ಮಂಡ್ಯ:ಪಕ್ಕದಲ್ಲಿ ಬಂದ ಕಾಂಗ್ರೆಸ್​ ಕಾರ್ಯಕರ್ತನಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್​ ಆಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಈ ಘಟನೆ ನಡೆದಿದೆ. ಜಿ.ಮಾದೇಗೌಡರ ಆರೋಗ್ಯ ವಿಚಾರಿಸಲು ಕೆ.ಎಂ.ದೊಡ್ಡಿಗೆ ಡಿಕೆಶಿ ಆಗಮಿಸಿದ್ದರು. ಈ ವೇಳೆ ಕಾರ್ಯಕರ್ತ ಡಿಕೆಶಿ ಹಿಂಭಾಗ ಬರುತ್ತಿದ್ದ. ಹಿಂಭಾಗದಿಂದ ಡಿಕೆಶಿ ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಥಳಿಸಿದ್ದಾರೆ ಎನ್ನಲಾಗಿದೆ.
ಡಿ.ಕೆ. ಶಿವಕುಮಾರ್​ ಕೊಟ್ಟ ಏಟಿಗೆ ಕಾರ್ಯಕರ್ತರು ತಬ್ಬಿಬ್ಬಾಗಿದ್ದಾರೆ. ಅಲ್ಲದೆ, ಡಿಕೆಶಿ ವರ್ತನೆಯಿಂದ ಕಾರ್ಯಕರ್ತರಲ್ಲಿ‌ ಅಸಮಧಾನವೂ ಉಂಟಾಗಿದೆ. ಈ ಹಿಂದೆ ಸೆಲ್ಫಿಗೆ ಬರುವ ಕಾರ್ಯಕರ್ತರಿಗೂ ಡಿಕೆಶಿ ಬಾರಿಸಿದ್ದರು.
ಮೊಬೈಲ್​ನಲ್ಲಿ‌ ವಿಡಿಯೋ ಮಾಡ್ತಿರೋದನ್ನು ನೋಡಿ ಹೆಗಲ ಮೇಲೆ ಕೈ ಹಾಕ್ತಿಯಾ? ಕಾಮನ್‌ಸೆನ್ಸ್ ಇಲ್ವ ಎಂದು ಡಿಕೆಶಿ ಗದರಿದ್ದರು.(ದಿಗ್ವಿಜಯ ನ್ಯೂಸ್​)
ವಿವಾಹಿತೆಯನ್ನು ಮರುಮದ್ವೆಯಾದವನ ಕಣ್ಣು ಆಕೆಯ ಮಗಳ ಮೇಲೆ ಬಿತ್ತು: ಮುಂದಾಗಿದ್ದು ಊಹಿಸದ ಘಟನೆ!

ಅಕ್ರಮ ವಲಸಿಗರಿಗೆ ಆಶ್ರಯ ಕೊಟ್ರೆ ಅರೆಸ್ಟ್!; ಮನೆ ಮಾಲೀಕರ ಮೇಲೆ ಖಾಕಿ ಕಣ್ಣು

ಎರಡೇ ಸಾಕಾ? 3 ಬೇಕಾ?: ಲಸಿಕೆ ಡೋಸೇಜ್ ಬಗ್ಗೆ ಜಯದೇವ ಆಸ್ಪತ್ರೆ ಅಧ್ಯಯನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eleven =
Remember me
