ಬೆಂಗಳೂರು:“ಮಿಸ್ಟರ್​ ಕಮಿಷನರ್​, ಬಿ ಕೇರ್​ ಫುಲ್​. ಬಿಜೆಪಿ ಏಜೆಂಟ್​ ರೀತಿ ನೀವು ಕೆಲಸ ಮಾಡಬಾರದು. ಇದನ್ನು ಮನವಿ ಎಂದುಕೊಳ್ಳಿ, ಎಚ್ಚರಿಕೆ ಅಂತಾದರೂ ಎಂದುಕೊಳ್ಳಿ. ನಿಷ್ಪಕ್ಷಪಾತವಾಗಿ ತನಿಖೆ ಮಾಡಿ, ಸರ್ಕಾರದ ತಾಳಕ್ಕೆ ಕುಣಿಯಬೇಡಿ. ಕಾಂಗ್ರೆಸ್​ ನಾಯಕರನ್ನು ಟಾರ್ಗೆಟ್​ ಮಾಡಿದರೆ ಈ ಡಿ.ಕೆ. ಶಿವಕುಮಾರ್​ ಸುಮ್ಮನೆ ಕೂರುವ ಜಯಮಾನ ಹೊಂದಿಲ್ಲ…” ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಅಬ್ಬರಿಸಿದ್ದಾರೆ.
ಕೆಪಿಸಿಸಿ ಗುರುವಾರ ಹಮ್ಮಿಕೊಂಡಿದ್ದ ಜನಧ್ವನಿ ಪ್ರತಿಭಟನೆ ವೇಳೆ ಮಾತನಾಡಿದ ಡಿಕೆಶಿ, ”ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್​ ಭೈರಸಂದ್ರ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್​ ಪಕ್ಷವನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಪೊಲೀಸರ ವಿರುದ್ಧ ಹೋರಾಟ ಆರಂಭ ಮಾಡಲಾಗುವುದು” ಎಂದು ಪೊಲೀಸ್ ಆಯುಕ್ತರನ್ನು ಎಚ್ಚರಿಸಿದರು.
ಇದನ್ನೂ ಓದಿರಿಆರೋಪಿ ನವೀನ್​ನನ್ನು ಗಲಭೆಕೋರರಿಂದ ಬಚಾವ್​ ಮಾಡಿದ್ದೇ ಅಖಂಡ ಶ್ರೀನಿವಾಸ ಮೂರ್ತಿ!
ಇಷ್ಟಕ್ಕೆ ಸುಮ್ಮನಾಗದ ಡಿಕೆಶಿ, ”ಗಲಭೆ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಆದರೆ, ಕಾಂಗ್ರೆಸ್​ನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್​ ಹಾಗೂ ನಾನು ಬಿಡೋಲ್ಲ. ಕಾಂಗ್ರೆಸ್​ ನಾಯಕರು ಇನ್ನೂ ಸತ್ತಿಲ್ಲ. ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ” ಎಂದರು. ”ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ಅಮಾಯಕರನ್ನು ಬಂಧಿಸುವುದು ಸರಿಯಲ್ಲ” ಎಂದು ಸರ್ಕಾರ ಹಾಗೂ ಪೊಲೀಸರಿಗೆ ಮತ್ತೆ ಎಚ್ಚರಿಕೆ ನೀಡಿದರು.
ಬೆಂಗಳೂರು ಗಲಭೆ ವಿಚಾರದಲ್ಲಿ ನಮಗೆ ಮ್ಯಾಜಿಸ್ಟ್ರೇಟ್​ ತನಿಖೆ ಬೇಕಿಲ್ಲ. ನಮ್ಮ ನಾಯಕರಾದ ಖರ್ಗೆ ಮತ್ತು ಸಿದ್ದರಾಮಯ್ಯ ಈಗಾಗಲೇ ಹೇಳಿರುವಂತೆ ಹೈಕೋರ್ಟ್​ ಜಡ್ಜ್​ ಅವರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್​ ವಿರುದ್ಧ ಅಖಂಡ ಶ್ರೀನಿವಾಸ್​ ಮೂರ್ತಿ ಆಕ್ರೋಶ… ಸುಟ್ಟಿರೋದು ನನ್ನ ಮನೆ, ಡಿಕೆಶಿಯದ್ದಲ್ಲ!

ಮಗನನ್ನು ನೋಡಲು ಹೊರಟ ದಂಪತಿ ದಾರಿಯಲ್ಲೇ ಹೆಣವಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × five =
Remember me
