ಬೆಂಗಳೂರು:ಗಲಭೆಕೋರರ ದಾಂಧಲೆಯಿಂದ ಹಿಂಸಾಚಾರಕ್ಕೆ ತಿರುಗಿದ್ದ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ಭೈರಸಂದ್ರ ಸಹಜ ಪರಿಸ್ಥಿತಿಗೆ ಬಂದಿದೆ. ತನಿಖೆ ವೇಳೆ ಹೊಸ ಹೊಸ ವಿಚಾರ ಬೆಳಕಿಗೆ ಬರುತ್ತಿದ್ದು, ವಿಡಿಯೋ ಫೂಟೇಜ್ ಸೇರಿ ವಿವಿಧ ದಾಖಲೆ ಪ್ರಕಾರ ಎಸ್​ಡಿಪಿಐ ಕೈವಾಡ ಇರುವುದು ಗೊತ್ತಾಗುತ್ತಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನಲ್ಲಿ ಗಲಭೆ ಪ್ರಕರಣ ಸಂಬಂಧದ ತನಿಖೆಯಲ್ಲಿ ಇತರೆ ಪ್ರಕರಣದ ಜತೆಗೂ ತಾಳೆ ನೋಡಲಾಗುತ್ತಿದೆ. ಷಡ್ಯಂತ್ರ ಬೇಧಿಸುವವರೆಗೆ ವಿಶ್ರಮಿಸಲ್ಲ. ಸಂಘಟನೆಯ ಹಲವು ಪದಾಧಿಕಾರಿಗಳನ್ನು ಬಂಧಿಸಲಾಗಿದೆ. ಗಲಭೆಯಲ್ಲಿ ಅವರ ಪಾತ್ರ ಕುರಿತು ವಿಚಾರಣೆ ಮಾಡಲಾಗುತ್ತಿದೆ. ಕೆಲವು ವಿಡಿಯೋ ಫೂಟೇಜ್ ಪ್ರಕಾರ ಅಕ್ಕಪಕ್ಕದ ಪ್ರದೇಶದಿಂದ ಬಂದಿರುವುದು ಕಂಡು ಬಂದಿದೆ ಎಂದು ವಿವರಿಸಿದರು.
ಇದನ್ನೂ ಓದಿರಿಬೆಂಗಳೂರಿನಲ್ಲಿ ಗಲಭೆ ಕುರಿತು ಜಮೀರ್​ ಅಹ್ಮದ್​ ಸರಣಿ ಟ್ವೀಟ್​
ಪೊಲೀಸರು ಪ್ರಾಣದ ಹಂಗು ತೊರೆದು ಕೆಲಸ ಮಾಡಿದ್ದಾರೆ. ಕೋವಿಡ್ ಜತೆಗೆ ಆತ್ಮಸ್ಥೈರ್ಯ ದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದ ಗೃಹ ಸಚಿವರು, ಬೆಂಗಳೂರಿನಲ್ಲಿ ಗಲಭೆ ಪ್ರಕರಣದ ಹಿಂದೆ ಯಾವ ಪಕ್ಷದ ಮತ್ತು ಸಂಘಟನೆಯ ಕೈವಾಡ ಇದೆ ಎಂಬುದನ್ನೂ ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ‌ಕೈಗೊಳ್ಳುತ್ತೇವೆ. ಎಸ್​ಡಿಪಿಐ ಮೇಲಿನ ಬೆಂಗಳೂರು, ಮಂಗಳೂರು ಇತರೆಕಡೆಯ ಪ್ರಕರಣದ ಮಾಹಿತಿ ಕಲೆ ಹಾಕಲಾಗುತ್ತಿದೆ. ಆ ಮಾಹಿತಿ ಆಧಾರದ‌ ಮೇಲೆ ಸಿಎಂ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಡಿಜೆ ಹಳ್ಳಿ ಗಲಭೆ: ಅವಹೇಳನಕಾರಿ ಪೋಸ್ಟ್ ಹಾಕಿದ್ದ ನವೀನ್​ ಬಿಜೆಪಿ ಅಭಿಮಾನಿ ಎಂದ ಡಿ.ಕೆ.ಶಿವಕುಮಾರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
