ನವದೆಹಲಿ:ಇಂದು ಡಿ.ಕೆ ಶಿವಕುಮಾರ್​ ಸತತ ಮೂರು ಗಂಟೆಗಳ ಕಾಲ ನವದೆಹಲಿಯಲ್ಲಿ ಇಡಿ ವಿಚಾರಣೆ ಎದುರಿಸಿದ್ದು ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
‘ಇಡಿ ಕಡೆಯವರು ಮತ್ತಷ್ಟು ದಾಖಲೆಗಳನ್ನು ಕೇಳಿದ್ದಾರೆ. ಅದರೊಂದಿಗೆ ನನಗೆ ಮತ್ತು ನನ್ನ ತಮ್ಮನಿಗೆ ಸಂಬಂಧಿಸಿದ ದಾಖಲೆಗಳ ಮಾಹಿತಿ ಕೇಳಿದ್ದಾರೆ. ಈ ದಾಖಲೆಗಳನ್ನು ಸಲ್ಲಿಸಲು ಮೂರು ದಿನ ಕಾಲಾವಕಾಶ ನೀಡಿದ್ದಾರೆ. ಸಲ್ಲಿಸಲು ಹೇಳಿರುವ ದಾಖಲೆಗಳನ್ನು ಇಮೇಲ್‌ ಮುಖಾಂತರ ಕಳಿಸುತ್ತೇನೆ. ಸದ್ಯಕ್ಕೆ ಯಾವ ಯಾವ ದಾಖಲೆಗಳನ್ನು ಕೇಳಿದ್ದಾರೆ ಅಂತ ಹೇಳಲಾರೆ. ಇಂದು ಆದಾಯದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಬೇಕು, ತೋರಿಸ್ತೇನೆ’ ಎಂದು ವಿಚಾರಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಹಿಂದೆ ಡಿಕೆಶಿ ತಮ್ಮ ಟ್ವಿಟರ್​ ಖಾತೆಯಲ್ಲಿ ‘ನಾನು ಬಿಜೆಪಿ ಸೇರುತ್ತಿಲ್ಲ ಎಂಬ ಕಾರಣಕ್ಕೆ ಸರ್ಕಾರಿ ಸಂಸ್ಥೆಗಳು ನನ್ನ ವಿರುದ್ಧ ಪ್ರಕರಣ ದಾಖಲಿಸುತ್ತಿವೆ’ ಎಂದು ಬರೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವರದಿಗಾರರು ‘ಬಿಜೆಪಿಗೆ ಸೇರಲು ನಿಮಗೆ ಒತ್ತಡವಿದೆಯಾ?’ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆಶಿ ‘ಆ ವಿಚಾರದ ಬಗ್ಗೆ ಮಾತನಾಡಲು ಹೋದ್ರೆ ನನಗೆ ತಲೆ ಸುತ್ತುತ್ತದೆ. ಈಗ ಅದರ ಬಗ್ಗೆ ಮಾತನಾಡುವುದು ಬೇಡ. ಈಗ ಆ ವಿಚಾರ ಬಹಿರಂಗಗೊಳಿಸುವುದು ಸರಿಯಲ್ಲ. ನಾವು ಪರಿಸ್ಥಿತಿಯನ್ನು ಫೇಸ್ ಮಾಡಬೇಕು, ಫೇಸ್ ಮಾಡೋಣ’ ಎಂದು ಡಿಕೆ. ಶಿವಕುಮಾರ್ ಹೇಳಿದರು.
Government agencies filing cases against me just because I’m not joining BJP. I’m not so easy to intimidate. The answer to this political vendetta will come from the people of Karnataka, who are fed up of the BJP’s 40% commission government.#40PercentSarkar

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
