲ್ಲಿ ಇಸ್ಲಾಂ ಧರ್ಮಗುರುವಿನ ಬಗ್ಗೆ ಅವಹೇಳನಾಕಾರಿ ಪೋಸ್ಟ್ ಮಾಡಿದ್ದ ಬಗ್ಗೆ ದೂರು ಕೊಡುವ ನೆಪದಲ್ಲಿ ಡಿಜೆ ಹಳ್ಳಿ ಪೊಲೀಸ್​ ಠಾಣೆಗೆ ಬಂದಿದ್ದ ಉದ್ರಿಕ್ತರ ಗುಂಪು ಕ್ಷಣಾರ್ಧದಲ್ಲೇ ಪೊಲೀಸ್​ ಠಾಣೆ ಮುಂದೆ ಸಾವಿರಾರು ಜನರನ್ನು ಸೇರಿಸಿ ದಾಂಧಲೆ ನಡೆಸಿತ್ತು. ಈ ಗಲಭೆಯ ಕಿಂಗ್​ಪಿನ್​ ಕಾಂಗ್ರೆಸ್ ಮುಖಂಡ!
ಇದನ್ನೂ ಓದಿರಿಬೆಂಗಳೂರು ಗಲಭೆಕೋರರು ಬಳ್ಳಾರಿ ಜೈಲಿಗೆ ಶಿಫ್ಟ್
ಕಾಂಗ್ರೆಸ್​ನಲ್ಲಿ ಸಕ್ರಿಯನಾಗಿದ್ದ, ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ರಾಜ್ಯ ನಾಯಕರ ಜೊತೆ ಗುರುತಿಸಿಕೊಂಡಿದ್ದ ಫೈರೋಜ್ ಖಾನ್ ಎಂಬಾತನೇಪೊಲೀಸ್​ ಠಾಣೆಗೆ ಬೆಂಕಿಕಿಡಿ ಹೊತ್ತಿಸಿದ್ದು. ಗಲಭೆಯಲ್ಲಿ ಈತ ನೇರವಾಗಿ ಭಾಗಿಯಾಗದಿದ್ದರೂ ಮನೆಯಲ್ಲೇ ಕುಳಿತು ಗಲಭೆಗೆ ರೂಪುರೇಷೆ ಸಿದ್ಧಪಡಿಸಿದ್ದ. ವಾಟ್ಸ್ಆ್ಯಪ್​ ಮೂಲಕ ಎಲ್ಲರಿಗೂ ಪ್ರಚೋದನೆ ನೀಡಿದ್ದ.
ಗಲಭೆಯ ಪ್ರಮುಖ ಆರೋಪಿ ಮುಜಾಯಿದ್ ಪಾಷ ಬಂಧನದ ವೇಳೆ ಫೈರೋಜ್ ವಾಟ್ಸ್ಆ್ಯಪ್​ ಕಾಲ್ ಮಾಡಿರೋದು ಬೆಳಕಿಗೆ ಬಂದಿದೆ. ತಾಂತ್ರಿಕ ವಿಭಾಗದಿಂದ ಫೈರೋಜ್​ನ ಮೊಬೈಲ್ ಕಾಲ್ ಡೀಟೆಲ್ಸ್ ಚೆಕ್ ಮಾಡಿದಾಗ ಸಾಕಷ್ಟು ಮಂದಿಗೆ ಈತ ಕರೆ ಮಾಡಿರೋದು ಬೆಳಕಿಗೆ ಬಂದಿದೆ.
ಆರೋಪಿ ಫೈರೋಜ್ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೊತೆಯೂ ಫೋಟೋ ತೆಗೆಸಿಕೊಂಡಿದ್ದ. ಕರೊನಾ ವಾರಿಯರ್ಸ್ ಆಗಿ ಸಿವಿಲ್ ಡಿಫೆನ್ಸ್​ನಲ್ಲೂ ಆ್ಯಕ್ಟೀವ್ ಆಗಿದ್ದ. ಗಲಭೆಯ ಎಲ್ಲ ಪ್ರಮುಖ ಆರೋಪಿಗಳಿಗೂ ರಾಜಕೀಯ ನಂಟಿದೆ.
https://www.facebook.com/DighvijayNews/videos/755854148482775/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + fifteen =
Remember me
